ಅನುವಾದಕ, ಕಾದಂಬರಿಕಾರ ಬಿ. ವೆಂಕಟಾಚಾರ್ಯ ಅವರು ಕನ್ನಡಿಗರಲ್ಲಿ ಸಾಹಿತ್ಯಾಭಿರುಚಿ ಬೆಳೆಸಲು ಕಾರಣರಾದವರು. ಚಾಮರಾಜನಗರ ತಾಲ್ಲೂಕು ಕೊಳ್ಳೆಗಾಲದಲ್ಲಿ 1845ರಲ್ಲಿ ಜನಿಸಿದ ಅವರು ಸಂಸ್ಕೃತ, ಕನ್ನಡ, ಇಂಗ್ಲಿಷ್ ಹಾಗೂ ಬಂಗಾಳಿ ಭಾಷೆಗಳಲ್ಲಿ ಪಾಂಡಿತ್ಯ ಪಡೆದಿದ್ದರು. ಬಂಗಾಳಿ ಬರಹಗಾರ ಬಂಕಿಮಚಂದ್ರರ ಕಾದಂಬರಿಗಳನ್ನು ಕನ್ನಡ ಜನತೆಗೆ ಪರಿಚಯಿಸಿದವರಲ್ಲಿ ಇವರೇ ಮೊದಲಿಗರು.
ಕನ್ನಡಿಗರ ವಾಚನ ಅಭಿರುಚಿಗಳು ಬೆಳೆಯಲು ಗಟ್ಟಿಯಾದ ತಳಹದಿ ಹಾಕಿದ ಅವರು ಅಪ್ರತ್ಯಕ್ಷ ಗುರುವಾದ ಈಶ್ವರಚಂದ್ರ ವಿದ್ಯಾಸಾಗರರ `ಭ್ರಾಂತಿವಿಲಾಸ'ವೇ ಅವರು ಬಂಗಾಳಿಯಿಂದ ಕನ್ನಡಕ್ಕೆ ಅನುವಾದಿಸಿದರು. ಇದು ಬಂಗಾಳಿಯಿಂದ ಕನ್ನಡಕ್ಕೆ ಅವರು ಅನುವಾದಿಸಿದ ಮೊದಲ ಗ್ರಂಥ. ಈ ಗ್ರಂಥವನ್ನು ಮದರಾಸು ವಿಶ್ವವಿದ್ಯಾಲಯ ಪಠ್ಯಪುಸ್ತಕವಾಗಿ ಅಂಗೀಕರಿಸಿದ್ದರಿಂದ ಉತ್ಸಾಹಗೊಂಡ ಅವರು ವಿದ್ಯಾಸಾಗರರ 'ಸೀತಾ ವನವಾಸ', 'ಶಾಕುಂತಲ' ಕಾದಂಬರಿಗಳನ್ನು ಕನ್ನಡಕ್ಕೆ ತಂದರು. ದೇವಿ ಚೌಧುರಾಣಿ' ದುರ್ಗೇಶ ನಂದಿನಿ', 'ನವಾಬ ನಂದಿನಿ', 'ಆನಂದ ಮಠ', 'ವಿಷವೃಕ್ಷ' ಮುಂತಾದ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. 'ಅವಕಾಶ ತೋಷಿಣ' ಎಂಬ ಮಾಸ ಪತ್ರಿಕೆ ಆರಂಭಿಸಿ ಅದರಲ್ಲಿ ಕತೆ ಲಘು ಲೇಖನಗಳನ್ನು ಬರೆಯುತ್ತಿದ್ದರು. 60 ಗ್ರಂಥಗಳನ್ನು ಪ್ರಕಟ ಮಾಡಿದ್ದಾರೆ. 1941 ಜೂನ್ 26 ರಂದು ಅಸು ನೀಗಿದರು.