Book Watchers

ರಾಹುಲ್ ಬೆಳಗಲಿ

ಪತ್ರಕರ್ತ ರಾಹುಲ್ ಬೆಳಗಲಿ ಅವರು ಪ್ರಜಾವಾಣಿ ದಿನಪತ್ರಿಕೆಯ ಕಲಬುರಗಿ ಆವೃತ್ತಿಯಲ್ಲಿ ಹಿರಿಯ ಉಪಸಂಪಾದಕ/ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಹುಲ್ ಅವರ ತಂದೆ ಸನತ್ ಕುಮಾರ ಬೆಳಗಲಿ ಅವರು ಹಿರಿಯ ಪತ್ರಕರ್ತರು. ಆರಂಭಿಕ ಶಿಕ್ಷಣವನ್ನು ಹುಬ್ಬಳ್ಳಿಯಲ್ಲಿ ಪಡೆದ ರಾಹುಲ್ ಅವರು ಹುಬ್ಬಳ್ಳಿಯ ಕಾಡಸಿದ್ದೇಶ್ವರ ಕಾಲೇಜಿನಲ್ಲಿ ಪದವಿ ಪಡೆದರು. ನಂತರ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಪ್ರಸ್ತುತ ಕಲಬುರಗಿಯಲ್ಲಿ ವಾಸಿಸುತ್ತಿದ್ದಾರೆ.

Articles

ಅದಮ್ಯ ಪ್ರೇಮದ ನವಿರು ಬಳ್ಳಿ ‘ವರ್ಜಿನ್ ಮೊಹಿತೊ’

ಈ ಪುಸಕದಲ್ಲಿನ ಕತೆಗಳು ಟ್ವಿಸ್ಟ್ ನೀಡೋದೆ ಹೀಗೆ. ಒಂದಕ್ಕಿಂತ ಒಂದು ಭಿನ್ನ, ಪ್ರಸ್ತುತ ಕ್ಷಣಗಳನ್ನು ಆಸ್ವಾದಿಸುತ್ತಿರುವಾಗಲೇ-ಯಾವಾಗ ಫ್ಲ್ಯಾಶ್‌‌‌ ಬ್ಯಾಕ್ ಹೋಗಿದ್ದೇವೆ ಎಂಬುದೇ ಅರಿವಿಗೆ ಬರುವುದಿಲ್ಲ. ಭೂತ-ವರ್ತಮಾನ-ಭವಿಷ್ಯ ನಡುವೆ ಪದೇ ಪದೇ ಹೋಗಿ ಬರುತ್ತಿದ್ದರೂ Reading ಕಿಂಚಿತ್ತೂ disturb ಅಥವಾ ಕಿರಿಕಿರಿ ಆಗುವುದಿಲ್ಲ.

Read More...