ಬಾಲ ಪ್ರತಿಭೆ ನೇಹಾ ರಾಮಾಪೂರ ಮೂಲತಃ ಹುಬ್ಬಳ್ಳಿಯವರು. ತಂದೆ - ಲಿಂಗರಾಜ ರಾಮಾಪೂರ. ಬಾಲ್ಯದಿಂದಲೇ ಕಥೆ ಕೇಳುತ್ತಾ ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡ ನೇಹಾ ನಾಲ್ಕನೇ ತರಗತಿಯಲ್ಲಿರುವಾಗಲೇ ಪುಸ್ತಕ ಬರೆದಿದ್ದಾರೆ. ಬಾಲ್ಯದಿಂದ ಅಜ್ಜಿಯಿಂದ ಕತೆ ಕೇಳುತ್ತಿದ್ದ ನೇಹಾ ಅಪ್ಪ ಅಮ್ಮನ ಮಾರ್ಗದರ್ಶನದಲ್ಲಿ ಸ್ವತಃ ಕತೆ ರಚಿಸಿದ್ದಾರೆ. ಈಕೆಯ ಕತೆಗಳು ಚಿಲಿಪಿಲಿ ಪ್ರಕಾಶನದ ಗುಬ್ಬಚ್ಚಿ ಗೂಡು ಮಕ್ಕಳ ದಿನಪತ್ರಿಕೆಯಲ್ಲಿ ಇನ್ನೂ ಕೆಲವು ಕತೆಗಳು ಅಜೀಂ ಪ್ರೇಮ್ ಜಿ ಫೌಂಡೇಶನ್ ನ ಶಾಲ್ನುಡಿ ಇ ಪತ್ರಿಕೆಯಲ್ಲಿ ಪ್ರಕಟವಾಗಿವೆ. ‘ಮ್ಯಾಜಿಕ್ ಪೆನ್ಸಿಲ್’ ಎಂಬ ಕತಾ ಸಂಕಲವನ್ನು ಪ್ರಕಟಿಸಿದ್ದಾರೆ.