ಕೆ. ವಿ. ಅಯ್ಯರ್ ಜನಿಸಿದ್ದು ಜನವರಿ 8, 1894ರಲ್ಲಿ. ಮೂಲತಃ ಕೋಲಾರ ಜಿಲ್ಲೆಯ ದೇವಸಮುದ್ರದವರು. ಬೆಂಗಳೂರಿನ ಕೋಟೆ ಬಳಿಯ ಎ.ವಿ.ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ, ವೆಸ್ಲಿಯನ್ ಮಿಷನ್ ಶಾಲೆಯಲ್ಲಿ ಪ್ರೌಢಶಿಕ್ಷಣ ಪಡೆದರು. ಕಡು ಬಡತನದ ಮಧ್ಯೆ ಪದವಿ ಪಡೆಯಲಿಲ್ಲ. ಆದರೆ, ಅಮೆರಿಕದ PHYSICAL CULTURE NATUROPATHYಯ ಅಕಾರ ಪತ್ರ ಪಡೆದು ತಾವೇ ಪ್ರೊಫೆಸರ್ ಎಂದು ಕರೆದುಕೊಂಡರು. ಛಾಯಾಚಿತ್ರಗ್ರಾಹಕರು. ರೇಡಿಯೋ ರಿಪೇರಿ, ಸ್ವರಲೇಖನ ಯಂತ್ರ ರಿಪೇರಿ ನಿಪುಣತೆ.ಇತ್ತು. ಉತ್ತಮ ವ್ಯಾಯಾಮ ಶಿಕ್ಷಕರು. ಮಹಾರಾಜ ಕೃಷ್ಣರಾಜ ಒಡೆಯರು ಇವರ ವ್ಯಾಯಾಮ ಕಲೆಗೆ ಮಾರು ಹೋಗಿದ್ದರು. ಕೈಲಾಸಂ ಅವರು ಇವರಿಗೆ ಸಾಹಿತ್ಯದ ಗೀಳು ಹಚ್ಚಿದರು. ರೀಡರ್ಸ್ ಡೈಜಿಸ್ಟ್ ನಲ್ಲಿ ಬಂದ ಒಂದು ಸಣ್ಣ ಸುದ್ದಿಯ ತುಣುಕಿನಿಂದ ಪ್ರೇರಿತವಾಗ ಅವರು ರೂಪದರ್ಶಿ ಕಾದಂಬರಿ ಬರೆದ. ನಂತರ ಲೀನಾ ಕಾದಂಬರಿ ಬರೆದರು. ಶಾಂತಲಾ ಸಹ ಕಾದಂಬರಿ. ‘ಸಮುದ್ಯತಾ” ಕಥಾಸಂಕಲನ. ದೈಹಿಕ ಶಿಕ್ಷಣ ಕುರಿತು ‘Chemical change in Physical Figure’, ‘Physic and Figure’, ‘Surya Namaskar’, ‘Perfect Strength’, ‘How to obtain strength’ ಮುಂತಾದ ಕೃತಿಗಳನ್ನು ಬರೆದಿದ್ದು, ಇವರಿಗೆ (1979) ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಸಂದಿದೆ. 1994ರಲ್ಲಿ ಪ್ರೊ. ಕೆ.ವಿ.ಅಯ್ಯರ್ ಸಂಸ್ಮರಣಾ ಗ್ರಂಥ ಪ್ರಕಟಗೊಂಡಿದೆ.. 03-01-1980 ರಂದು ನಿಧನರಾದರು.