ಎಚ್.ಎಸ್. ಕೃಷ್ಣಸ್ವಾಮಿ ಅಯ್ಯಂಗಾರ್ಯರು ಮೈಸೂರಿನವರು. ಕೃಷ್ಣರಾಜನಗರ ತಾಲ್ಲೂಕಿನ ಹಳೆಯೂರು ಗ್ರಾಮದವರು. ತಂದೆ ಎಚ್. ಶ್ರೀನಿವಾಸ ಅಯ್ಯಂಗಾರ್, ತಾಯಿ ಅಲಮೇಲಮ್ಮ. ಜನನ 06-08-1920. ಬೆಂಗಳೂರು ಸೆಂಟ್ರಲ್ ಕಾಲೇಜಿನಿಂದ ಬಿ.ಕಾಂ. ಪದವೀಧರರು. ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಎಂ.ಎ. (ಅರ್ಥಶಾಸ್ತ್ರ) ಪದವಿ. ಪತ್ರಿಕೋದ್ಯಮ ಮತ್ತು ಅಧ್ಯಾಪಕ ವೃತ್ತಿ. ಮೈಸೂರಿನ ಡಿ. ಬನುಮಯ್ಯ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದರು. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಕನ್ನಡ ವಿಶ್ವಕೋಶದ ಮಾನವಿಕ ವಿಭಾಗದ ಸಂಪಾದಕರಾಗಿದ್ದರು. ಬ್ಯಾಂಕಿಂಗ್ ಪ್ರಪಂಚ ತ್ರೈಮಾಸಿಕ ಪತ್ರಿಕೆಯ ಸಂಪಾದಕರು.
ಕಾದಂಬರಿಗಳು-ಮುಕ್ತಿಮಾರ್ಗ, ಬಯಕೆಯ ಬಲೆ, ಕುರುಕ್ಷೇತ್ರ. ವ್ಯಕ್ತಿಚಿತ್ರ-ಶ್ರೀರಾಮಾನುಜ, ಎತ್ತರದ ವ್ಯಕ್ತಿಗಳು, ಡಾ. ವಿ.ಕೆ.ಆರ್.ವಿ. ರಾವ್, ಬದುಕು-ಬೆಳಕು, ಬೆಳಕು ಚೆಲ್ಲಿದ ಬದುಕು, ಲಾಲ್ ಬಹದ್ದೂರ್ ಶಾಸ್ತ್ರಿ, ಬಿ.ಆರ್. ಅಂಬೇಡ್ಕರ್, ಬಿ.ಆರ್. ಪಂತುಲು, ಯಮುನಾಚಾರ್ಯ, ಜಯಪ್ರಕಾಶ್ ನಾರಾಯಣ್.ಕವನ ಸಂಕಲನ-ದವನದಕೊನೆ. ಲಲಿತ ಪ್ರಬಂಧ-ಕಳ್ಳ ಹೊಕ್ಕ ಮನೆ, ಜೇಡರ ಬಲೆ, ಸುರಹೊನ್ನೆ, ಚಂದ್ರಕಾಂತಿ, ಮೇಘಲಹರಿ, ಹವಳದ ಸರ. ಸಂಪಾದಿತ ಕೃತಿಗಳು : ಅರ್ಥಶಾಸ್ತ್ರ, ವಾಣಿಜ್ಯಶಾಸ್ತ್ರ-ವ್ಯಾವಹಾರಿಕ ಕನ್ನಡ, ವಾಣಿಜ್ಯ ಶಾಸ್ತ್ರ ಪರಿಚಯ, ಬ್ಯಾಂಕಿಂಗ್ ಹೆಜ್ಜೆ ಗುರುತುಗಳು.
ಗೌರವ ಪ್ರಶಸ್ತಿಗಳು-ಹಾ.ಮಾ.ನಾ. ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಮೈಸೂರು ವಿ.ವಿ. ಗೌರವ ಡಾಕ್ಟರೇಟ್, ಕ.ಸಾ.ಪ. ಭಾಸ್ಕರರಾಯ ಸ್ಮಾರಕ ಬಹುಮಾನ. ಷಷ್ಟ್ಯಬ್ದಿಗ್ರಂಥ-ಎಚ್ಚೆಸ್ಕೆಯವರ ಆಯ್ದ ಬರಹಗಳು. 75ರ ಅಭಿನಂದ ಗ್ರಂಥ ‘ಸಮದರ್ಶಿ.’ 29-08-2008 ರಂದು ನಿಧನರಾದರು.