ಎಂ.ಎಸ್. ಪ್ರಭಾಕರ ಅವರು ಕಾಮರೂಪಿ ಎಂಬ ಕಾವ್ಯನಾಮದಿಂದ ನಾಡಿನ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಅವರ ಪೂರ್ಣ ಹೆಸರು ಮೊಟ್ಟಹಳ್ಳಿ ಸೂರಪ್ಪ ಪ್ರಭಾಕರ. ಹುಟ್ಟಿದ್ದು 1936ರಲ್ಲಿ. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ ಆಂಗ್ಲ ಸಾಹಿತ್ಯದಲ್ಲಿ ಪದವಿ ಪಡೆದ ಇವರು ತಮ್ಮ ಪಿಎಚ್.ಡಿ. ಪದವಿಯನ್ನು ಕರ್ನಾಟಕ ವಿಶ್ವವಿದ್ಯಾಲಯದಿಂದ ಪಡೆದರು. 1962 ರಿಂದ 1965ರವರೆಗೆ ಗೌಹಾತಿ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ರೀಡರ್ ಆಗಿದ್ದ ಇವರು, 1975ರಿಂದ 1983ರವರೆಗೆ `ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ ವಾರಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದರು. ನಂತರ ಹಿಂದೂ ಪತ್ರಿಕೆಯಲ್ಲಿ ಈಶಾನ್ಯ ಭಾರತ ಹಾಗೂ ದಕ್ಷಿಣ ಆಫ್ರಿಕದ ವಿಶೇಷ ಬಾತ್ಮೀದಾರರಾಗಿ ಸೇವೆ ಸಲ್ಲಿಸಿ 2002 ರಲ್ಲಿ ನಿವೃತ್ತರಾದರು. ಪ್ರಸ್ತುತ ಕೋಲಾರದಲ್ಲಿ ನೆಲೆಸಿರುವ ಇವರು "ಕಾಮರೂಪಿ"ಬ್ಲಾಗ್ ಮೂಲಕ ತಮ್ಮ ಬರವಣಿಗೆ ಕೃಷಿ ಮಾಡುತ್ತಿದ್ದಾರೆ.
ಅವರ ಪ್ರಕಟಿತ ಕೃತಿಗಳು- ಒಂದು ತೊಲ ಪುನುಗು ಮತ್ತು ಇತರ ಕತೆಗಳು', ಕುದುರೆ ಮೊಟ್ಟೆ' , ಅಂಜಿಕಿನ್ಯಾತಕಯ್ಯೊ', ಕಾಮರೂಪಿ ಸಮಗ್ರ - ಕಾಮರೂಪಿಯವರ ಕಥೆ, ಕಾದಂಬರಿ, ಕವನ, ಬರಹ, ಬ್ಲಾಗ್ ಬರಹಗಳನ್ನೊಳಗೊಂಡ ಕೃತಿ.