ಲೇಖಕಿ,ಯುವ ಕವಯಿತ್ರಿ ಅರ್ಚನಾ ಎನ್ ಪಾಟೀಲ ಮೂಲತಃ ಹಾವೇರಿ ಜಿಲ್ಲೆಯವರು. ಇಂಜಿನಿಯರಿಂಗ್ ಇನ್ ಕಂಪ್ಯೂಟರ್ ಸೈನ್ಸ ಪದವೀಧರರು. ಪ್ರಸ್ತುತ ಸಾಫ್ಟ್ವೇರ್ ಇಂಜಿನಿಯರ್ ಆಗಿ ಬೆಂಗಳೂರಿನಲ್ಲಿ ವೃತ್ತಿ ನಿರ್ವಹಿಸುತ್ತಿದ್ದಾರೆ.ಸಾಹಿತ್ಯ,ಸಂಘಟನೆ,ಕಥೆ,ಕವನ,ಕಾದಂಬರಿ,ಲೇಖನಗಳನ್ನು ಬರೆಯುವುದು ಮತ್ತು ರಂಗಭೂಮಿಯ ಕಲಾವಿದೆಯಾಗಿಯೂ ಬಣ್ಣ ಹಚ್ಚಿದ್ದಾರೆ.ಬಡಮಕ್ಕಳಿಗಾಗಿ ರಚಿಸಲಾದ ಉಚಿತ ಗ್ರಂಥಾಲಯ ನಿರ್ಮಿಸಲು 2000 ಕ್ಕೂ ಹೆಚ್ಚು ಹಳೆಯ ಪುಸ್ತಕಗಳ ಸಂಗ್ರಹಿಸಿ, ಪುಸ್ತಕ ಜೋಳಿಗೆ ಅಭಿಯಾನಕ್ಕೆ ರೂವಾರಿಯಾಗಿದ್ದಾರೆ.
ಕೃತಿಗಳು: ನನ್ನಲ್ಲಿ ನನ್ನ ಅರಸುತ ( ಕವನ ಸಂಕಲನ) ನೀ ಹೋಗುವ ಮುನ್ನ ( ಕವನ ಸಂಕಲನ) ಅವಳ ಉತ್ತರ ( ಕಾದಂಬರಿ)
ಪ್ರಶಸ್ತಿ ಮತ್ತು ಪುರಸ್ಕಾರ: ಕೇಂದ್ರ ಸಾಹಿತ್ಯ ಅಕಾಡೆಮಿಯ ವತಿಯಿಂದ ಹೈದರಾಬಾದನಲ್ಲಿ ಏರ್ಪಡಿಸಲಾದ"ದಕ್ಷಿಣ ಭಾರತದ ಕವಿಗೋಷ್ಠಿ"ಯಲ್ಲಿ ಕರ್ನಾಟಕದಿಂದ ಕನ್ನಡವನ್ನು ಪ್ರತಿನಿಧಿಸಿದ್ದಾರೆ. ಅಖಿಲ ಭಾರತ 10ನೇ ಬೆಳದಿಂಗಳ ಸಾಹಿತ್ಯ ಸಮ್ಮೇಳನ ದಲ್ಲಿ- ಕವಿ ಕಾವ್ಯ ರತ್ನ ಪ್ರಶಸ್ತಿ ಲಭಿಸಿದೆ ಜನಪ್ರೀಯ ಪ್ರಕಾಶನ ಬೀದರ್ - ಸಾಹಿತ್ಯ ಸಿರಿ ಪ್ರಶಸ್ತಿ ಲಭಿಸಿವೆ. ಹೈಬ್ರೀಡ್ ನ್ಯೂಸ್ ಚಾನೆಲ್ ನಿಂದ ಕನ್ನಡದ ಮಾಣಿಕ್ಯ ಪ್ರಶಸ್ತಿ ಲಭಿಸಿವೆ. ಚೇತನಾ ಫೌಂಡೇಶನ್ ಕರ್ನಾಟಕ ದಿಂದ ಹೆಮ್ಮೆಯ ಕನ್ನಡತಿ ಪ್ರಶಸ್ತಿ ಲಭಿಸಿವೆ. ಭಾರತೀಯ ಕಲಾ ಸಾಂಸ್ಕೃತಿಕ ಅಕಾಡೆಮಿ ದಾವಣಗೆರೆ ವತಿಯಿಂದ ಲಾಲ್ ಬಹದ್ದೂರ್ ಶಾಸ್ತ್ರಿ ಪ್ರಶಸ್ತಿ ನೀಡಿ ಗೌರವಿಸಿದೆ. ವಿಶ್ವ ಕನ್ನಡಿಗರ ಸಂಸ್ಥೆ ಬೀದರ್ (ರಿ) ವತಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿವೆ. ಚೇತನಾ ಫೌಂಡೇಶನ್ ಕರ್ನಾಟಕದಿಂದ ಕರುನಾಡ ಚೇತನ ಪ್ರಶಸ್ತಿ ಸಂದಿದೆ ನೀ ಹೋಗುವ ಮುನ್ನ" ಕವನ ಸಂಕಲನಕ್ಕೆ ತ್ರಿವೇಣಿ ರತ್ನ ರಾಜ್ಯ ಪ್ರಶಸ್ತಿ ತನುಶ್ರೀ ಪ್ರಕಾಶನದಿಂದ ಲಭಿಸಿದೆ.