ಹೆಣ್ಣಿನ ಅಂತರಾಳವನ್ನು ಅರಿತು, ಅದಕ್ಕೊಂದು ಸಾಹಿತ್ಯ ರೂಪಕ ಕೊಟ್ಟು ಕಾದಂಬರಿಗಳನ್ನು ರಚಿಸುತ್ತಿದ್ದರು ’ಪದ್ಮಾ ಎಂ.ಸಿ’ ಅವರು. ಅವರು 1946 ಮಾರ್ಚ್ 19ರಂದು ಬೆಂಗಳೂರಿನಲ್ಲಿ ಜನಿಸಿದರು. ’ಪ್ರೇಮಮಯಿ, ಸವತಿ ಕಸೂರಿ, ಸುಪ್ರಭಾತ, ಶಶಿಕಿರಣ, ಮಂಜು ಕರಗಿತು, ಪ್ರೇಮ ವಸಂತ, ಅಂತರಾಳ, ಸತಿ’ ಅವರ ಪ್ರಮುಖ ಸ್ತ್ರೀ ಸಂವೇದನೆಯುಳ್ಳ ಕಾದಂಬರಿಗಲು. “ಚಿಟ್ಟೆಯಾಗಿ ಹಾರಿತು” ಅವರ ಮೊದಲ ಕಥಾ ಸಂಕಲನ. ತಮಿಳಿನಿಂದ ಕನ್ನಡಕ್ಕೆ ’ದೀಪದ ಹುಳು’ ಕೃತಿಯನ್ನು ಅನುವಾದಿಸಿದ್ದಾರೆ.