ಬೆತ್ತಲೆ ರಸ್ತೆಯ ಕನಸಿನ ದೀಪ

Author : ವಿಭಾ

Pages 60

₹ 40.00




Year of Publication: 2012
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

ಉರ್ದುವಿನ ಪ್ರಸಿದ್ಧ ಕವಿ ಕೈಫಿ ಅಜ್ಮಿ. ಚಿತ್ರರಂಗಕ್ಕೆ ಉರ್ದು ಸಾಹಿತ್ಯದ ಹೊಳೆಯೇ ಹರಿಯುವಂತೆ ಮಾಡಿದವರು. ಗಜಲ್‌ಗಳ ಮೂಲಕ ಕಾವ್ಯಲೋಕ ಪ್ರವೇಶಿಸಿದ ಅವರು ನಂತರ ಎಡಪಂಥೀಯ ಚಳವಳಿಯಿಂದ ಪ್ರಭಾವಿತರಾಗಿ ತಮ್ಮ ಆಲೋಚನೆಗಳನ್ನು ರೂಪಿಸಿಕೊಂಡರು. ಆರಕ್ಕೂ ಹೆಚ್ಚು ಕವಿತಾ ಸಂಕಲನಗಳನ್ನು ಅವರು ಪ್ರಕಟಿಸಿದ್ದಾರೆ. ಮೊದಲ ಸಂಕಲನ ಜಾನ್‌ಕಾರ್‌ ಪ್ರಕಟವಾಗಿದ್ದು 1943ರಲ್ಲಿ. ಗೇಯತೆ, ಸೌಂದರ್ಯದ ಜೊತೆಗೆ ನೋವಿಗೆ ಮಿಡಿಯುವ ಅವರ ಕಾವ್ಯವನ್ನು ’ಬೆತ್ತಲೆ ರಸ್ತೆಯ ಕನಸಿನ ದೀಪ’  ಕನ್ನಡಕ್ಕೆ ಅನುವಾದಿಸಿದ್ದು ಕವಯತ್ರಿ  ವಿಭಾ ಅವರು. 

ವಿಭಾ ಅವರು ಈಗ ಬದುಕಿಲ್ಲ. ಆದರೆ ಅವರ ಅನುವಾದದ ಕುಸರಿ ಕೆಲಸವನ್ನು ನೋಡಲಿಕ್ಕಾದರೂ ಪುಸ್ತಕವನ್ನು ಓದಬೇಕು. 

About the Author

ವಿಭಾ
(27 September 1977 - 21 March 2004)

ವಿಭಾ, ಕನ್ನಡ ಕಾವ್ಯ ಲೋಕದಲ್ಲಿ ಅಚ್ಚಳಿದ ಹೆಸರು.ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೋಕಿನ ಮಹಲಿಂಗಪುರ ಅವರ ಹುಟ್ಟೂರು. ತಂದೆ- ಅರವಿಂದ ತಿರಕಪಡಿ, ತಾಯಿ- ಸಾವಿತ್ರಿ. ಎಂ.ಎ  (ಇಂಗ್ಲಿಷ್) ಪದವೀಧರರು ವಿಭಾ, ಬಾಗಲಕೋಟೆಯ ವಿಭಾಗೀಯ ಅಂಚೆ ಕಛೇರಿ ಉದ್ಯೋಗಿಯಾಗಿದ್ದರು. ಕನ್ನಡ ಸಾಹಿತ್ಯ ಲೋಕಕ್ಕೆ ‘ಜೀವ ಮಿಡಿತದ ಸದ್ದು’(ಕಾವ್ಯ), ‘ಹರಿವ ನೀರೊಳಗಿನ ಉರಿ’(ಅನುವಾದ ಕಾವ್ಯ), ‘ಬೆತ್ತಲೆ ರಸ್ತೆಯ ಕನಸಿನ ದೀಪ’(ಕೈಫಿ ಅಜ್ಮಿ ಕವಿತೆಗಳ ಅನುವಾದ) ‘ನನ್ನ ಪ್ರೀತಿಯ ಅಪ್ಪ’- ಕೈಫಿ ಅಜ್ಮಿ ಕವಿತೆಗಳು (ಅನುವಾದ) ಕೃತಿಗಳನ್ನು ನೀಡಿದ್ದಾರೆ. ಸಾಹಿತ್ಯ ಸೇವೆಗಾಗಿ ಸತತ ಐದು ವರ್ಷ ಕ್ರೈಸ್ಟ್ ಕಾಲೇಜಿನ ಕಾವ್ಯ ಪ್ರಶಸ್ತಿ, ಸಂಕ್ರಮಣ, ಸಂಚಯ, ಸಕಾಲಿಕ ...

READ MORE

Excerpt / E-Books

ನಾನು ಬಯಸುವ ಆ ಜಗತ್ತು ಸಿಕ್ಕುತ್ತಿಲ್ಲ
ಹೊಸ ಭೂಮಿ, ಹೊಸ ಆಗಸ ಸಿಗುತ್ತಿಲ್ಲ

ಹೊಸ ಭೂಮಿ, ಹೊಸ ಆಗಸ ದೊರೆತರೂ
ಹೊಸ ‘ಮನುಷ್ಯ’ರ ಗುರುತು ಸಿಗುತ್ತಿಲ್ಲ

ನನ್ನ ಕೊಲೆಗೈದ ಖಡ್ಗ ಸಿಕ್ಕರೂ ಕೂಡ
ಅಲ್ಲಿ ಕೊಲೆಗಾರನ ಕೈಯ ಗುರುತು ಸಿಗುತ್ತಿಲ್ಲ

ಅದು ನನ್ನೂರು, ಅವು ನನ್ನೂರಿನ ಒಲೆಗಳು
ಅವುಗಳಲ್ಲಿ ಬೆಂಕಿಯಷ್ಟೇ ಅಲ್ಲ, ಹೊಗೆ ಕೂಡ ಸಿಗುತ್ತಿಲ್ಲ

ದೇವರು ಸಿಗುತ್ತಿಲ್ಲವೆಂಬುದೇನು ಮಹಾ ದುರಂತವಲ್ಲ
ನನಗೆ ನನ್ನದೇ ಹೆಜ್ಜೆಗಳ ಗುರುತು ಸಿಗುತ್ತಿಲ್ಲ

ಅನಂತ ಕಾಲದಿಂದ ಜನಜಂಗುಳಿಯಲ್ಲಿ ನಿಂತಿದ್ದೇನೆ
ಎಲ್ಲೂ ನಿನ್ನ ಚಹರೆಯ ಗುರುತು ಸಿಗುತ್ತಿಲ್ಲ

(ಲಡಾಯಿ ಪ್ರಕಾಶನ ಪ್ರಕಟಿಸಿರುವ ವಿಭಾ ಅನುವಾದಿಸಿದ ಕೈಫಿ ಅಜ್ಮಿ ಅವರ ಕವಿತೆಗಳ ಸಂಕಲನ 'ಬೆತ್ತಲೆ ರಸ್ತೆಯ ಕನಸಿನ ದೀಪ' ದಿಂದ ಆಯ್ದ ಕವಿತೆ)

Related Books