ಡಾ. ಆರ್.ಎನ್. ಶ್ರೀಲತಾ ಅವರು ಹುಟ್ಟಿದ್ದು ಹಾಸನ ಜಿಲ್ಲೆಯ ರುದ್ರಪಟ್ಟಣದಲ್ಲಿ. ತಂದೆ- ವಿದ್ವಾನ್ ಆರ್.ಕೆ. ನಾರಾಯಣಸ್ವಾಮಿ, ತಾಯಿ- ಸಾವಿತ್ರಮ್ಮ, ಮೈಸೂರು ವಿಶ್ವವಿದ್ಯಾಲಯದಲ್ಲಿ ಬಿ.ಎ. ಪದವಿ, ಮತ್ತು ಸಂಗೀತದಲ್ಲಿ ಎಂ.ಎ. ಪದವೀಧರರು. “ಕನಾಟಕ ಸಂಗೀತದಲ್ಲಿ ಮನೋಧರ‍್ಮ ಸಂಗೀತ ಪ್ರಕಾರಗಳು” ಮಹಾ ಪ್ರಬಂಧ ಮಂಡಿಸಿ ಮೈಸೂರು ವಿಶ್ವವಿದ್ಯಾಲಯದಿಂದ ಪಡೆದ ಡಾಕ್ಟರೇಟ್ ಪಡೆದಿದ್ದಾರೆ.
ಸಂಗೀತದಲ್ಲಿ ಡಾಕ್ಟರೇಟ್ ಪಡೆದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆ ಇವರದ್ದು. ಮೈಸೂರು ವಿಶ್ವವಿದ್ಯಾಲಯದಲ್ಲಿ 25 ವರ್ಷಗಳಿಂದಲು ಪದವಿ, ಸ್ನಾತಕ ಪದವಿಗಳಿಗೆ ಸಂಗೀತ ಶಾಸ್ತ್ರ, ಲಕ್ಷ್ಯಗಳ ಬೋಧನೆ ಮಾಡುತ್ತಿದ್ದಾರೆ.