ಅಕ್ಷತಾರಾಜ್ ಪೆರ್ಲ ಅವರ ಕಾವ್ಯ ನಾಮ ಅಕ್ಷರ. ಇವರ ತಂದೆ ವೆಂಕಟೇಶ್ ಭಾಗ್ವತ್ ಹಾಗೂ ತಾಯಿ ರಾಜೇಶ್ವರಿ.ಹುಟ್ಟೂರು ಮೂಡಬಿದ್ರೆಯಾದರೂ, ಕಾಸರಗೋಡು ಜಿಲ್ಲೆಯ ಪೆರ್ಲದಲ್ಲಿ ವಾಸವಾಗಿದ್ದಾರೆ. ಸಾಹಿತ್ಯದಲ್ಲಿ ಪದವಿ ಹಾಗೂ ಹಿಂದಿ ಪ್ರವೀಣ ಪಡೆದಿರುವ ಇವರು ಕತೆ, ಕವಿತೆ, ನಾಟಕ, ಕಾದಂಬರಿ, ವೈಚಾರಿಕ ಲೇಖನ ಸೇರಿದಮತೆ ಅನೇಕ ಸಾಹಿತ್ಯ ಕೃಷಿಯನ್ನು ಮಾಡಿದವರು. ಕನ್ನಡ, ತುಳು, ಹವ್ಯಕ, ಅರೆಭಾಷೆ, ಹಿಂದಿ, ಇಂಗ್ಲಿಷ್ ಭಾಷೆಗಳನ್ನು ಬಲ್ಲ ಇವರು, ಮಂಗಳೂರು ಆಕಾಶವಾಣಿಯಲ್ಲಿ ನಿರೂಪಕಿಯಾಕಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕೃತಿಗಳು : ಸಂಚಿಯೊಳಗಿನ ಸಂಜೆಗಳು - ಕನ್ನಡ ಕವಿತೆ ಸಂಕಲನ, ಕಂದೀಲು - ಕನ್ನಡ ಕತಾ ಸಂಕಲನ,ಬೊಳ್ಳಿ - ತುಳು ಕಾದಂಬರಿ,ಬೇಲಿ - ತುಳು ನಾಟಕ, ಸಾಪೊದ ಕಣ್ಣ್ - ತುಳು ನಾಟಕ
ಪುರಸ್ಕಾರಗಳು : ಹವ್ಯಕ ಕತೆಗಳಿಗಾಗಿ ಕೊಡಗಿನ ಗೌರಮ್ಮ ದತ್ತಿನಿಧಿ ಪುರಸ್ಕಾರ ಹಾಗೂ ಒಪ್ಪಣ್ಣ ನೆರೆಕರೆ ಬಹುಮಾನ. ತುಳು ಕತೆಗೆ ಪೂವರಿ ತುಳು ಸಾಹಿತ್ಯ ಪ್ರಶಸ್ತಿ, ತುಳು ಕಾದಂಬರಿಗೆ ಎಸ್.ಯು.ಪಣಿಯಾಡಿ ತುಳು ಕಾದಂಬರಿ ಪುರಸ್ಕಾರ, ಸತತ ಎರಡು ಬಾರಿ ಕುಡ್ಲ ತುಳುಕೂಟ ಆಯೋಜನೆಯ ಶ್ರೀಧರ್ಮಸ್ಥಳ ರತ್ನವರ್ಮ ಹೆಗ್ಗಡೆ ತುಳು ನಾಟಕ ಹಸ್ತಪ್ರತಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ.