ಕವಯತ್ರಿ ಅರ್ಚನಾ ಎಚ್. ಅವರು ಮೂಲತಃ ಬೆಂಗಳೂರಿನವರು. ಎಂಸಿಎ ಪದವಿ ಪಡೆದಿದ್ದಾರೆ. ಕಥೆ, ಕವನಗಳನ್ನು ರಚಿಸಿರುವ ಇವರು, "ಬಾಳ ಬಾನ ಚಂದಿರ" ಕೃತಿಯನ್ನು ಹೊರತಂದಿದ್ದು, ಅವರ ಮೊದಲ ಕವನ ಸಂಕಲನವಾಗಿದೆ.
ಅವಳು ಸೋತು ನಿಂತಿದ್ದಾಳೆ
ಹುಟ್ಟಿ ಹರಿದು ಕೊನೆಗೆ ಕಡಲು ಸೇರುವ ನದಿ
ಅಖಂಡ ಗರ್ಭ ಬಗೆದರೂ ಭೇದಿಸದ
ಉತ್ಕಟ ರಹಸ್ಯದೆದುರಲ್ಲಿ ಮಂಡಿಯೂರಿ....!
ತುಂಟತನಕೆರಗುವ ಕಡಲಲೆಯಂತಲ್ಲ..
ಕಂಬನಿಯ ಒಟ್ಟು ಕ್ರೋಢೀಕೃತ ಮೊತ್ತ..!!
ಅವನು ಅವಳನ್ನೇಕೆ ಪ್ರೇಮಿಸಿದ..?
ಕಾಡುವ ಕಡುಕ್ರೂರಿ ಪ್ರಶ್ನೆಗ...