Poem

ಮೈಸೂರಿನ ಸೊಬಗು

ಏನು ಚಂದೋ ಅದೇನು ಅಂದವೋ
ಮೈಸೂರಿನ ಸೊಬಗು ಮರೆಯದ ನೆನಪು ಚಾಮುಂಡಿಬೆಟ್ಟದ ತಾಣದ ಬೆರಗು
ನೋಡಲು ಸಾಲುವುದಿಲ್ಲ ಎರಡು ಕಣ್ಣು ||

ಸುಂದರ ಅರಮನೆಯ ನೋಟ
ಮೃಗಾಲಯದಲ್ಲಿ ಪ್ರಾಣಿ-ಪಕ್ಷಿಗಳ ಆಟ
ನಂದಿ ವಿಗ್ರಹದ ನೋಟ
ಕಣ್ಣುಗಳಿಗೆ ಆನಂದದ ಊಟ ||

ಚಾಮುಂಡಿ ತಾಯಿಯ ದರ್ಶನ
ನೋಡುಗರ ಮನ ಪುಳಕಿಸುವುದು
ತಾಯಿಯ ದರ್ಶನ ಮಾಡಲು
ಕಾಯುತ್ತಿರುವುದು ಎಲ್ಲರ ಮನವೂ ||

ಸಂಸ್ಕೃತಿ ನೆಲೆಯ ತವರೂರು
ಸಾಹಿತ್ಯ ಕ್ಷೇತ್ರದ ಕವಿಗಳು ಇಲ್ಲಿ ನೂರಾರು
ಸ್ನೇಹದಲ್ಲಿ ಮೈಸೂರಿಗೆ ಸಮನಾರು
ಇಲ್ಲಿ ಮಾತೃ ಹೃದಯದ ಜನರು ||

ದಸರಾ ವೈಭವದ ನಾಡು
ಕಲೆ-ಸಂಸ್ಕೃತಿಯ ಬೀಡು
ರಾಜವಂಶದ ಪರಂಪರೆಯ ಊರು
ಇದುವೇ ನಮ್ಮ ಹೆಮ್ಮೆಯ ಮೈಸೂರು ||

- ಮೊಹಮ್ಮದ್ ಅಜರುದ್ದೀನ್

ಮೊಹಮ್ಮದ್ ಅಜರುದ್ದೀನ್

ಲೇಖಕ ಮೊಹಮ್ಮದ್ ಅಜರುದ್ದೀನ್ ಅವರು ಮೂಲತಃ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದವರು. ಪ್ರಸ್ತುತ ಹಾಸನದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯ  ಎಂಜನಿಯರಿಂಗ್ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದಾರೆ. ಜೊತೆಗೆ,  ಪ್ರಾದೇಶಿಕ ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುತ್ತಿದ್ದಾರೆ.

ಕೃತಿಗಳು : ಅಕ್ಕಿ-ಚುಕ್ಕಿ, ನಿಸರ್ಗ ನಾದ, ಹೆಬ್ಬೊಳಲು.

ಪ್ರಶಸ್ತಿ-ಪುರಸ್ಕಾರಗಳು:  ಕಾವ್ಯಶ್ರೀ ಪ್ರಶಸ್ತಿ

More About Author