ಕಾಮದೇವನ
ಕಂಡ ಮೇಲಿನ್ನಾರನು ಕಾಣುವುದೇ
ಹೇಳು ಸಖೀ, ಉಂಟೆಲ್ಲೆ ಜಗದೊಳು
ಟಿಂವ್ವಟಿಂವ್ವನೆ ಎದೆ ಮೀಂಟಿದವನಂಥ
ಪುರುಷ !
ಕಂಡೇನೇ ಆ ಕಣ್ಣು
ಹಾಲ ಗಡಿಗೆಯೊಳು ಚಲಚಲಿಪ
ಗುಂಡು ನೇರಳೆಹಣ್ಣು
ಅದೆಂತಹ ಹಣೆಯೇ ಅದು
ಸಣ್ಣದಲ್ಲ ದೊಡ್ಡದಲ್ಲ
ಬೆಣ್ಣೆ ಸವರಿದಂಗೆ ರೇಸಿಮೆಯ ಮೇಲೆ
ನುಣ್ಣಗೆ ಮ...
ಮನೆಯಲ್ಲಿದ್ದುದು ಒಂದೇ ಕನ್ನಡಿ
ಪರಿಷೆಯಲಿ ತಂದದ್ದು
ಬೆಲ್ಜಿಯಮ್ ಗಾಜು ಬೀಟೆ ಮರದ ಫ್ರೇಮು, ಗದೆ ಭಾರ
ದೇವರಗೂಡಿನ ಮಗ್ಗುಲಿಗೇ ಈ ದರ್ಪಣದ ಸ್ಥಾವರ
ಈಬತ್ತಿ ಎಳೆಯುವವರು, ಗಂಧದ ಬೊಟ್ಟಿಕ್ಕುವವರು
ಕಂಚಿಕುಂಕುಮ ಸರಿ ಮಾಡಿಕೊಳ್ಳುವವರು
ಎಲ್ಲರೂ ಅಲ್ಲೇ, ಅದು ಇದ್ದಲ್ಲೇ,...