ಲೇಖಕ ಮಂಜುನಾಥ್ ಚಾಂದ್ ಅವರು ಪತ್ರಕರ್ತರು. ಮೂಲತಃ ಕುಂದಾಪುರ ಸಮೀಪದ ಮರವಂತೆಯ ಮಗ್ಗುಲಲ್ಲಿ ಇರುವ ತ್ರಾಸಿ ಎಂಬ ಪುಟ್ಟ ಹಳ್ಳಿಯವರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರ ಭಾಷೆಯಲ್ಲಿ ಅವರು ಬರೆದಿರುವ ಅನೇಕ ಕಥೆಗಳು ಜನಮನ್ನಣೆ ಗಳಿಸಿವೆ. ‘ಅಮ್ಮ ಕೊಟ್ಟ ಜಾಜಿ ದಂಡೆ’, ಕದ ತೆರೆದ ಆಕಾಶ’, 'ಹೃದಯದ ಮಾತು' ಅವರ ಪ್ರಮುಖ ಕೃತಿಗಳು. ‘ಕಾಡ ಸೆರಗಿನ ಸೂಡಿ’ ಅವರ ಕಾದಂಬರಿ. ಇದಕ್ಕೆ ರಾಜಲಕ್ಷ್ಮಿ ಬರಗೂರು ಪುಸ್ತಕ ಪ್ರಶಸ್ತಿ ಲಭಿಸಿದ್ದು ಚಲನಚಿತ್ರ ಕೂಡ ಆಗಿದೆ.