Story/Poem

ಹೇಮಾ ಪಟ್ಟಣಶೆಟ್ಟಿ

ಕವಯತ್ರಿ, ಬರಹಗಾರ್ತಿ ಹೇಮಾ ಪಟ್ಟಣಶೆಟ್ಟಿ ಅವರು ಮನೋವಿಜ್ಞಾನ ಹಾಗೂ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಬರೆದಿರುವ ಪ್ರಮುಖ ಕೃತಿಗಳೆಂದರೆ ವಿರಹೋತ್ಸವ, ಹೊಸಹಾಡು, ಕಣ್ಣುಗಳಲಿ ಕನಸು ತುಂಬಿ, ಮುಸುಕಿದೀ ಮಬ್ಬಿನಲಿ, ಬಗಾಟ ಬಗರಿ, ತುಂಟ ಮಕ್ಕಳ ತಂಟೆ, ಹೆಣ್ಣು. ವಿಮರ್ಶೆ/ವಿಚಾರ ಸಾಹಿತ್ಯ : ಮರ್ಯಾದೆಯ ಮುಸುಕಿನಲ್ಲಿ, ಅನುಲೇಖ ಮುಂತಾದವು. ಸಾಹಿತ್ಯ ಕ್ಷೇತ್ರಕ್ಕೆ ಇವರು ನೀಡಿರುವ ಕೊಡುಗೆಗೆ ಅಂತರರಾಷ್ಟ್ರೀಯ ಮಹಿಳಾ ವರ್ಷದ ಪ್ರಶಸ್ತಿ, ರತ್ನಮ್ಮ ಹೆಗ್ಗಡೆ ಪ್ರಥಮ ಬಹುಮಾನ, ಮಲ್ಲಿಕಾ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳು ಸಂದಿವೆ. 

More About Author

Story/Poem

ಬೆಳದಿಂಗಳು

ಈಗಷ್ಟೇ ಅಮ್ಮೀ ಕುಡಿದು ತುಟಿ ತುಂಬಾ ಹಾಲುನೊರೆ ಸವರಿಕೊಂಡು ಪಿಸುನಗುವ ಮಗುವಂತೆ ಈ ಬೆಳದಿಂಗಳು ಗಂಡನುಜ್ವಲಿಸಿ ಕೊಟ್ಟ ಪ್ರೀತಿ ಅಗ್ಗಿಷ್ಟಿಕೆಯ ಬೆಳಕು ಬೆಳದಿಂಗಳಲ್ಲಿ ಸಿಡಿಸಿಡಿದು ಬರುವ ಕಿಡಿಯ ಚಿತ್ರಗಳಂತೆ ಬಾನಿನಲ್ಲಿ ಹರಡಿರುವ ಚುಕ್ಕೆಗಳು ಮುಗಿಸಿ ರಾತ್ರಿಯ ಊಟ ತೊಳೆದಿಟ್ಟು ಪಾ...

Read More...