Story/Poem

ಧಾರಿಣಿ ಮಾಯಾ

ಧಾರಿಣಿ ಮಾಯಾ ಅವರು ಮೈಸೂರಿನ ಪತ್ರಿಕೋದ್ಯಮ ವಿಭಾಗದಲ್ಲಿ ಪದವಿ ಹಾಗೂ ಇಂಗ್ಲೀಷ್ ವಿಭಾಗದಲ್ಲಿ ಸ್ನಾತ್ತಕೋತ್ತರ ಪದವಿ ಪಡೆದಿದ್ದು, ಓದು- ಬರಹದಲ್ಲಿ ಆಸಕ್ತಿ, ಬರವಣಿಗೆಯನ್ನು ಪ್ರಾರಂಭಿಸಿ ಹವ್ಯಾಸಿ ಬರಹಗಾರ್ತಿಯಾಗಿ, ಸಾಹಿತ್ಯ ಕಣಜವು ಕಥೆ, ಕವನ, ಲೇಖನ ಹಾಗೂ ಲಲಿತ ಪ್ರಬಂಧಗಳ ಪ್ರಕಾರಗಳನ್ನು ಒಳಗೊಂಡಿದೆ. ಬಹುತೇಕ ಬರಹಗಳು ಭೂಮಿಕಾ, ಸುಧಾ, ತರಂಗ, ವಿಶ್ವವಾಣಿ, ವಿಜಯ ಕರ್ನಾಟಕ, ಮಂಗಳ, ಕರ್ಮವೀರ, ಹಾಗೂ ವಿನಯವಾಣಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. 'ನೇಯ್ದೆನುಡಿ' ಎಂಬ ಮಾಸಿಕ ಪತ್ರಿಕೆಯಲ್ಲಿ ಇವರ ಅಂಕಣ ಬರಹಗಳು ಕಳೆದ ಮೂರು ವರ್ಷಗಳಿಂದ ಸತತವಾಗಿ ಮೂಡಿ ಬರುತ್ತಿವೆ. ಚಿತ್ರಕಲೆ, ವಾಲ್ ಪೇಂಟಿಂಗ್, ಅಡುಗೆ, ಸ್ಟ್ರೀಟ್ ಫೋಟೋಗ್ರಾಫಿ ಹವ್ಯಾಸವಾಗಿದ್ದು ಚಿಕ್ಕಂದಿನಿಂದಲೂ ನೃತ್ಯ, ನಾಟಕ ಇವರ ನೆಚ್ಚಿನ ರಂಗಗಳು, ಕೌಂಟುಬಿಕ ಆಧಾರಿತ “ಮನೋರಮೆಯರ ತಲ್ಲಣಗಳು” ಎಂಬ ನಾಟಕವನ್ನು (ಮ್ಯೂಸಿಕಲ್ ಡ್ರಾಮಾ) ರಚಿಸಿ, ನಿರ್ದೇಶಿಸಿ ನಟಿಸಿದ್ದಾರೆ.

More About Author

Story/Poem

ಅಜ್ಜಿಯ ಊರು

ರಜೆ ಬಂತೆಂದರೆ ಹಾರುತ್ತಿದ್ದೆ ಅಜ್ಜಿಯೂರಿಗೆ ಮರಳಿ ನನ್ನೂರಿಗೆ ಬರುತ್ತಿದ್ದುದು ನಾಳೆ ಶಾಲೆ ಎಂದಾಗಲೇ ಓಡಾಡದ ಕೇರಿಗಳಿಲ್ಲ ಹತ್ತದ ದಿಬ್ಬಗಳಿಲ್ಲ ಕೆರೆ ದಾಟಿ ಮೈಲು ದೂರ ನಡೆದು ಕದ್ದು ಹೋದ ಸಿನಿಮಾ ಟೆಂಟ್‌ಗಳು ಇಂದು ಅಸ್ತಿತ್ವದಲ್ಲೇ ಇಲ್ಲ ಹತ್ತದ ಗಾಡಿಗಳಿಲ್ಲ ಎತ್ತಿ...

Read More...

ಏಕಾಂಗಿಯ ಭಾವಲಹರಿ  

ನೋವುಗಳು ಅಸಹನೀಯ ಎದೆ ಬಿರಿವಂತೆ ನಾಟಿವೆ ಭಾವಗಳ ಬಂಧಿಸಿ ಮನಸು ದುರ್ಬಲಗೊಳುತಲಿದೆಯೇ ಎಂಬ ಚಿಂತೆ ಕಾಡುತಿದೆ ಸಾವಿರಾರು ಬಾಣಗಳು ನನ್ನತ್ತಲೇ ನೆಟ್ಟಿವೆ ನಾಲಿಗೆ ಹರಿತಗೊಂಡರೂ ಮೂಕಮೌನ ತಾಳಿ ಪರಿಸ್ಥಿತಿಗೆ ಶರಣಾಗಿರುವೆ ಪದಗಳು ಕಡಿವಾಣ ತೊರೆದರೆ ಅವಿತು ಕೂತವರ ಹಣೆಬರಹ ಹ...

Read More...

ಮೂಕ ಹಕ್ಕಿಗಳು

ಹಕ್ಕಿಗಳು ಕುಂತಾವ ನೋಡಿರಾ ಒಂದು ಪುಟ್ಟ ಸೂರಿನಡಿ ಬಣ್ಣಹೊದಿಕೆಯ ಆನಿಸಿ ಬಿರುಕು ಮುರುಕಿನ ನಡುವೆ ಅಳಿದುಳಿದ ಬಣ್ಣ ಹಾಸುಗಳು ತೂಗ್ಯಾವ ಈ ಹಕ್ಕಿಗಳ ಕನಸಲೂ ಬದುಕಿನ ಬಣ್ಣಗಳು ಕೂಡ್ಯಾವೇ?! ತವಕದಿ ದಿಟ್ಟಿಸುತ ಕೊಂಚ ನಿಶ್ಚಲ ಭಾವ ಅಡಗಿಹುದು ಇಲ್ಲಿ ಏನಿದೇನು ಪರಿ...! ಅಪ್ಪ...

Read More...