ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕೆರೆಕೋಣದಲ್ಲಿ ಬಂಡಾಯ ಸಾಹಿತಿ ಡಾ. ಆರ್. ವಿ. ಭಂಡಾರಿ ಹಾಗೂ ಸುಬ್ಬಿ ದಂಪತಿಗಳ ಮಗಳಾಗಿ 1962 ರಲ್ಲಿ ಜನನ. ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಕನ್ನಡ ಉಪನ್ಯಾಸಕಿಯಾಗಿ ಕೆಲಸ ನಿರ್ವಹಿಸಿ ಈಗ ವಿಶ್ರಾಂತ ಜೀವನ.
ಪುಸ್ತಕಗಳು: 'ಹರಿದ ಸ್ಕರ್ಟಿನ ಹುಡುಗಿ', 'ಕಡಲು ಕಳೆದಿದೆ', 'ಮೌನ ಗರ್ಭದ ಒಡಲು' (ಕವನ ಸಂಕಲನ), 'ನೀನುಂಟು ನಿನ್ನ ರೆಕ್ಕೆ ಉಂಟು' (ಸಂಪಾದಿತ ದಶಕದ ಮಹಿಳಾ ಕಾವ್ಯ), 'ಆಗೇರ ಮಹಿಳಾ ಸಂಸ್ಕೃತಿ' (ಸಾಹಿತ್ಯ ಅಕಾಡೆಮಿ ಪ್ರಕಟಣೆ), 'ಪಿಸು ದನಿ' (ಲೇಖನ ಸಂಕಲನ), 'ಗುಲಾಬಿ ಕಂಪಿನ ರಸ್ತೆ'(ಕಥಾ ಸಂಕಲನ ಬಿಡುಗಡೆಗೆ ಸಿದ್ಧವಾಗಿದೆ)
ಪ್ರಶಸ್ತಿಗಳು: ದಿನಕರ ದೇಸಾಯಿ ರಾಷ್ಟ್ರೀಯ ಕಾವ್ಯ ಪ್ರಶಸ್ತಿ, ಹರಿಹರಶ್ರೀ ಕಾವ್ಯ ಪ್ರಶಸ್ತಿ, ಮೋಹನ ಕುರಡಗಿ ಕಾವ್ಯ ಪ್ರಶಸ್ತಿ, ಅತ್ತಿಮಬ್ಬೆ ಪ್ರತಿಷ್ಠಾನ ಕಾವ್ಯ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಕೆ.ಟಿ. ಬನಶಂಕರಮ್ಮ ಪ್ರಶಸ್ತಿ.
ಆಸಕ್ತ ಕ್ಷೇತ್ರ: ಮಹಿಳಾ ಸಂಘಟನೆ, ರಂಗಭೂಮಿ, ಸಂಗೀತ, ತಾಳಮದ್ದಳೆ ಅರ್ಥಗಾರಿಕೆ.
ಕೆಲಸ ನಿರ್ವಹಿಸಿದ ಕ್ಷೇತ್ರ: ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರು (2015 ರಿಂದ 2017), 'ಸಹಯಾನ' (ಡಾ. ಆರ್. ವಿ. ಭಂಡಾರಿ ನೆನಪಿನ ಸಂಸ್ಕೃತಿ ಅಧ್ಯಯನ ಕೇಂದ್ರ) ಕೆರೆಕೋಣ, ಚಿಂತನ ಉತ್ತರ ಕನ್ನಡ, ಬಂಡಾಯ ಪ್ರಕಾಶನ, ಚಿಂತನ ರಂಗ ಅಧ್ಯಯನ ಕೇಂದ್ರ ಮುಂತಾದ ಸಂಸ್ಥೆಗಳಲ್ಲಿ ಕ್ರಿಯಾಶೀಲ.