ಕಲ್ಪನಾ ಶಂಕರ ಭಟ್ಟ ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಕರ್ಕಿ ಗ್ರಾಮದಲ್ಲಿ 1969 ಏಪ್ರಿಲ್ 24ರಲ್ಲಿ ಜನಿಸಿದರು. ತಂದೆ ಶಂಕರ ಭಟ್ಟ, ತಾಯಿ ಗಿರಿಜಾ ಭಟ್ಟ. ಬಿ.ಎ ಪದವಿ ಹಾಗೂ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ಕಳೆದ 25ವರ್ಷಗಳಿಂದ ಬರಹಗಳನ್ನು ರಚಿಸುತ್ತಿದ್ದಾರೆ. ಪ್ರಸ್ತುತ ಬೆಂಗಳೂರಿನ ನಿವಾಸಿ. ಇವರ ಕಾವ್ಯನಾಮ ಕಲ್ಪನಾ ಅರುಣ. ಹವ್ಯಕ ಭಾಷೆಯಲ್ಲೂ ಪರಿಣಿತಿ ಹೊಂದಿರುವ ಅವರು ಕತೆ, ಕವಿತೆ ರಚಿಸುವುದ ಹವ್ಯಾಸ. ಗ್ಲೊಬಲ್ ಪೀಸ್ ಯುನಿವರ್ಸಿಟಿಯು ಅವರ ಸಾಹಿತ್ಯ ಕ್ಷೇತ್ರದ ಸಾಧನೆಗೆ ಗೌರವ ಡಾಕ್ಟರೆಟ್ ನೀಡಿ ಗೌರವಿಸಿದೆ.
ಅನೇಕ ಸ್ಮರಣ ಸಂಚಿಕೆಗಳಲ್ಲಿ ಲೇಖನ ಕವಿತೆ, ಒಪ್ಪಣ್ಣ.ಕಾಮ್ ಹವ್ಯಕ ಪತ್ರಿಕೆ ಮುಂತಾದ ಕಡೆಗಳಲ್ಲಿ ಅವರ ಬರೆಹಗಳು ಪ್ರಕಟವಾಗಿವೆ. ಪಾಕಶಾಶ್ತ್ರ, ಶಿಶು ಸಾಹಿತ್ಯದಲ್ಲಿ ಆಸಕ್ತರು. ಹೊಸ್ತಿಲು (ಕಾವ್ಯ) , ವಸಂತ ಲಾಸ್ಯ (ಹನಿಗವನ) , ಗೃಹಸಂಜೀವಿನಿ (ಮನೆಮದ್ದುಗಳ ಸಂಗ್ರಹ), ಕರಿದ ತಿಂಡಿಗಳು, ಪರಿಪೂರ್ಣ ಸಸ್ಯಾಹಾರಿ ಅಡುಗೆ ಪುಸ್ತಕ, ಹಪ್ಪಳ ಚಕ್ಕುಲಿ ಸಂಡಿಗೆಗಳು (ಪಾಕಶಾಸ್ತ್ರ), ಹಿಮಗಿರಿಯೊಳು ಬೂದಿ ಮುಚ್ಚಿದ ಕೆಂಡ ( ಕಥಾ ಸಂಕಲನ), ಮಕ್ಕಳ ಹಾಡುಗಳು (ಮಕ್ಕಳ ಸಾಹಿತ್ಯ). 2010ರಲ್ಲಿ ಭಾರತೀಯ ಕರ್ನಾಟಕ ಸಂಘದಿಂದ ‘ಗೌರಿರಾಮಯ್ಯ ದತ್ತಿನಿಧಿ ಪ್ರಶಸ್ತಿ’ ದೊರೆತಿದೆ.