About the Author

ಕೆ.ಪಿ. ಮೃತ್ಯುಂಜಯ ಅವರು ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಡಿ.ಕಲ್ಕೆರೆಯವರು. ತಂದೆ - ಪುಟ್ಟಬಸವಾಚಾರ್ ಕೆ. ತಾಯಿ- ಗಂಗಮ್ಮ. ಕನ್ನಡ ಉಪನ್ಯಾಸಕರಾಗಿದ್ದಾರೆ. ಒಂದು ಅನುರಾಗಕ್ಕಾಗಿ ಎಷ್ಟೆಲ್ಲಾ, ಮರ್ತ್ಯ ಮೀರದ ಮಾತು, ಎಲೆ ಎಸೆದ ಮರ, ಅವರವರ ಸಾವು, ದೊಡ್ಡಮ್ಮ ದೇವತೆಗೆ ಕಣ್ಣು ಧರಿಸಿದ ಹೊತ್ತು, ನನ್ನ ಶಬ್ದ ನಿನ್ನಲಿ ಒಂದು ಅವರ ಪ್ರಕಟಿತ ಕವನಸಂಕಲನಗಳು. ಇವರ ಮೊದಲ ಕವನಸಂಕಲನಕ್ಕೆ 1994ರಲ್ಲಿ ಕಾಂತಾವರ ಕನ್ನಡ ಸಂಘದ ಮುದ್ದಣ್ಣ ಕಾವ್ಯ ಪುರಸ್ಕಾರ, ಎರಡನೇ ಕವನಸಂಕಲನಕ್ಕೆ ಡಾ. ದಿನಕರ ದೇಸಾಯಿ ಕಾವ್ಯ ಪುರಸ್ಕಾರ, ಮೂರನೇ ಕೃತಿಗೆ ವೀಚಿ ಸಾಹಿತ್ಯ ಪ್ರಶಸ್ತಿ, ನಾಲ್ಕನೇ  ಕೃತಿಗೆ ಎಂ.ಜಿ. ರಂಗನಾಥನ್ ಸ್ಮಾರಕ ಪುಸ್ತಕ ಬಹುಮಾನ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ಲಭಿಸಿವೆ. 

ಕೆ.ಪಿ. ಮೃತ್ಯುಂಜಯ