ಸತೀಶ್ ಚಪ್ಪರಿಕೆ ಬರೆದ ಕತಾಸಂಕಲನ ವರ್ಜಿನ್ ಮೊಹಿತೊ. ಅದನ್ನು ಆಕೃತಿ ಪ್ರಕಾಶನದಲ್ಲಿ ಕೊಂಡುಕೊಂಡು ಅದರಲ್ಲಿದ್ದ ಎಂಟು ಕತೆಗಳನ್ನು ಒಂದೇ ಗುಕ್ಕಿನಲ್ಲಿ ಓದಿ ಮುಗಿಸಿದೆ. ಸತೀಶ್ ಚಪ್ಪರಿಕೆ ಅವರ ಕತಾಸಂಕಲನ ಓದಿದ್ಮೇಲೆ ಇದನ್ನು ಬರೆಯದಿರಲು ಸಾಧ್ಯವೇ ಇಲ್ಲ ಎನಿಸತೊಡಗಿತು. ವರ್ಜಿನ್ ಮೊಹಿತೊ ಕತಾಸಂಕಲನದಲ್ಲಿ ಇರುವುದು ಕೇವಲ 8 ಕತೆಗಳಷ್ಟೇ. ನಾನು ಪತ್ರಿಕೆಗಳ ಸಾಪ್ತಾಹಿಕ ಪುರವಣಿಯಲ್ಲಿ ಬರುತ್ತಿರುವ ಎಲ್ಲ ಕತೆಗಳನ್ನು ಓದುತ್ತೇನೆ. ಇವತ್ತಿಗೂ ಕೂಡ ಮೊಗಳ್ಳಿ ಗಣೇಶ್ ಅವರ ಬುಗುರಿ ಕತೆ ಸುಮಾರು ಎರಡು ದಶಕಗಳ ಹಿಂದೆ ಓದಿದ್ದೆ. ಅದು ಈಗಲೂ ನನ್ನನ್ನು ಕಾಡುತ್ತಿದೆ.
ಸತೀಶ್ ಚಪ್ಪರಿಕೆ ಎಷ್ಟೊಂದು ಚಂದ ಅನುಭಾವದ ಕತೆಗಳನ್ನು ಬರೆದಿದ್ದಾರೆ ಎಂದು ಅವರ ವರ್ಜಿನ್ ಮೊಹಿತೊ ಓದಿದ ಮೇಲೆ ನನಗೆ ಮನವರಿಕೆಯಾಯಿತು. ಅವರ ಕತಾಸಂಕಲನದಲ್ಲಿ ನನಗೆ ಇಷ್ಟವಾದ 8 ಕತೆಗಳ ನಡುವೆ ದಾಸ ಎಂಬ ಕತೆ 80 ಪರ್ಸೆಂಟ್ ಇಷ್ಟವಾಯಿತು. ಆನಂತರ ಅದು ಬೋರು ಹೊಡೆಸಿತು. ಉಳಿದೆಲ್ಲ ಕತೆಗಳು ಓದಲು ಶುರು ಹಚ್ಚಿಕೊಂಡರೆ ಅದರಲ್ಲೊಂದು ಅನನ್ಯ ಅನುಭೂತಿ ದಕ್ಕುತ್ತಿತ್ತು. ಇತ್ತೀಚಿಗೆ ಕೆಟ್ಟ ಕತೆಗಳನ್ನು ಓದಿ ಓದಿ ಬೇಸರಗೊಂಡಿದ್ದ ನಾನು ಸತೀಶ್ ಚಪ್ಪರಿಕೆ ಅವರ ಕತೆಗಳನ್ನು ಓದಿ ಉಲ್ಲಾಸಿತಗೊಂಡೆ. ಅವರ ಕತಾ ಸಂಕಲನದ ಮೊದಲ ಕತೆ ಬೊಂಬಾಯಿ ಪೆಟ್ಟಿಗೆ ಅದರಲ್ಲಿ ನಾಯಕನ ಹೆಸರು ಸದಾನಂದ. ಅದು ನನ್ನ ಹೆಸರು ಕೂಡ. ಆತ ವೃತ್ತಿಯಲ್ಲಿ ಪತ್ರಕರ್ತ. ನನ್ನ ಪೂರ್ವಾಶ್ರಮದ ವೃತ್ತಿ ಕೂಡ ಅದೇ.
ಅವರ ಎರಡನೇ ಕತೆ ಹೈಡ್ ಪಾರ್ಕ್. ಅದರಲ್ಲಿ ಬರುವ ಮಗನ ಹೆಸರು ಚಿರಂತನ್. ಅದು ನನ್ನ ಮಗನ ಹೆಸರು. ಅದು ಕಾಕತಾಳಿಯ. ನಮ್ಮ ಪ್ರೀತಿಯ ಚಪ್ಪರಿಕೆ ಎಷ್ಟೊಂದು ಚೆಂದದ ಕತೆಗಳನ್ನು ಕಟ್ಟಿಕೊಟ್ಟಿದ್ದಾರೆ. ಸತೀಶ್ ಚಪ್ಪರಿಕೆ ನನಗೆ ಅಪರಿಚಿತರಲ್ಲ. ಮೂರ್ನಾಲ್ಕು ಬಾರಿ ನಾನು ಮತ್ತು ಅವರು ಪತ್ರಿಕೋದ್ಯಮಲ್ಲಿದ್ದಾಗ ಭೇಟಿ ಮಾಡಿದ್ದೇವೆ. ಅದು ಪರಿಚಯ ಮಾತ್ರ. ಅದು ಸ್ನೇಹದ ಗಂಟು ಆಗಲಿಲ್ಲ. ಬಹಳ ಕಾಲದ ನಂತರ ಒಳ್ಳೆಯ ಕತೆಗಳನ್ನು ಬರೆದ ಚಪ್ಪರಿಕೆ ಅವರಿಗೆ ಹೀಗೊಂದು ಸಲಾಂ. ಅಂದ ಹಾಗೆ ನಿಮ್ಮ ಕತಾಸಂಕಲನವನ್ನು ಮತ್ತಷ್ಟು ಕೊಂಡುಕೊಂಡು ಕೆಲವು ಗೆಳೆಯರಿಗೆ ಕೊರಿಯರ್ ಮಾಡಲು ಪ್ರಯತ್ನಿಸುತ್ತಿದ್ದೇನೆ. ಕೊನೆಯ ಮಾತು. ವರ್ಜಿನ್ ಮೊಹಿತೊ ಸಂಕಲನದಲ್ಲಿರುವ ಕತೆಗಳನ್ನು ನೀನು ಓದು ಎಂದು ಹೆಂಡತಿಗೆ ಪುಸ್ತಕ ಕೊಟ್ಟೆ. ಹೈಡ್ ಪಾರ್ಕ್ ಕತೆ ಓದಿದ ನಂತರ ಅವಳು ಹೇಳಿದ್ದು ಅಂತಹ ಹೃದಯಂಗಮ ಕತೆಗಾರನನ್ನು ಮನೆಗೆ ಕರೆಸಿ.
ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ : ವರ್ಜಿನ್ ಮೊಜಿತೊ
Daily Column View All
ಕನ್ನಡಕ್ಕೆ ಬಂದ ವಿಶ್ವದ ಪರಿಮಳ- ಸಾವಿರದ ಒಂದು ಪುಸ್ತಕ
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಪೇಂಟಿಂಗ್ ಎಂಬುದು ಐಡಿಯಾ ಮತ್ತು ವಾಸ್ತವದ ಮಧ್ಯಂತರ ಸ್ಥಿತಿ – ಲೀ ಉಹ್ವಾನ್
Zoom with Bookbrahma
Mukha Mukhi
Latest Story View All
ಕೆ.ಎಸ್ ಗಂಗಾಧರ
Latest Poem View All
ಅಲ್ಲಾಗಿರಿರಾಜ್ ಕನಕಗಿರಿ - ಮನಸು ಮಾರುವ ಸಂತೆ
Punch Line
Gandhada Beedu
©2024 Book Brahma Private Limited.