ಕಥೆ, ವೈಚಾರಿಕ, ಧಾರ್ಮಿಕ, ಪ್ರವಾಸ ಸಾಹಿತ್ಯದ ಮೂಲಕ ಓದುಗರಿಗೆ ರುಕ್ಮಿಣಿ ಗಿರಿಮಾಜಿ ಚಿರಪರಿಚಿತ. ದಾಸ ಸಾಹಿತ್ಯ ಅಧ್ಯಯನ ಹಾಗೂ ವಿಚಾರ ಅಭಿವ್ಯಕ್ತಿಯಲ್ಲಿ ಅವರದ್ದು ವಿಶೇಷ ಕೊಡುಗೆ ಇದೆ. ಅಖಿಲ ಭಾರತದ ಮಾಧ್ವ ಮಹಾಮಂಡಲದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ರುಕ್ಮಿಣಿ ವರದ ಕೃತಿಯ ಮೂಲಕ ಹರಿದಾಸ ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ.