ನೆನಪು ಹಾರುವುದೆಂದರೆ
ಮರೆತು ಬಿಡುವುದಷ್ಟೆ ಅಲ್ಲ;
ಕಳೆದುಕೊಳ್ಳುವುದು ಕೂಡ!
ಕಳೆದು ಹೋದ ನಿರ್ವಾತದಲ್ಲೆ
ಮತ್ತೆ ಆವಿಗಟ್ಟಿ ಸಮಯದ ಸಂಗಡ
ಹೊಸಸೃಷ್ಟಿಗೆ ತುಡಿವ ಮೋಡ!
- ಚಂಸು ಪಾಟೀಲ
ವಿಡಿಯೋ
ವಿಡಿಯೋ
ಚಂಸು ಪಾಟೀಲ
ಕೃಷಿಯನ್ನೇ ಜೀವನ ವಿಧಾನವಾಗಿ ಸ್ವೀಕರಿಸಿರುವ ಲೇಖಕ ಚಂಸು ಪಾಟೀಲರು (ಚಂದ್ರಶೇಖರ ಸುಭಾಶಗೌಡ ಪಾಟೀಲ, ಜನನ: 1974)) ಇವರು ಮೂಲತಃ ರಾಣೇಬೆನ್ನೂರು ತಾಲೂಕಿನ ಕೂನಬೇವು (ಅಂಚೆ: ಕಜ್ಜರಿ) ಗ್ರಾಮದವರು. ಬಿ.ಎ. ಪದವೀಧರರು. ಕೆಲವು ಕಾಲ ಸಂಯುಕ್ತ ಕರ್ನಾಟಕ, ಕ್ರಾಂತಿ ದಿನಪತ್ರಿಕೆಯಲ್ಲಿ ಹಾಗೂ ನೋಟ-ವಾರಪತ್ರಿಕೆಯಲ್ಲಿ ಸಹ ಸಂಪಾದಕರಾಗಿದ್ದರು.
ಕೃಷಿ ಸಮಸ್ಗೆ ಕುರಿತು ಬರೆದ ಕೃತಿ-ಬೇಸಾಯದ ಕತಿ. ಈ ಕೃತಿಗೆ ಕನ್ನಡ ಸಾಹಿತ್ಯ ಅಕಾಡೆಮಿಯ 2018ರ ಸಾಲಿನ ಸಿಂಪಿ ಲಿಂಗಣ್ಣ ದತ್ತಿ ಪ್ರಶಸ್ತಿ ಲಭಿಸಿದೆ. ಗೆಳೆಯನಿಗೆ (1995), ಕೆಂಪುಕಂಗಳ ಹಕ್ಕಿ ಮತ್ತದರ ಹಾಡು (2004), ಅದಕ್ಕೇ ಇರಬೇಕು (2009) -ಇವರ ಕವನ ಸಂಕಲನಗಳು. ಸದ್ಯ ಗ್ರಾಮದಲ್ಲೇ ಕೃಷಿಕರಾಗಿದ್ದು,ರೈತಾಪಿ ಜಗತ್ತಿನ ಕೃಷಿ ಜಾಗೃತಿಯಲ್ಲಿ ತೊಡಗಿಕೊಂಡಿದ್ದಾರೆ.