About the Author

ಬಿ. ಪಿ. ಕಟ್ಟಿಮನಿ ಅವರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ವಡವಡಗಿ(ಜನನ: 21-07-1992)  ಗ್ರಾಮದವರು. ತಂದೆ ಪರಪ್ಪ ಕಟ್ಟೀಮನಿ, ತಾಯಿ ಕಾಂತಮ್ಮ. ಎಂ.ಎಸ್.ಸಿ ಹಾಗೂ ಬಿ.ಎಡ್ ಪದವೀಧರರು.  ರಾಯಚೂರು ಜಿಲ್ಲೆಯ ಸಿಂಧನೂರಿನ ಸರಕಾರಿ ಪದವಿ ಮಹಾವಿದ್ಯಾಲಯದ ಭೌತಶಾಸ್ತ್ರ ಉಪನ್ಯಾಸಕರು. ಸದ್ಯ ಅವರು ಮಸ್ಕಿ ತಾಲೂಕಿನ ಬಳಗಾನೂರು ಗ್ರಾಮದಲ್ಲಿ ವಾಸವಾಗಿದ್ದಾರೆ. ನೀನ್ಯಾರ..? (ಕವನ ಸಂಕಲನ-2020) ಎಂಬುದು ಇವರ ಮೊದಲ ಕೃತಿ. 

 

ಬಿ.ಪಿ. ಕಟ್ಟಿಮನಿ

(21 Jul 1992)