Date: 22-12-2024
Location: ಮಂಡ್ಯ
ಮಂಡ್ಯ: ಕಳೆದ ೧೫, ೨೦ ವರ್ಷಗಳಲ್ಲಿ ಪೃವರ್ತಮಾನಕ್ಕೆ ಬರುತ್ತಿರುವಂತಹ ಲೇಖಕರು ಲೇಖಕಿಯರನ್ನು ಹೊಸತಲೆಮಾರು ಎಂದು ನಾವು ಪರಿಗಣಿಸಿದ್ಧೇವೆ. ಬದಲಾಗುತ್ತಿರುವ ಮೌಲ್ಯಗಳು, ಪರಿಸ್ಥಿತಿಗಳು, ಸಂವೇಧನೆಗಳು ಎಲ್ಲರನ್ನು ಬಹಳ ವಿಚಿತ್ರವಾದ ದಿಕ್ಕಿನಲ್ಲಿ ಎಲ್ಲರನ್ನು ಕರೆದುಕೊಂಡು ಹೊಗುತ್ತಿವೆ. ಹೊಸತಲೆಮಾರಿನ ವಿಶಿಷ್ಟ ಗುಣವೆಂದರೆ ಒಂದು ವೈವಿಧ್ಯತೆ ಮತ್ತು ವಿಭಿನ್ನತೆ. ಯಾವ ಸಾಹಿತ್ಯ ವಿಭಿನ್ನವಾದ ಓದಿಗೆ ಆಹ್ವಾನಿಸುತ್ತದೆಯೋ ಅದೇ ಬಹಳ ಮುಖ್ಯ ಸಾಹಿತ್ಯವಾಗಿರುತ್ತದೆ. ಯಾವುದೇ ಒಂದು ಕೃತಿಯ ಅದೃಷ್ಯ ಓದುಗರು,ಅಗೋಚರ ಓದುಗರು, ಯಾವುದೇ ಪ್ರಭಾವಕ್ಕೂ ಒಳಗಾಗದೆ ಸಾಹಿತ್ಯದ ಗುಣಕ್ಕಾಗಿ, ಅದರೊಳಗಿನ ಮೌಲ್ಯದ ಗುಣಕ್ಕಾಗಿ, ಅದರೊಳಗಿನ ಪ್ರಜ್ಞೆಯ ಕಾರಣಕಕ್ಕಾಗಿ ಓದುವವರೆ ನಿಜವಾದ ಓದುಗರಾಗಿರುತ್ತಾರೆ ಎಂದು ಖ್ಯಾತ ವಿಮರ್ಶಕರಾಗಿರುವಂತಹ ವಿಕ್ರಂ ವಿಸಾಜಿಯವರು ಮಂಡ್ಯದಲ್ಲಿ ನೆಡೆಯುತ್ತಿರುವ 3ನೇ ದಿನದ ನುಡಿ ಜಾತ್ರೆಯಲ್ಲಿ ತಮ್ಮ ಮಾತುಗಳನ್ನಾಡಿದರು
ನಮ್ಮ ಸಾಹಿತಿಗಳಲ್ಲಿ ಇವತ್ತು ಕೂಡ ಸಾಹಿತ್ಯ ಎನ್ನುತ್ತಿದ್ದಂತೆ ನಮಗೆ ಕಥೆಗಳು, ಕವನಗಳು, ನಾಟಕಗಳು, ತಕ್ಷಣ ನೆನಪಾಗುತ್ತದೆ. ಅದರಲ್ಲೂ ಪದ್ಯಗಳು ಕವನಗಳು ಹೆಚ್ಚಾಗಿ ನೆನಪಾಗುತ್ತವೆ.ಹೊಸ ತಲೆಮಾರಿನ ಬರಹಗಾರರಲ್ಲಿ ಪದ್ಯಗಳು ಹೆಚ್ಚಾಗಿ ಹೊರಹೊಮ್ಮುತ್ತಿದೆ. ಕವನಗಳು ಕೇವಲ ಕವಿ ಜೀವನದ ಬೇಸರ ಹರಿಸಿದರೆ ಸಾಲದು ಅದು ಎಲ್ಲ ಜನರ ಭಾವನೆಗಳನ್ನು ಹೊರಹೊಮ್ಮಿಸುವಂತಿರಬೇಕು. ಕಥೆ, ಕವನಗಳು ಕೇವಲ ಪುಸ್ತಕಕ್ಕೆ ಸೀಮಿತವಾಗಿಲ್ಲ, ಸಮಾಜಿಕ ಜಾಲತಾಣಗಳಲ್ಲಿಯು ಸಹ ಕಥೆ, ಕವನಗಳು ಬಿತ್ತರಿಸುತ್ತಿರುವುದು ಬಹಳ ಸಂತಸವನ್ನುಂಟು ಮಾಡಿದೆ.ಪುಸ್ತಕಗಳು ಮೂಲೆ ಗುಂಪುಗಳಾಗಿಬಿಡುತ್ತವೇನೋ ಎಂಬ ಆತಂಕ ಇದೆಯಾದರು ಈ ಆತಂಕದ ನಡುವೆಯು ಹೊಸ ತಲೆಮಾರಿನ ಬರಹಗಾರರು ಸಾಹಿತ್ಯ ಕೃಷಿ ಮಾಡುತ್ತಿರುವುದು ಆಶಾ ದಾಯಕವಾದ ಸಂಗತಿಯಾಗಿದೆ ಎಂದು ನಿವೃತ್ತ ಪ್ರಾಧ್ಯಾಪಕರಾದ ಸಿ. ಕೆ. ಜಗದೀಶ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಹೊಸ ತಲೆಮಾರಿನ ಕನ್ನಡ ಸಾಹಿತ್ಯ ಮತ್ತು ಬಹುಮುಖೀ ಕ್ಷೇತ್ರಗಳ ಬರಹಾರರ ವಿಷಯದ ಕುರಿತು ಮಾತನಾಡಿದ ಮೇಘನಾ ಸುಧೀಂದ್ರ ಅವರು ಕನ್ನಡ ಸಾಹಿತ್ಯಕ್ಕೆ ಹಲವು ದಶಕದ ಇತಿಹಾಸವಿದೆ. ಹೊಸತಲೆಮಾರಿನ ಕನ್ನಡ ಸಾಹಿತ್ಯದಲ್ಲಿ ಕಥೆ, ಕಾದಂಬರಿ, ಕವಿತೆ, ಪ್ರಬಂಧ, ಲಹರಿ, ಅನುವಾದಗಳ ಪ್ರಕಾರದಲ್ಲಿಯೆ ಇನ್ನೂ ಬರಿಯುತ್ತಿದ್ದಾರೆ ಅಂದರೆ ಶತಮಾನಗಳ ನಂತರವು ಸಾಹಿತ್ಯಕ್ಕೆ ಯಾವುದೇ ಹೊಸ ಪ್ರಕಾರದ ಸಾಹಿತ್ಯ ಬಂದಿಲ್ಲ. ಪ್ರವಾಸ ಮತ್ತು ಹಣಕಾಸಿನ ವಿಷಯದ ಕುರಿತು ತಿಳಿಯಲು ಡಿಜಿಟಲ್ ಮಾಧ್ಯಮದ ಮೊರೆ ಹೋಗಬೇಕಾಗಿದೆ. ಹಳೆಯದೆಲ್ಲವೂ ಶ್ರೇಷ್ಠ ಎಂದು ನಂಬದೆ ಅವರದ್ದೇ ದಾರಿಯಲ್ಲಿ ನೆಡೆಯುತ್ತಿದ್ದಾರೆ ಎಂಬುದು ಖುಷಿಯ ವಿಚಾರ. ಈಗ ಹೆಣ್ಣು ಮಕ್ಕಳು ಎಲ್ಲಾ ಪ್ರಕಾರದಲ್ಲೂ ಬರೆಯುತ್ತಿರುವುದು ಅತ್ಯಂತ ಶ್ಲಾಘನೀಯ ಸಂಗತಿಯಾಗಿದೆ. ಲೇಖಕ ಮಾರಟಗಾರನಾಗಬಾರದು, ಪ್ರಕಾಶಕನಾಗಬಾರದು, ಎಂಬ ಹಮ್ಮು ಬಿಮ್ಮು ಇಲ್ಲದೆ ಬ್ಯುಸಿನೆಸ್ ಇರುವ ಎಲ್ಲಾ ಜಾಗದಲ್ಲಿಯೂ ಪುಸ್ತಕಗಳನ್ನು ಮಾರಾಟ ಮಾಡಿ ತಮ್ಮ ಸಾಹಿತ್ಯವನ್ನು ಸಾಮಾನ್ಯ ಜನರಿಗೆ ತಲುಪಿಸುವ ಕಡೆಗೆ ಗಮನ ಹರಿಸುತ್ತಿದ್ದಾರೆ ಎಂದು ತಮ್ಮ ಅನುಭವದ ಮಾತುಗಳನ್ನು ಹಂಚಿಕೊಂಡರು.
ಇತ್ತೀಚಿನ ಸಾಹಿತ್ಯದ ವಸ್ತು ವೈವಿಧ್ಯದ ಬಗೆಗೆ ಡಾ. ರಮೇಶ ಎಸ್. ಕತ್ತಿ ಅವರು ಹಾಗೇ ಚರಿತ್ರೆ ಕೇಂದ್ರಿತ ಸಾಹಿತ್ಯ ಪ್ರಕಾರದ ಕುರಿತು ಸಹನಾ ವಿಜಯಕುಮಾರ್ ಅವರು ಮಾತನಾಡಿದರು. ಸ್ವಾಗತವನ್ನು ಬಿ. ಎನ್. ಕೃಷ್ಣಪ್ಪ ಮತ್ತು ವಂದನಾರ್ಪಣೆಯನ್ನು ಉಮೇಶಚಂದ್ರ ಮಾಡಿದರು. ನಿರ್ವಹಣೆ ಸೋಮಶೇಖರ ಹಲಸಗಿ ಹಾಗೂ ನಿರೂಪಣೆ ಡ್ಯಾನಿ ಪಿರೇರ ನೆರೆವೇರಿಸಿ ಕೊಟ್ಟರು.
ಮಂಡ್ಯ: ವಿದೇಶದಲ್ಲಿ 40 ಲಕ್ಷಕ್ಕೂ ಅಧಿಕ ಕನ್ನಡಿಗರಿದ್ದು ಅವರಲ್ಲಿ 5 ಲಕ್ಷಕ್ಕೂ ಅಧಿಕ ಕನ್ನಡಿಗರು ಅಮೆರಿಕಾದಲ್ಲೇ ಇದ್ದ...
ಕನ್ನಡ ಸಾಹಿತ್ಯ ಪರಿಷತ್ತಿನ ಸಭೆಯಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬಳ್ಳಾರಿಯಲ್ಲಿ ಆಯೋಜಿಸಲು ನಿರ...
ಮಂಡ್ಯ: 100 ವರ್ಷ ಪೂರೈಸಿದ ಶಾಲೆಗಳಿಗೆ ಆಟದ ಮೈದಾನ ಇತ್ತು. ಇಂದು ಅವು ಇಲ್ಲ. ಸ್ಥಳೀಯ ರಾಜಕಾಣಿಗಳ, ಪ್ರಭಾವಿಗಳ ...
©2024 Book Brahma Private Limited.