ರಂಜಾನ್ ಮಾಸ
ರಂಜಾನ್ ತಿಂಗಳು ಶುರುವಾಗಿದೆ
ಉಪವಾಸ ಮಾಡಲು ಸಿದ್ಧತೆ ನಡೆದಿದೆ
ಆಹಾರ, ಪಾನೀಯ ದೂರ ಹೋಗುತಿದೆ
ಅಲ್ಲಾನಿಗಾಗಿ ಪ್ರಾರ್ಥನೆಗಳು ಶುರುವಾಗಲಿದೆ ||
ರಂಜಾನ್ ತಿಂಗಳು ನಮಗೆ
ಒಳ್ಳೆಯ ಕಾರ್ಯಗಳಿಗೆ ಅವಕಾಶ
ಅಲ್ಲಾನಿಗಾಗಿ ಉಪವಾಸ
ಮಾಡುವುದೇ ಈ ಹಬ್ಬದ ವಿಶೇಷ ||
ಸೂರ್ಯ ಹುಟ್ಟುವ ಮೊದಲೇ
ಮಾಡುವವರು ಎಲ್ಲರೂ ಸೆಹ್ರಿ
ಸೂರ್ಯ ಮುಳುಗಿದ ನಂತರ
ಉಪವಾಸ ಅಂತ್ಯಗೊಳಿಸುವುದೇ ಇಫ್ತಾರ್ ||
ಪವಿತ್ರ ಕುರಾನ್ ಅನ್ನು ಪಠಿಸಿ
ಸುನ್ನತ್ ಅನ್ನು ಹಿಡಿಯಲು ಪ್ರಯತ್ನಿಸಿ
ಪ್ರವಾದಿಯ ಮಾರ್ಗ ಅಭ್ಯಾಸ ಮಾಡಿ
ಮೋಹ-ಕಾಮದಿಂದ ದೂರ ಉಳಿದುಕೊಳ್ಳಿ ||
ತಹಜ್ಜದ್ ಗಾಗಿ ತಡರಾತ್ರಿ ಎಚ್ಚರಗೊಳ್ಳಿ
ಉತ್ತಮ ಗುಣಗಳ ರೂಡಿಸಿಕೊಳ್ಳಿ
ಹೆಚ್ಚಾಗಿ ನವಾಫಿಲ್ ನಮಾಜ್ ಮಾಡಿ
ರಾತ್ರಿಯಲ್ಲಿ ತರಾವೀಹ್ ನಿಂತು ಪ್ರಾರ್ಥನೆ ಸಲ್ಲಿಸಿ ||
ಪಾಪಗಳಿಂದ ದೂರವಿರಿ
ದಾನ ಮಾಡಿ ಪುಣ್ಯ ಪಡೆಯಿರಿ
ಅಲ್ಲಾನ ಭಕ್ತಿಗೆ ಸ್ವಲ್ಪ ಸಮಯ ಕೊಡಿ
ಮಸೀದಿಯಲ್ಲಿ ನಮಾಜ್ ಪ್ರಾರ್ಥನೆ ಸಲ್ಲಿಸಿ ||
ಭಕ್ತಿಯಿಂದ ಎಲ್ಲರೂ ಸೇರಿ ಹಬ್ಬ ಮಾಡೋಣ
ಉಪವಾಸದ ಮಹತ್ವ ನಾವೆಲ್ಲರೂ ತಿಳಿಯೋಣ
ದಾನವನ್ನು ಅಲ್ಲಾನ ಹೆಸರಿನಲ್ಲಿ ಮಾಡೋಣ
ರಂಜಾನ್ ತಿಂಗಳ ಪ್ರತಿಫಲ ಪಡೆಯೋಣ ||
- ಮೊಹಮ್ಮದ್ ಅಜರುದ್ದೀನ್
ಕವಿತೆ ಆಲಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
https://youtu.be/N9ggAR-8d0o
https://fb.watch/jLkRgZJdAh/
ಮೊಹಮ್ಮದ್ ಅಜರುದ್ದೀನ್
ಲೇಖಕ ಮೊಹಮ್ಮದ್ ಅಜರುದ್ದೀನ್ ಅವರು ಮೂಲತಃ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದವರು. ಪ್ರಸ್ತುತ ಹಾಸನದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯ ಎಂಜನಿಯರಿಂಗ್ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದಾರೆ. ಜೊತೆಗೆ, ಪ್ರಾದೇಶಿಕ ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುತ್ತಿದ್ದಾರೆ.
ಕೃತಿಗಳು : ಅಕ್ಕಿ-ಚುಕ್ಕಿ, ನಿಸರ್ಗ ನಾದ, ಹೆಬ್ಬೊಳಲು.
ಪ್ರಶಸ್ತಿ-ಪುರಸ್ಕಾರಗಳು: ಕಾವ್ಯಶ್ರೀ ಪ್ರಶಸ್ತಿ
More About Author