ಲೇಖಕ ಡಾ. ಮಿರ್ಜಾ ಬಷೀರ್ ಅವರು ತುಮಕೂರು ನಿವಾಸಿ. ‘ಬಟ್ಟೆಯಿಲ್ಲದ ಊರಿನಲ್ಲಿ’, ‘ಜಿನ್ನಿ’, ‘ಹಾರುವ ಹಕ್ಕಿ ಮತ್ತು ಇರುವೆ’ ಪ್ರಕಟಿತ ಕತಾಸಂಕಲನಗಳು. ಅನೇಕ ಕತೆಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮೂರು ಬಾರಿ ಪ್ರಜಾವಾಣಿ ದೀಪಾವಳಿ ಕತಾ ಸ್ಪರ್ಧೆ ಹಾಗೂ ಒಂದು ಬಾರಿ ಕನ್ನಡಪ್ರಭ ಸಂಕ್ರಾಂತಿ ಕತಾ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದಾರೆ. ಇವರ ಕೆಲವು ಕತೆಗಳು ಪದವಿ ತರಗತಿಗಳ ಪಠ್ಯಗಳಾಗಿವೆ. ಒಂದು ಕತೆಯು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ 9ನೇ ತರಗತಿಯ ಭಾಷಾ ಅಲ್ಪಸಂಖ್ಯಾತ ಕನ್ನಡ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ. ಇವರ ನಾಟಕ ‘ತಬ್ಬಲಿಗಳು’ ಕೃಷಿ ವಿಶ್ವವಿದ್ಯಾಲಯದ ಮೊದಲ ವರ್ಷದ ಪದವಿ ತರಗತಿಗೆ ಪಠ್ಯವಾಗಿದೆ.
ಪ್ರಶಸ್ತಿ-ಗೌರವ:ಶಿವಮೊಗ್ಗದ ‘ಕರ್ನಾಟಕ ಸಂಘದಿಂದ ‘ಜಿನ್ನಿ’ ಕಥಾಸಂಕಲನಕ್ಕೆ ‘ಲಂಕೇಶ್ ಪ್ರಶಸ್ತಿ’.(2017), ತುಮಕೂರಿನ ಅನನ್ಯ ಪ್ರಕಾಶನ,ದಿಂದ ‘ಕೆ. ಸಾಂಬಶಿವಪ್ಪ ಸ್ಮಾರಕ ಸಾಹಿತ್ಯ ಪ್ರಶಸ್ತಿ’ (2017) ಹೀಗೆ ಹಲವು ಗೌರವ ಪ್ರಶಸ್ತಿಗಳು ಸಂದಿವೆ.