ಬೆನಕ ಬುಕ್ಸ್‌ ಬ್ಯಾಂಕ್

ಪುಸ್ತಕ ಪ್ರಕಟಣೆ ಮತ್ತು ಆನ್‌ಲೈನ್ ಮಾರಾಟ ವ್ಯವಸ್ಥೆ ಎರಡನ್ನೂ ಹೊಂದಿರುವ ಪ್ರಕಾಶನ ಸಂಸ್ಥೆ ಶಿವಮೊಗ್ಗದ ಹೊಸನಗರ ತಾಲೂಕಿನ ಬೆನಕ ಬುಕ್ಸ್ ಬ್ಯಾಂಕ್, ಹೊಸನಗರ ತಾಲ್ಲೂಕಿನ ಮೊಟ್ಟಮೊದಲ ಅಧಿಕೃತ ಪುಸ್ತಕ ಪ್ರಕಾಶನ ಸಂಸ್ಥೆ. ಈಗಾಗಲೇ ಕಾವ್ಯ, ಕಥೆ, ವೈಚಾರಿಕ ಬರಹಗಳ ಕೃತಿಗಳು ಹೀಗೆ ವಿವಿಧ ಪ್ರಕಾರಗಳಲ್ಲಿ ಹಲವಾರು ಪುಸ್ತಕಗಳನ್ನು ಪ್ರಕಟಿಸಿದೆ.

ಎನ್.ಆರ್‌.ರೂಪಶ್ರೀ ಶಿರಸಿ ಅವರ ’ನಿನ್ನ ಪ್ರೀತಿಯ ನೆರಳಿನಲ್ಲಿ...’, ಟೋಟೋ ಪ್ರಶಸ್ತಿ ಪುರಸ್ಕೃತ ಪ್ರಸಾದ್ ಶೆಣೈ ಆರ್‌.ಕೆ ಅವರ ಕಾಡಿನ ಕಥಾನಕಗಳ ಸಂಕಲನ ’ಒಂದು ಕಾಡಿನ ಪುಷ್ಪಕ ವಿಮಾನ’, ಓ.ಆರ್‌.ಪ್ರಕಾಶ್ ಅವರ ’ಅಂಡಮಾನ್ ಆಳ-ಅಗೆದಷ್ಟೂ ಕರಾಳ’, ರಾಘವೇಂದ್ರ ಅಡಿಗ ಎಚ್‌ ಎನ್ ಅವರ ’ಅನವರತ ಅಪ್ಪು’, ಚಿತ್ರ ಸಿ. ಅವರ ’ಅನಾಮಿಕಳ ಅಂತರಂಗ’, ಸುಧಾ ಶರ್ಮ ಚವತ್ತಿ ಅವರ ’ನಮ್ಮೊಳಗೆ ನಾವು’, ಮಾಲತಿ ಭಟ್ ಅವರ ’ದೀಪದ ಮಲ್ಲಿಯರು”, ಶೋಭಾ ಹೆಗಡೆ ಅವರ ’ಅವಳೆಂಬ ಸುಗಂಧ’ ಇವು ಬೆನಕದ ಇತ್ತೀಚಿನ ಕೆಲವು ಪ್ರಕಟಣೆಗಳು.

ಎನ್.ಆರ್‌.ರೂಪಶ್ರೀ ಶಿರಸಿ ಅವರ ’ನಿನ್ನ ಪ್ರೀತಿಯ ನೆರಳಿನಲ್ಲಿ...’ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಪ್ರತಿಷ್ಠಿತ 'ಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿ' ದೊರಕಿದೆ. ಅಂತಃಕರಣ ಬರೆದ ’ಅಮ್ಮನ ಸಿಟ್ಟು’ ಪುಸ್ತಕಕ್ಕೆ ಧಾರವಾಡದ ದ.ರಾ.ಬೇಂದ್ರೆ ಸ್ಮಾರಕ ರಾಷ್ಟ್ರೀಯ ಟ್ರಸ್ಟಿನ ’ಬೇಂದ್ರೆ ಗ್ರಂಥ ಬಹುಮಾನ’. ’ಕಣ್ಣಮಿಂಚು’ ಪುಸ್ತಕಕ್ಕೆ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ’ವಸುಧೇವ ಭೂಪಾಳಂ ದತ್ತಿ ಪ್ರಶಸ್ತಿ’, ’ನಾವೂ ನೀವೂ ಫ್ರೆಂಡ್ಸ್ ಅಲ್ವಾ’ ನಾಟಕ ಕೃತಿಗೆ ಕೆ.ರೇಣುಕಪ್ಪಗೌಡ ಪ್ರತಿಷ್ಠಾನ, ಶಿವಮೊಗ್ಗ ಇವರ ’ಸಂಕ್ರಾಂತಿ ನಾಟಕ ಕೃತಿ ಪುರಸ್ಕಾರ- 2021’ ಮತ್ತು ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ’ಚಿಣ್ಣರ ಚಂದಿರ ಪುಸ್ತಕ ಪ್ರಶಸ್ತಿ’ ಬಂದಿವೆ. ಓ.ಆರ್‌.ಪ್ರಕಾಶ್ ಅವರು ಬರೆದ ’ಅಂಡಮಾನ್ ಆಳ-ಅಗೆದಷ್ಟೂ ಕರಾಳ’ ಪುಸ್ತಕ 3ನೇ ಮುದ್ರಣ ಕಂಡಿದೆ.

BOOKS BY BENAKA BOOKS BANK

ಹರದಾರಿ ಮಾತು

Publisher Address

ಬೆನಕ ಬುಕ್ಸ್ ಬ್ಯಾಂಕ್, ಯಳಗಲ್ಲು, ಕೋಡೂರು ಅಂಚೆ, 577418, ಹೊಸನಗರ ತಾಲೂಕು, ಶಿವಮೊಗ್ಗ

"Yalagallu, Kodur Post, 577418, Hosanagar, Shimoga"

Website

https://benakabooksbank.myinstamojo.com/

Publisher Contact

7338437666

Email

benakabooksbank@gmail.com