
ಶಸ್ತ್ರಗಳಿಲ್ದೆ
ವಿಶ್ವವನ್ನೆಲ್ಲಾ ಗೆದ್ದ
ಅದೃಶ್ಯ ಮಾರಿ
ದ್ವೇಷಮಾಡದೆ
ಜಗವನ್ನೆಲ್ಲ ಸುತ್ತಿ
ಸೊಂಕು ಹಂಚಿದೆ
ಜನರನ್ನೆಲ್ಲ
ಗಾಳಿಯಲಿ ಸಿಕ್ಕಿಸಿ
ಹೆಣಮಾಡಿದೆ
ಜಾತಿಮತದ
ತಾರತಮ್ಯವ ಮಾಡ್ದೆ
ಬುದ್ದಿ ಕಲ್ಸಿದೆ
ಅಹಂಕಾರವ
ಸೊಂಕಿನ ಬಂದೂಕಲಿ
ದ್ವಂಸ ಮಾಡಿದೆ
ಮನುಷ್ಯರೆಲ್ರೂ
ಸಮಾನವೆಂಬ ಮಂತ್ರ
ಮೊಳಗಿಸಿದೆ
– ಕಾಡಜ್ಜಿ ಮಂಜುನಾಥ
ಕಾಡಜ್ಜಿ ಮಂಜುನಾಥ
ಕವಿ, ಕಾಡಜ್ಜಿ ಮಂಜುನಾಥ ಮೂಲತಃ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನವರು. ಇತಿಹಾಸದಲ್ಲಿ ಎಂ. ಎ ಪದವಿ ಹೊಂದಿರುವ ಅವರು ಪ್ರಸ್ತುತ ಹಂಪಿಯ ಕನ್ನಡ ವಿಶ್ವವಿದ್ಯಾಲಯ ಚರಿತ್ರೆ ವಿಭಾಗದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ. ವೃತ್ತಿಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕತೆ, ಕವನ, ಚುಟುಕು, ಹಾಯ್ಕು ,ಲೇಖನ , ಪ್ರಬಂಧ ಬರೆಯುವುದು, ಕವಿಗೋಷ್ಠಿಗಳಲ್ಲಿ ಭಾಗವಹಿಸುವುದು, ಸಂಗೀತ ಹಾಡುವುದು, ಕೇಳುವುದು, ಪತ್ರಿಕೆಗಳನ್ನು, ಕಾದಂಬರಿ, ಸಂಶೋಧನಾ ಲೇಖನಗಳು, ಪುಸ್ತಕಗಳನ್ನು ಓದುವುದು, ಕ್ರಿಕೆಟ್ ಆಡುವುದು ಅವರ ಹವ್ಯಾಸ.
ಪ್ರಶಸ್ತಿಗಳು : ಶಿಕ್ಷಣ ಸಿರಿ, ಸಾಹಿತ್ಯ ಕೇಸರಿ ಪ್ರಶಸ್ತಿ
ಕೃತಿಗಳು : ಚೈತ್ರದ ಸಿರಿ
More About Author