Book Watchers

ಕಲ್ಲೇಶ್ ಕುಂಬಾರ್

ಕಲ್ಲೇಶ್ ಕುಂಬಾರ್ ಅವರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನ ಹಾರೂಗೇರಿ ಗ್ರಾಮದಲ್ಲಿ. 'ಪುರುಷ ದಾರಿಯ ಮೇಲೆ' ಕವನ ಸಂಕಲನ, 'ಉರಿಯ ನಾಲಗೆಯ ಮೇಲೆ' ಹಾಗೂ 'ಉಸುರಿನ ಪರಿಮಳವಿರಲು' ಅವರ ಕಥಾಸಂಕಲನಗಳು. 'ಭವಕ್ಕೆ ಬೀಜವಾದುದು' ಕಥೆಗೆ 'ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆ-2002'ರಲ್ಲಿ ತೃತೀಯ ಬಹುಮಾನ, 'ಒಂದು ಕ್ಷಣದ ಸ್ಖಲನದ ಸುತ್ತ' ಕವಿತೆಗೆ 2005 ರ 'ಪ್ರಜಾವಾಣಿ ದೀಪಾವಳಿ ಕಾವ್ಯ ಸ್ಪರ್ಧೆ'ಯಲ್ಲಿ ಮೆಚ್ಚುಗೆ ಬಹುಮಾನ ಪಡೆದು ಓದುಗರ ಮೆಚ್ಚುಗೆಯನ್ನು ಸಂಪಾದಿಸಿದ್ದಾರೆ.

Articles

 ತತ್ಕಾಲದ ದರ್ಶನ ಮಾಡಿಸುವ ‘ಜೀವರೇಶಿಮೆ’ ಕತೆಗಳು

ಈ ಸಂಕಲನಕ್ಕೆ ಕತೆಗಾರರು ಇಟ್ಟಿರುವ ‘ಜೀವರೇಶಿಮೆ’ ಎಂಬ ಶೀರ್ಷಿಕೆ ಅದೆಷ್ಟು ಆಪ್ಯಾಯಮಾನವಾಗಿದೆಯೆಂದರೆ ಮನುಷ್ಯ ಬದುಕಿನೊಂದಿಗೆ ಬೆಸೆದುಕೊಂಡಿರುವ ಸಂಬಂಧದ ಎಳೆಗಳು ರೇಶಿಮೆ ಎಳೆಗಳಂತೆ ಸೂಕ್ಷ್ಮವಾಗಿದ್ದು, ತುಸು ಧಕ್ಕೆಯಾದರೂ ಸಾಕು ಆ ಸಂಬಂಧದ ಎಳೆಗಳು ತುಂಡರಿಸಿ ಹೋಗಿ ಆತನ (ಮನಷ್ಯನ) ಬದುಕಿನಲ್ಲಿ ಇನ್ನಿಲ್ಲದ ಸ್ಥಿತ್ಯಂತರವನ್ನು ತಂದೊಡ್ಡುತ್ತವೆ ಎಂಬ ಮಾತನ್ನು ಸಾಕ್ಷೀಕರಿಸುವಂತಿದೆ!

Read More...

ಗ್ರಾಮ ಬದುಕಿನ ವಿಸ್ಮಯಗಳ ಅನಾವರಣ

ನೌಕರಿ ನಿಮಿತ್ತವಾಗಿ ಪಟ್ಟಣದಲ್ಲಿ ವಾಸಿಸುತ್ತಿದ್ದ ಕಥೆಗಾರನಿಗೆ ಹಳ್ಳಿಯಲ್ಲಿ ನಾಲ್ಕು ಎಕರೆ ಜಮೀನಿನ ಕುರಿತಾಗಿ ಉಳಿಸಿಕೊಳ್ಳಬೇಕೋ, ಇಲ್ಲ ಮಾರಾಟ ಮಾಡಬೇಕೋ ಎಂಬ ಗೊಂದಲದಲ್ಲಿರುವಾಗಲೇ ಆ ಗೊಂದಲಕ್ಕೆ ಪೂರಕವಾಗಿರುವಂಥ ಇನ್ನೊಂದು ಪ್ರಸಂಗ ತೆರೆದುಕೊಳ್ಳುತ್ತದೆ. ತನ್ನ ಮನೆಗೆ ಕಾಯಿಪಲ್ಲೆ ಮಾರಾಟ ಮಾಡಲು ಬರುತ್ತಿದ್ದ ಅರವತ್ತರ ಆಸುಪಾಸಿನ ಅಜ್ಜಿ, ಇದುವರೆಗೂ ತಾನು ದಾಟಿ ಬಂದ ಬದುಕಿನ ದಾರಿಯನ್ನು ಕಥೆಗಾರನ ಮುಂದೆ ತೆರೆದಿಟ್ಟಾಗ ಆತ ತನ್ನದೇ ಬದುಕಿನ ಪರಾಮರ್ಶೆಗಿಳಿಯುತ್ತಾನೆ!

Read More...

ಚರ್ಚೆಗೊಳಪಡಬಲ್ಲ ಸಂಶೋಧನಾ ಕೃತಿ ‘ಹಾಡು ಕಲಿಸಿದ ಹರ’

ಕೇವಲ ಮನುಷ್ಯ ಲೋಕವನ್ನು ಮಾತ್ರ ಸೃಷ್ಟಿಸುವುದಷ್ಟೇ ಅಲ್ಲದೇ ಪ್ರಕೃತಿಯ ಎಲ್ಲ ಜೀವಕೋಟಿಯನ್ನು ಸಲಹುವ ಗುಣಗಳನ್ನು ಅಳವಡಿಸಿಕೊಂಡಿರುವ ಜನಪದ ಕಥನಗಳು ಜಗತ್ತಿನ ರಚನಾಕ್ರಿಯೆಯಲ್ಲಿ ವೈಜ್ಞಾನಿಕತೆಯ ಮತ್ತು ಶಿಲಾಯುಗದ ಸಂದರ್ಭದ ಸತ್ಯತೆಗಳನ್ನು ಒಳಗೊಂಡಿರುವುದಕ್ಕೆ ‘ಹಾಲುಮತ’ ಮತ್ತು’ಜುಂಜಪ್ಪ’ ಕಥನ ಸಾಕ್ಷಿಯಾಗಿರುವುದು ಈ ಲೇಖನದಿಂದ ತಿಳಿದು ಬರುತ್ತದೆ.

Read More...

 ‘ಅಲೆವ ನದಿ’ಯ ಅಂತಃಕರಣದ ದನಿ

ತನ್ನ ಗೆಳತಿಯ ನೆನೆದು ಕಣ್ಣೀರಾಗುವ ಪ್ರೇಮಿಯೊಬ್ಬ ತಾನು ಅನುಭವಿಸುತ್ತಿರುವ ದುಃಖದ ನೆರಳು ಮಧುಶಾಲೆಗೆ ನಶೆ ಏರಿಸುವುದು ಸಹಜವೆನಿಸುತ್ತದೆ. ಮಧುಶಾಲೆಯೆಂಬುದು ಪ್ರೇಮಿಗೆ ವಿರಹದಿಂದ ಬಿಡುಗಡೆಯಾಗುವ ದಾರಿಯನ್ನು ಕಾಣಿಸುತ್ತದೆ.

Read More...

ಧ್ಯಾನಸ್ಥ ಕ್ರಿಯೆಯಲ್ಲಿ ಬೆಂದ ‘ಹೇಳಲೇಬೇಕಾದ್ದು ಇನ್ನೂ ಇದೆ’

ಈ ಲೋಕದ ಸಕಲ ಜೀವಾತ್ಮಗಳ ಸುಖ, ಸಂಭ್ರಮ, ನೋವು, ಸಂಕಟ, ಹತಾಶೆ - ಇವೆಲ್ಲವುಗಳೂ ಕವಿತೆಯಾಗಿ ಎದೆಯೊಳಗೆ ಇಳಿಯುತ್ತ, ಈಟಿಯಂತೆ ತಿವಿ ತಿವಿದು ನಮ್ಮನ್ನು ಎಚ್ಚರಿಸುತ್ತ ಹೋಗುತ್ತವೆ. ಇದು ಇಲ್ಲಿನ ಕವಿತೆಗಳ ಶಕ್ತಿಯೂ ಹೌದು.

Read More...