Story/Poem

ವಾಸುದೇವ ನಾಡಿಗ್

ವಾಸುದೇವ ನಾಡಿಗ್ ಮೂಲತಃ ಶಿವಮೊಗ್ಗದ ಭದ್ರಾವತಿಯವರು. ಕುವೆಂಪು ವಿವಿಯಿಂದ ಕನ್ನಡ ಸ್ನಾತಕೋತ್ತರ ಪದವಿ ಹಾಗೂ ತುಮಕೂರು ಸಿದ್ದಗಂಗಾ ಶಿಕ್ಷಣ ಮಹಾವಿದ್ಯಾಲಯ ದಲಿ ಬಿ. ಎಡ್. ಪದವಿ ಪಡೆದಿದ್ದಾರೆ. 20 ವರ್ಷಗಳಿಂದ ಜವಾಹರ ನವೋದಯ ವಿದ್ಯಾಲಯದಲಿ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃಷಭಾಚಲದ ಕನಸು, ಹೊಸ್ತಿಲು ಹಿಮಾಲಯದ ಮಧ್ಯೆ, ಭವದ ಹಕ್ಕಿ, ನಿನ್ನ ಧ್ಯಾನದ ಹಣತೆ, ವಿರಕ್ತರ ಬಟ್ಟೆಗಳು, ಅಲೆ ತಾಕಿದರೆ ದಡ, ಅವನ ಕರವಸ್ತ್ರ ಅನುಕ್ತ ( ಈವರೆಗಿನ ಕವಿತೆಗಳು) ಇವರ ಪ್ರಕಟಿತ ಕವನ ಸಂಕಲನಗಳು. ಬೇಂದ್ರೆ ಅಡಿಗ, ಕಡೆಂಗೋಡ್ಲು ಶಂಕರಭಟ್ಟ, ಮುದ್ದಣ, ಜಿ ಎಸ್ ಎಸ್ ಕಾವ್ಯ ಪ್ರಶಸ್ತಿ ಇವರಿಗೆ ದೊರೆತಿವೆ.

More About Author

Story/Poem

ಗತದ ಬಾವಿ 

ಕಟ್ಟೆಯ ಮೇಲೆ ಕುಕ್ಕಿಸಿಕೊಂಡು ಕೊರಳು ಸೊಂಟವೆಲ್ಲ ನೆಗ್ಗು ಗುಳಿ ಸಣ್ಣಗೆ ಒಸರುವ ಕಾಣದ ಸೀಳು ನೆರೆಯವರ ಜೊತೆಗೆ ನಾಲ್ಕು ಮಾತಾಡುವಂತಿಲ್ಲ ಬಿಂದಿಗೆ ಖಾಲಿ ಮತ್ತೆ ಆಳಕ್ಕೆ ಬಿದ್ದು ನೀರಿಗೆ ಬಾಯಿಕೊಡದ ಬಿಂದಿಗೆ ಅತ್ತಿತ್ತ ಓಲಾಟ ವಯ್ಯಾರ ತುಂಬಿಸಿಕೊಳ್ಳಲು ಏನಿಂತಹ ಬಿನ್ನ...

Read More...

ದ್ರೋಣರ ಪ್ರಯೋಗಶಾಲೆ

ಆ ವೃಕ್ಷ ನೋಡಿ ವಿದ್ಯಾರ್ಥಿಗಳೇ ಏನೂ ಗೋಚರಿಸುತ್ತಿದೆ ನಿಮಗೆ ನಿಮ್ಮ ಅಕ್ಷಿಗಳಿಗೆ ಮುಂದೆ ಕರೆತಂದು ಮೌಖಿಕ ಪರೀಕ್ಷೆ ಶುರು ನೋಟ ಹೊರಗಿನದೆ, ಒಳಗಿನದೇ ಒಳ ಹೊರವುಗಳ ಒಟ್ಟು ಫಲವೇ ದೃಷ್ಟಿ ಮಂದವೋ, ತೀಕ್ಷಣವೋ ಅನುಭವದ ನದಿಯ ಮೇಲೆ, ಯೋಚನೆಯ ನಾವೆ ಹೇಳಿ ಯಾರ್‍ಯಾರಿಗೆ ಏನೇನೂ...

Read More...

ಪುನರ್ಭವ

ಪ್ರತಿ ಶಿಶಿರದ ಆಳದಲೂ ನನಗೆ ಬೇಸಿಗೆಯ ಚಿಗುರು ಕಾಣಿಸುತ್ತದೆ ಅಸಂಖ್ಯ ಕಂಬಳಿಹೊದ್ದ ಇಳೆಯ ಒಳಗೆ ಸಣ್ಣಗೆ ಉರಿವ ಹಿತಬಿಸಿಯ ಹಣತೆ ಪ್ರತಿ ಋತುವಿನ ಮುಖವಾಡ ನನಗೂ ಶಿಶಿರದಲಿ ಬೇಗೆಯ ನಾಟಕ, ಬೇಗೆಯಲಿ ಮಳೆಯ ತಾಲೀಮು, ಬದುಕಿಡೀ ಅಲಿಖಿತ ರಂಗಮಂಚ ನನಗೆ ಗೊತ್ತು. ಮುಂದೆ ಬೇಸಿಗೆ ರಣ ಇ...

Read More...

ಕವಿತೆ ಎಲ್ಲಿ

ನೀವು ಕವಿತೆ ಎಲ್ಲಿ ಎಂದು ಕೇಳಿದಾಗೆಲ್ಲ ತಲೆ ತಗ್ಗಿಸುತ್ತೇನೆ ನೆಲದ ಹುಡುಕಾಟಕೆ ತೊಡಗುತ್ತೇನೆ ಗಾಳಿಯಲಿ ಹಣತೆ ಹಚ್ಚಿದಂತಲ್ಲ ಉಸಿರು ಮತ್ತು ಕವಿತೆ ನಕ್ಷತ್ರಗಳಲಿ ಮನೆ ಕಟ್ಟುವುದ ಬಿಟ್ಟು ಬೇರುಗಳಲಿ ಗೂಡು ರಚಿಸುತ್ತಿದ್ದೇನೆ ನಶ್ವರ ಇಬ್ಬನಿಯ ಹಾಗೆ ಹಠಾತ್ತನೆ ಅಪ್ಪಳಿಸೋ ಭಾವಗಳು ...

Read More...