ಭಾರತಿ ಭಟ್ ಅವರು ಮೂಲತಃ ದಕ್ಷಿಣ ಕನ್ನಡದ ಪುತ್ತೂರಿನ ಕೊಂಬೆಟ್ಟಿನವರು. ಪುತ್ತೂರಿನಲ್ಲೇ ಶಾಲಾ ವಿದ್ಯಾಭ್ಯಾಸವನ್ನು ಪೂರೈಸಿ ಬಳಿಕ 1963ರಲ್ಲಿ ಡಿ.ಎನ್. ಶಂಕರ ಭಟ್ಟರನ್ನು ವಿವಾಹವಾದರು. ಮುಂದೆ ಪುಣೆಯಿಂದ ಜೀವನ ಶುರುವಾಗಿ ಮೈಸೂರಿನವರೆಗೆ ಹಲವಾರು ಊರುಗಳಲ್ಲಿ ನಡೆಯಿತು. ಬರವಣಿಗೆ ಮೇಲೆ ಅಪಾರವಾದ ಆಸಕ್ತಿಯನ್ನು ಬೆಳೆಸಿಕೊಂಡಿದ್ದ ಭಾರತಿ ಭಟ್ ಅವರು ಆ ಅನುಭವಗಳನ್ನು ಒಟ್ಟುಸೇರಿಸಿ ʻಬದುಕು ಬರಹʼ ಪುಸ್ತಕದ ಮೂಲಕ ಹೊರತಂದಿದ್ದಾರೆ.