ಪತ್ರಕರ್ತೆ, ಲೇಖಕಿ, ಸಿನಿಮಾ ವಿಮರ್ಶಕಿ ಸಂಧ್ಯಾರಾಣಿ ಅವರು ಕೋಲಾರ ಜಿಲ್ಲೆಯ ಬಂಗಾರಪೇಟೆಯವರು. ಚಿನ್ನದ ಗಣಿ ಕೆ.ಜೆ.ಎಫ್‌ನಲ್ಲಿ ಪದವಿ ಶಿಕ್ಷಣ ಪಡೆದಿರುವ ಇವರು ಪ್ರಸ್ತುತ ಹವ್ಯಾಸಿ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ.
‘ಆರ್ಡರ್, ಆರ್ಡರ್’, ಕೋರ್ಟ್ ಹಾಲಿನ ತುಂಬಾ ಜನ. ಮಾಧ್ಯಮದವರು, ಪೊಲೀಸರು, ಕೆಲಸ ಇಲ್ಲದೆ ತಮಾಷೆ ನೋಡಲು ಬಂದವರು, ಏನಾಗುವುದೋ ಎಂದು ಕುತೂಹಲಕ್ಕೆ ಬಂದು ಕುಳಿತಿದ್ದ, ನಿಂತಿದ್ದ ಮರಿ ಲಾಯರ್&zwnj...