ಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಗೊಳಸಂಗಿ ಎಂಬ ಹಳ್ಳಿಯವರಾ ಅರ್ಜುನ ಗೊಳಸಂಗಿ ಅವರು ಕವಿ-ಲೇಖಕ. 1966ರ ಜೂನ್ 10 ರಂದು ಜನಿಸಿದರು. ತಂದೆ ಯಲ್ಲಪ್ಪ ತಾಯಿ ಮಲಕಮ್ಮ. ಕೃಷಿಕ ಕುಟುಂಬಕ್ಕೆ ಸೇರಿದ ಅರ್ಜುನ ಅವರು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಕನ್ನಡ ಎಂ.ಎ ಮತ್ತು ಪಿಎಚ್.ಡಿ. ಪದವಿ ಪಡೆದರು.
ಬಸವೇಶ್ವರ, ಡಾ. ಅಂಬೇಡ್ಕರ್ ಮತ್ತು ಭಾಷಾವಿಜ್ಞಾನದಲ್ಲಿ ಡಿಪ್ಲೋಮಾ ಪದವಿಗಳನ್ನು ಪಡೆದಿರುವ ಅವರು ಗದಗ ಸಹಕಾರಿ ಜವಳಿ ಗಿರಣಿಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರಾಗಿದ್ದಾರೆ.
ಕಾವ್ಯ, ಕತೆ, ವಿಮರ್ಶೆ ಸಂಶೋಧನೆ, ಸಾಂಸ್ಕೃತಿಕ ಅಧ್ಯಯನ, ಜಾನಪದ ಒಳಗೊಂಡಂತೆ ಇದುವರೆಗೆ 25ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಸಂಘಟನೆಯಲ್ಲಿ ಆಸಕ್ತರಾಗಿರುವ ಅರ್ಜುನ ಅವರು ಅಖಿಲ ಭಾರತ ದಲಿತ ಸಾಹಿತ್ಯ ಪರಿಷತ್ತನ್ನು ಹುಟ್ಟು ಹಾಕಿ ಅದರ ಅಧ್ಯಕ್ಷರಾಗಿದ್ದಾರೆ. ಅರ್ಜುನ ಅವರಿಗೆ ಪ್ರೊ. ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನದ 2018ನೆಯ ಸಾಲಿನ 'ಪ್ರೊ. ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ' ಸಂದಿದೆ.