Story/Poem

ಅನಿತಾ ಪಿ. ತಾಕೊಡೆ

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಸಮೀಪದ ತಾಕೊಡೆಯವರಾದ ಅನಿತಾ ಪೂಜಾರಿ ಅವರು ಸದ್ಯ ಮುಂಬೈಯಲ್ಲಿ ವಾಸಿಸುತ್ತಿದ್ದಾರೆ. ಕವಿ, ಕತೆಗಾರರಾಗಿರುವ ಅನಿತಾ ಅವರು ಅಂಕಣಕಾರರೂ ಆಗಿದ್ದಾರೆ. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಪದವೀಧರರಾಗಿರುವ ಅವರು ಮುಂಬೈ ವಿ.ವಿ.ಯಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಾಯುತ್ತಾ ಕವಿತೆ, ಅಂತರಂಗದ ಮೃದಂಗ (ಕವನ ಸಂಕಲನ), ಮರಿಯಲದ ಮದಿಮಾಲ್‌ (ತುಳು ಕವನ ಸಂಕಲನ), ಸವ್ಯಸಾಚಿ ಸಾಹಿತಿ, ಮೋಹನ ತರಂಗ -ಇವರ ಕೃತಿಗಳು. ಸುಶೀಲ ಎಸ್. ಶೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿ, ಅಲ್ಲಮ ಸಾಹಿತ್ಯ ಪ್ರಶಸ್ತಿ, ಕವಿರತ್ನ ಪುರಸ್ಕಾರ, ಡಿ.ಗೋಪಾಲಕೃಷ್ಣ ಸ್ಮಾರಕ ಪ್ರಶಸ್ತಿ, ಡೊಂಬಿವಲಿ ತುಳುಕೂಟದ ತುಳುಸಿರಿ ಪ್ರಶಸ್ತಿ, ಕಾವ್ಯಸಿರಿ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. 

More About Author

Story/Poem

ಮೇಣಕ್ಕಂಟಿದ ಬತ್ತಿ

ನಾನು ನೀನಾಗಿ ನೀನು ನಾನಾಗಿ ಒಲುಮೆಯೊಳಾಡುವುದು ಗಾಢವಾಗಿ ಬೆಸೆಯುವುದು ನೀನಿರದೆ ನಾನಿರಲಾಗದ ಬಂಧದಲಿ ನೂರ್ದನಿಗಳು ಮಾರ್ದನಿಸಿ ಒಂದೇ ಜೀವಾತ್ಮದಂತೆ ಒಮ್ಮನಸ್ಸಿನಿಂದ ಕೂಡಿ ನಡೆಯುವುದು ನಮ್ಮೊಳಗಿನ ಭಾವ ವಿನಿಮಯದೊಳು ಮಾತು ಪುಟಗಳ ಮೀರಿ ಸಂಪುಟವಾಗುವುದು ನಿಶೆಯ ಹಿರಿಮೆ ಗರಿಮೆಗ...

Read More...

ಕಣ್ಣ ಕಾವಲಿನಲಿ...

ಕಂಡೂ ಕಾಣದಂತಿರುವ ಕತ್ತಲ ಮುಸುಕಿನ ಇರುಳುಗನ್ನಡಿಯಲಿ ನಿಂತಿರುವ ನಿಲುವನ್ನೊಮ್ಮೆ ನೋಡಬೇಕು ಇಣುಕಿ ಮರೆಯಾಗುವ ಮಾತನೆಳೆಯಬೇಕು ಮೌನ ಕ್ರಾಂತಿಯೊಳಗೆ ಮೌನಿಯಾಗಬೇಕು... ಒಂದಷ್ಟು ಹೊತ್ತು ಆಚೆಗೆ ನಿಂತು ಬಿಡು ಮಾತು ಆಡಿದಷ್ಟು ಹೊತ್ತು , ಕೇಳಲೆಳಸುವ ತನನದ ಮೋಡಿಗೋ, ಕಾಯುವಿಕ...

Read More...

ಜೀವನ ಮೀಮಾಂಸೆ

ಯಾರ ಆಸೆ ಆಮಿಷಗಳಿಗೂ ಸೊಪ್ಪು ಹಾಕದೆ ಎಷ್ಟು ಓಲೈಸಿದರೂ ಎಲ್ಲೂ ನಿಲ್ಲಲೊಲ್ಲದ ಹಕ್ಕಿಯೊಂದು ಹಾರಿ ಬಂದು ಅಂಗಳದ ಮುಂದಿನ ಮರದ ಗೆಲ್ಲಿನಲಿ ಕೂತು ಗುಸುಗುಸು ಪಿಸಪಿಸೆಂದು ನುಲಿಯುತ್ತಿತ್ತು. ಹಕ್ಕಿ ಬಂದಾಗಲೆಲ್ಲ ನನ್ನದೊಂದೇ ರಾಗ ‘ನಿನ್ನೆಯ ಸುಖ ಮತ್ತೆ ಮರಳೀತೇ? ಇಂದಿನ ದುಃಖ ...

Read More...

ಸುಮ್ಮನೆ ನಗುತ್ತೇನೆ

ನಗುವೆಂದರೆ ಹೀಗಿದ್ದರೆ ಚಂದವೆಂದು ಬೆರಳು ತೋರಿಸಿ, ಹಾಗೇ ಮುಖವರಳಿಸಿ ನನ್ನಂತೆ ನಗುವವರ ನೆನೆ ನೆನೆದು ಈಗೀಗ ಸುಮ್ಮನೆ ನಗುತ್ತೇನೆ ಅವರ ಗೆಲುವಿಗಾದರೂ ಸರಿ ನನ್ನ ಚೆಲುವಿಗಾದರೂ ಸರಿ ಮತ್ತೆ ಮತ್ತೆ ನಗಬೇಕು ಒಲ್ಲದವುಗಳ ಒಳಗೊಳಗೇ ಮುರುಕಿ ಕೊಚ್ಚೆಯೊಳಬಿದ್ದು ಮಣ್ಣ ಮೆತ್ತಿಸಿಕೊಂ...

Read More...