Date: 22-12-2024
Location: ಮಂಡ್ಯ
ಮಂಡ್ಯ: 100 ವರ್ಷ ಪೂರೈಸಿದ ಶಾಲೆಗಳಿಗೆ ಆಟದ ಮೈದಾನ ಇತ್ತು. ಇಂದು ಅವು ಇಲ್ಲ. ಸ್ಥಳೀಯ ರಾಜಕಾಣಿಗಳ, ಪ್ರಭಾವಿಗಳ ಕೈ ಇದೆ. ಅಧಿಕಾರಿಗಳನ್ನು ಕೇಳಿದರೆ ಸರಿಯಾದ ಉತ್ತರ ಸಿಗುವುದಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ವಿಷಾದ ವ್ಯಕ್ತಪಡಿಸಿದರು.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ "ಸರ್ಕಾರಿ ಕನ್ನಡ ಶಾಲೆಗಳ ಸಬಲೀಕರಣ: ಸಾಧ್ಯತೆ ಮತ್ತು ಸವಾಲುಗಳು" ಗೋಷ್ಠಿಯಲ್ಲಿ ಮಾತನಾಡಿದ ಅವರು, 1920 ರಿಂದ 2024 ರ ನಡುವಿನ 100 ವರ್ಷಗಳಲ್ಲಿ ಎಷ್ಟು ಶಾಲೆಗಳು ಆರಂಭವಾಗಿದೆ ಎಂದು ನೋಡಿದರೆ 2,300 ಶಾಲೆಗಳು. ಇವೆಲ್ಲವೂ ಶತಮಾನ ಕಂಡಿವೆ. ಈ ಶತಮಾನದ ಕಂಡ ಶಾಲೆಗಳಿಗೆ ಜಾಗ ಕೊಟ್ಟವರು ದಾನಿಗಳು. ಈಗ ಹಿಂದೆ ತಿರುಗಿ ನೋಡಿದರೆ ಸುಮಾರು 17,000 ಶಾಲೆಗಳಿಗೆ ಹಕ್ಕು ಪತ್ರಗಳಿಲ್ಲ. ಶಾಲೆಯ ಆಟದ ಮೈದಾನ ಒತ್ತುವರಿ ಆಗಿದೆ ಎಂದು ಸರ್ಕಾರಿ ಶಾಲೆಗಳ ಪರಿಸ್ಥಿತಿ ಬಗ್ಗೆ ವಿಸ್ತೃತವಾಗಿ ಮಾತನಾಡಿದರು.
ನಾವು ಇವತ್ತು ಕನ್ನಡ ಶಾಲೆ ಸಮಸ್ಯೆಯನ್ನ ಶಾಲೆಯ ಸಮಸ್ಯೆಯಾಗಿ ನೋಡಿದ್ರೆ ಅದು ಪರಿಹಾರ ಆಗಲ್ಲ. ಇವತ್ತು ಕನ್ನಡಕ್ಕೆ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಸಮಸ್ಯೆ ಇದೆ. ಹೀಗೆ ಮೂರು ಮುಖವಾಗಿ ಬೆಳೆಯುತ್ತಿರುವ ಈ ಸಮಸ್ಯೆಯನ್ನ ನಾವು ಅರ್ಥ ಮಾಡಿಕೊಂಡು ಕನ್ನಡವನ್ನ ಪುನರ್ ಕಟ್ಟುವ ಹೊಣೆಗಾರಿಕೆ ಹೊತ್ತು ಕೊಳ್ಳಬೇಕಾಗುತ್ತದೆ ಎಂದು ಪುರುಷೋತ್ತಮ ಬಿಳಿಮಲೆ ಹೇಳಿದರು
ಮಂಡ್ಯ: ವಿದೇಶದಲ್ಲಿ 40 ಲಕ್ಷಕ್ಕೂ ಅಧಿಕ ಕನ್ನಡಿಗರಿದ್ದು ಅವರಲ್ಲಿ 5 ಲಕ್ಷಕ್ಕೂ ಅಧಿಕ ಕನ್ನಡಿಗರು ಅಮೆರಿಕಾದಲ್ಲೇ ಇದ್ದ...
ಕನ್ನಡ ಸಾಹಿತ್ಯ ಪರಿಷತ್ತಿನ ಸಭೆಯಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬಳ್ಳಾರಿಯಲ್ಲಿ ಆಯೋಜಿಸಲು ನಿರ...
ಮಂಡ್ಯ: ಮಳೆ ತೇವವನ್ನು ಹೊತ್ತಿಟ್ಟ ದಾರಿ, ಕಾಲುಜಾರಿ ಬಿದ್ದ ಪುಟಗಳ ಕಥೆಗಳಂತಿದ್ದವು. ಜನರು ಗಲುಬೆ ಗದ್ದಲಗಳ ನಡುವೆ ಪುಸ...
©2024 Book Brahma Private Limited.