Book Watchers

ರುಕ್ಮಿಣಿ ನಾಗಣ್ಣವರ್

ಕವಯತ್ರಿ ರುಕ್ಮಿಣಿ ನಾಗಣ್ಣವರ ಅವರು ಮೂಲತಃ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ನಾಗಣ್ಣವರದವರು. ಪ್ರಸ್ತುತ ಕಲಬುರಗಿಯ ಸಂವಾದ ಯುವ ಸಂಪನ್ಮೂಲ ಕೇಂದ್ರದಲ್ಲಿ ಯೂತ್‌ ಮೆಂಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಹಿತ್ಯಾಸಕ್ತನ್ನ ಒಂದೆಡೆ ತಿಂಗಳಿಗೊಮ್ಮೆ ಸೇರಿಸಿ ‘ಕಥಾ ಸಂವಾದ’ ಎಂಬ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ. ವೈಚಾರಿಕ ಸಾಹಿತ್ಯ, ಕತೆ, ಕಾದಂಬರಿಗಳಲ್ಲಿ ಹೆಚ್ಚು ಆಸ್ಥೆಯುಳ್ಳ ಅವರು ಕವಿತೆಗಳನ್ನು ರಚಿಸಿ ವಾಚಿಸಿದ್ದಾರೆ. ಅವರ ಹಲವಾರು ಕವಿತೆಗಳು ಪತ್ರಿಕೆ, ಮ್ಯಾಗಸೈನ್‌ಗಳಲ್ಲಿ ಪ್ರಕಟವಾಗಿವೆ.

Articles

ಅಕಥ ಕಥಾದೊಳೊಂದು ಬದುಕಿನಶೋಧ 

ತನ್ನ ಕೆಲಸ ಸಂಶೋಧನೆ ಮಾತ್ರ ಎಂದುಕೊಂಡ ಸಲೋಮಿ ಮೇಹಿಯಾ, ಔಚರ್ ಬರೆದು ಬರೆದು ದುಡ್ಡು ಮಾಡಿಕೊಳ್ಳತ್ತಿರುವ ಪಕ್ಕಾ ಲೆಕ್ಕಾಚಾರದ ಋತುಜ, ಇದು ಗೊತ್ತಿದ್ದರೂ ಖಂಡಿಸದಿದ್ದ ಸಲೋಮಿಯ ನಡುವಳಿಕೆಗೆ ರೋಸಿ ಹೋಗುವ ಪ್ರಮೋದ್ ಒಟ್ಟು ಸಂಶೋಧನೆಯ ದಿಕ್ಕುದಿಶೆಗಳನ್ನು ಪ್ರಶ್ನಿಸುವ ಧೈರ್ಯ ಇಲ್ಲಿ ಕಾಣಿಸುತ್ತದೆ.

Read More...

ತಾತ್ವಿಕ ಸವಾಲುಗಳ ಹೊಸ ಆಯಾಮದ ‘ಅಂಗದ ಧರೆ’

ಕಾದಂಬರಿ ತುಂಬ ತಾತ್ವಿಕ ಸವಾಲುಗಳನ್ನು ಎಸೆಯುತ್ತ ಸಾಗುತ್ತದೆ. ಕಾದಂಬರಿಯಲ್ಲಿ ಬರುವ ಮುಖ್ಯ ಪಾತ್ರಗಳು ಸಿದ್ದರಾಮ, ರೇವಕ್ಕ, ಗುರುಬಸವ, ಮಹಾದೇವಿ ಅಕ್ಕ ಮತ್ತು ಒಂದು ಹಂತದ ನಂತರ ಕಾದಂಬರಿಗೆ ಬೇರೊಂದು ಆಯಾಮ ಕೊಡುವ ಷಡಕ್ಷರಿ.

Read More...