ಎಂಥ ಘನಘೋರ ಭೀಕರ
ಈ ಸಂವತ್ಸರ
ಯಾರೋ ಹಚ್ಚಿದ ಕಿಚ್ಚಿಗೆ ನಾಶವಾಗುತ್ತಿದೆ ಮಾನವ ಸಂಕುಲ
ಜನಾರಣ್ಯಕ್ಕೆ ತಗುಲಿದ ಕಾಳ್ಗಿಚ್ಚು
ನಂದಿಸುವರು ಯಾರು, ಯಾವಾಗ
ಆ ದೇವರಿಗೆ ಗೊತ್ತು
ಅಕ್ಕಪಕ್ಕದಲ್ಲಿ ಅನಾಥ ಹೆಣಗಳ ಗಬ್ಬು ನಾತ
ಅಲ್ಲಲ್ಲಿ ಜೋತುಬಿದ್ದ ನಳಿಕೆಗಳ
ಜಾಲದಲ್ಲಿ ಜೈಲು ವಾಸ
ನಡುವೆ ಜೀವ ಉಳಿಸಿಕೊಳ್ಳಲು ಅವಿರತ ಹೋರಾಟ
ಯಾರಿಗೂ ಯಾರು ಇಲ್ಲವೆಂಬೂ ಅನಾಥ ಭಾವ
ವೈದ್ಯನೇ ಗತಿಮತಿ ದೇವೂಭವ,
ಸಮಯ ಸುಮಾರಾದರೆ
ಹಾರಿ ಹೋಗುವುದು ಜೀವ
ನಮ್ಮ ಜೀವಕ್ಕೆ ನಾವೇ ರಕ್ಷಕ
ಏನೇ ಆದರೂ ಮನೆ, ತನುಮನಕ್ಕೆ
ಚೇತೂಹಾರಕ!
ಹೇಗೆ ಬೇಕೋ ಹಾಗೆ ಹಾರಾಡಲು
ಗೃಹಾಕಾಶದಿ ಇದೆ ಅವಕಾಶ
ಹೊರ ಹೋಗುವ ಉಸಿರಿಗೆ ಮುಸುಕು
ತಿರುಗುವ ಕಾಲಿಗೂ ಕಡಿವಾಣ
ಹುಚ್ಚುಮನದ ಹಂಬಲಕ್ಕೆ ಮೂಗುದಾರ ಇದ್ದರಷ್ಟೇ ಉಳಿಗಾಲ
ತನ್ನ ದುರಾಸೆಗಾಗಿ
ಪ್ರಕೃತಿ ನಾಶ ಮಾಡಿದ
ಮಾನವನ ಬದುಕನು ಬಧಿರಗೊಳಿಸಲು
ಪ್ರಕೃತಿಯೇ ನೀಡಿದೆ
ಗೃಹ ಬಂಧನದ ಶಿಕ್ಷೆ
ಉಸಿರು ನಿಲ್ಲಿಸಲು ಪ್ರಾಣವಾಯುವಿನ ಕೊರತೆ
ಲಕ್ಷ್ಮೀದೇವಿ ಕಮ್ಮಾರ (ಪತ್ತಾರ)
ಕತೆಗಾರ್ತಿ ಲಕ್ಷ್ಮೀದೇವಿ ಕಮ್ಮಾರ (ಪತ್ತಾರ) ಅವರು ಸರ್ಕಾರಿ ಪ್ರೌಢ ಶಾಲಾ ಶಿಕ್ಷಕಿ. ಯಶಸ್ಸಿನ ದಾರಿದೀಪಗಳು (ಕಥಾ ಸಂಕಲನ-ವೆಂಕಟರಾಮಯ್ಯ ಶ್ರೀನಿವಾಸ್ ರಾವ್ ದತ್ತಿ ಪ್ರಶಸ್ತಿ ಪುರಸ್ಕೃತ ಕೃತಿ) ಕತ್ತಲೆಗಂಟಿದ ಬೆಳಕು:ಈ ಕವನ ಸಂಕಲನಕ್ಕೆ ಕಾವ್ಯ ಮಾಣಿಕ್ಯ ರಾಜ್ಯ ಪ್ರಶಸ್ತಿ (2017) ಲಭಿಸಿದೆ. ಅವರ ಹಲವು ಕವನ, ಲೇಖನಗಳು ಕನ್ನಡದ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರಿಗೆ ಬಸವಚೇತನ ಪ್ರಶಸ್ತಿ ರುಕ್ಮಿಣಿಬಾಯಿ ಸ್ಮಾರಕ ಪ್ರಶಸ್ತಿ. ಟೈಮ್ಸ್ ಆಫ್ ಇಂಡಿಯಾದವರ ಟಾಫಿಟ್ ಅವಾರ್ಡ್(ಶಿಕ್ಷಣಕ್ಕಾಗಿ)2018-19, ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ(2019) ಲಭಿಸಿವೆ.
More About Author