ಲೇಖಕ ಪ್ರಮೋದ ಸಾಗರ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದವರು. ಕನ್ನಡ ಎಂಎ ಪದವೀಧರರು, ಸಂಗೀತ ನಿರ್ದೇಶಕರು. ಸಾಹಿತ್ಯ, ಚಿತ್ರಕಲೆ, ಫೋಟೋಗ್ರಫಿ, ನಾಟಕ ಇತ್ಯಾದಿ ಇವರ ಹವ್ಯಾಸಗಳು. ʻಸಂಸಾರ ಗೀತೆ ಮತ್ತು ಇತರ ಕವಿತೆಗಳು ಎಂಬುದು ಇವರ ಕವನ ಸಂಕಲನ.
ತಾಯಿ ತುತ್ತು
ನನ್ನಮ್ಮನಿಗೆ ಮಾತ್ರ ಗೊತ್ತು
ನನ್ನ ಹೊಟ್ಟೆಯ ಅಳತೆ ಎಷ್ಟೆಂದು !
ಹಸಿವಿದ್ದೂ ನಾ ...
"ಹೊಟ್ಟೆ ತುಂಬಿತು ಸಾಕು"
ಎಂದರೂ ಇನ್ನಷ್ಟು ಮತ್ತಷ್ಟು
ಬಡಿಸಿ ಉಣಿಸುವಳು.
ಅಥವಾ ಹಾಗೆ ಒತ್ತಾಯಿಸಲೆಂದೇ...
ನನ್ನೀ ಹೊಟ್ಟೆ ತುಂಬಿದ ನಾಟಕ.
ಅಮ್ಮನದ...