Sirisampige ಮನುಷ್ಯನ ಅಸ್ತಿತ್ವದ ಪ್ರಶ್ನೆ `ಸಿರಿಸಂಪಿಗೆ’


"‘ಸಿರಿಸಂಪಿಗೆ' ನಾಟಕ ಪ್ರಧಾನವಾಗಿ ಮನುಷ್ಯನ ಅಸ್ತಿತ್ವದ ಪ್ರಶ್ನೆಗಳನ್ನು ಎದುರಿಸುತ್ತದೆ. ಮೊದಲೇ ಹೇಳಿದಂತೆ ನಾಟಕದ ನಾಯಕ ಶಿವನಾಗದೇವ ನಿದ್ರಾಪರವಶ ಅವಸ್ಥೆಯಲ್ಲಿ ದೀಪದ ಮೊಲ್ಲೆಯ ರೂಪದ ಹೆಣ್ಣನ್ನು ಕಾಣುತ್ತಾನೆ. ಹಾಗೆ ಕಾಣಿಸಿದ ದೀಪದ ಮೊಲ್ಲೆಗೆ ಮನಸೋಲುತ್ತಾನೆ. ಆಕೆಯನ್ನು ಪಡೆಯಬೇಕೆಂಬ ಹಂಬಲದಲ್ಲಿ ಚಿಂತಾಕ್ರಾಂತನಾಗುತ್ತಾನೆ," ಎನ್ನುತ್ತಾರೆ ಚಂದನ್ ಎಸ್.ವಿ. ಅವರು ಚಂದ್ರಶೇಖರ ಕಂಬಾರ ಅವರ ‘ಸಿರಿಸಂಪಿಗೆ’ ಕೃತಿ ಕುರಿತು ಬರೆದ ಅನಿಸಿಕೆ.

ಸಿರಿ ಸಂಪಿಗೆ ನಾಟಕ ಓದಿದ ಮೇಲೆ ನೆನಪಿಗೆ ಮೊದಲು ಬರುವುದು ನಾಗ ಮಂಡಲ ಗಿರೀಶ್ ಕಾರ್ನಾಡ್ ಅವರು ಬರೆದಿರುವ ನಾಟಕ, ಇದನ್ನ ಸಿನಿಮಾ ಕೂಡ ಮಾಡಿದ್ದಾರೆ. ಟಿ.ಎಸ್. ನಾಗಭರಣ ಸಿರಿ ಸಂಪಿಗೆ ನಾಟಕದಲ್ಲೂ ಅದೇ ರೀತಿ ನೋಡಬಹುದು

ರಾಜನದವನು ಸಂಪಿಗೆಯನ್ನು ಮದುವೆಯಾದರೂ ಮನಸು ಕನಸುಗಳಲ್ಲಿ ದೀಪದ ಮೊಲ್ಲೆಯನ್ನು ಬಯಸು ತಾನೆ. ಮನಸ್ಸಿನ ಮೂಲಕ ದೇಹವನ್ನು, ದೇಹದ ಮೂಲಕ ಮನಸ್ಸನ್ನು ತಿಳಿಯಲು ನಿರಂತರವಾಗಿ ಪ್ರಯತ್ನಿಸುವ ಇವನ ಹೋರಾಟ ಮನುಷ್ಯ ಪ್ರಪಂಚದ ನಿಗೂಢಗಳನ್ನು, ಎಣೆಯಿಲ್ಲದ ಮೂಲ ಚೂಲಗಳನ್ನು ಅನ್ವೇಷಿಸುತ್ತದೆ.

‘ಸಿರಿಸಂಪಿಗೆ' ನಾಟಕ ಪ್ರಧಾನವಾಗಿ ಮನುಷ್ಯನ ಅಸ್ತಿತ್ವದ ಪ್ರಶ್ನೆಗಳನ್ನು ಎದುರಿಸುತ್ತದೆ. ಮೊದಲೇ ಹೇಳಿದಂತೆ ನಾಟಕದ ನಾಯಕ ಶಿವನಾಗದೇವ ನಿದ್ರಾಪರವಶ ಅವಸ್ಥೆಯಲ್ಲಿ ದೀಪದ ಮೊಲ್ಲೆಯ ರೂಪದ ಹೆಣ್ಣನ್ನು ಕಾಣುತ್ತಾನೆ. ಹಾಗೆ ಕಾಣಿಸಿದ ದೀಪದ ಮೊಲ್ಲೆಗೆ ಮನಸೋಲುತ್ತಾನೆ. ಆಕೆಯನ್ನು ಪಡೆಯಬೇಕೆಂಬ ಹಂಬಲದಲ್ಲಿ ಚಿಂತಾಕ್ರಾಂತನಾಗುತ್ತಾನೆ. ದೀಪದ ಮೊಲ್ಲೆ ಬೇರೆ ಯಾರೂ ಅಲ್ಲ ಶಿವನಾಗದೇವನ ಚೈತನ್ಯವೇ ಆಗಿರುತ್ತದೆ ಎಂಬುದು ನಾಟಕ ಓದುತ್ತಾ ಹೋದರೆ ತಿಳಿಯುತ್ತೆ.

ಶಿವನಾಗದೇವನ ಅರ್ಧ ಕಾಳಿಂಗ ಸಿರಿಸಂಪಿಗೆಯನ್ನು ಅಮೂರ್ತರೂಪದಲ್ಲಿ ಸಂಧಿಸಿ ಸಿರಿಸಂಪಿಗೆ ಬಸಿರಾಗಿಸುವ ಸರಿಸಂಪಿಗೆಯನ್ನು ಮದುವೆಯಾಗಿಯೂ ಅವಳ ಸಮಾಗಮವನ್ನು ಬಯಸದ ಶಿವನಾಗದೇವ ಬಸಿರಾದ ಸಿರಿಸಂಪಿಗೆಯ ಮೇಲೆ ಅನುಮಾನ ಪಡುತ್ತಾನೆ . ಶಿವನಾಗದೇವನ ಎಲ್ಲ ದ್ವಂದ್ವಗಳನ್ನು ಸಂಪಿಗೆ ಅವನನ್ನು ಬಯಸುತ್ತಾಳೆ. ಶಿವನಾಗದೇವ ದೇಹದ ಪರಿಶುದ್ಧತೆಯನ್ನು, ಆತ್ಮದ ಕೊಳಕು ತನವನ್ನು ಕುರಿತು ವಿಚಾರ ಮಾಡುತ್ತಾನೆ. ಶಿವನಾಗದೇವ ದೈವದ ಬೆಂಬಲವನ್ನು ಕಳೆದುಕೊಂಡವನು. ಶಿವನಾಗದೇವನ ಆಪಾದನೆಗೆ ಗುರಿಯಾದ ಸಿರಿಸಂಪಿಗೆ ಹಿರಿಯರ ಮುಂದೆ ಅವರ ನಿರ್ಧಾರಕ್ಕೆ ಮಣಿದು ನಾಗನ ದಿವ್ಯವನ್ನು ತೊಡುತ್ತಾಳೆ. ಹೆಡೆಬಿಚ್ಚಿದ ನಾಗ ಸಂಪಿಗೆಯ ಗರ್ಭವನ್ನು ತಟ್ಟಿ ಹೊರಡುತ್ತದೆ. 'ಸಿರಿಸಂಪಿಗೆ' ಕೂಸನ್ನು ಹೆರುತ್ತಾಳೆ. ಕಾಳಿಂಗ ಗುಪ್ತರೂಪದಲ್ಲಿ ಬಂದು ಸಂಪಿಗೆಯನ್ನು ಸಂಧಿಸುತ್ತಾನೆ.

ಇಲ್ಲಿಂದ ಮುಂದಕ್ಕೆ ರಾಜ, ಸಂಪಿಗೆ. ಅವಳಿ, ಇವರೆಲ್ಲರೂ ತಮ್ಮ ತಮ್ಮ ನೆಲೆಗಳನ್ನು ಪರಿ ವೀಕ್ಷಿಸಿಕೊಳ್ಳುತ್ತಾರೆ. ಕೊನೆಗೆ ಶಿವನಾಗದೇವ ಮತ್ತು ಕಾಳಿಂಗ ಪರಸ್ಪರ ಮುಖಾಮುಖಿಯಾಗುತ್ತಾರೆ. ಕಾಳಿಂಗನ ಮೇಲೆ ಶಿವನಾಗದೇವ ಜಯ ಸಾಧಿಸುತ್ತಾನೆ. ಯುದ್ಧದಲ್ಲಿ ಗೆದ್ದ ಶಿವನಾಗದೇವನೂ ಕೂಡ ಅಂತ್ಯದಲ್ಲಿ ಸಾವನ್ನು ಅಪ್ಪುತ್ತಾನೆ.

ಕೊನೆಯಲ್ಲಿ ತಿಳಿಯುತ್ತೆ ಸಿರಿಸಂಪಿಗೆಗೆ ಹುಟ್ಟಿದ ಮಗು ಅವನಿಂದಲೇ ಅಂತ, ಕಾಳಿಂಗ ದೇಹವಾದರೆ ಮನಸ್ಸು ಶಿವನಾಗದೇವ ದೇಹ ಸತ್ತಮೇಲೆ ಮನಸ್ಸು ಉಳಿಯುವುದುಂಟೆ.

 

MORE FEATURES

ಕೌಟುಂಬಿಕ ಕಥಾ ವಸ್ತುಗಳ ಮೇಲೆ ರಚಿತವಾದಂಥ ಕಥೆಗಳಿವು

16-03-2025 ಬೆಂಗಳೂರು

"ಸದಾ ಅಕ್ಷೇಪದ ದನಿಯೆತ್ತುತ್ತ ಗೊಣಗಾಡುವ, ಲಕ್ವಾ ಹೊಡೆದು ಹಾಸಿಗೆ ಹಿಡಿದ ಚಿಕ್ಕಮಾವನ ಚಾಕರಿ ಮಾಡಿ ಬೇಸತ್ತ ಭಾಗಮ್...

ಲೇಖಕಿ ದೀಪ ಜೋಶಿ ಅವರಿಗೆ ಕಥೆ ಹೇಳುವ ಕೌಶಲ್ಯ ಒಲಿದಿದೆ

15-03-2025 ಬೆಂಗಳೂರು

"ಕಥೆಯಲ್ಲಿ ಬರುವ ಬದರಿ ಯಾತ್ರೆಯ ಸನ್ನಿವೇಶಗಳು, ಕೇದಾರಲ್ಲಿ ನಡೆದ ಘಟನೆ, ಹರಿಹರದ ಕಾರ್ಖಾನೆ ಲಾಕ್ ಔಟ್, ಮಳಖೇಡದಲ...

ಸಂಗೀತವು ವಿಶ್ವದ ಏಕೈಕ ಸಾರ್ವತ್ರಿಕ ಭಾಷೆ

15-03-2025 ಬೆಂಗಳೂರು

“ಸರಳವಾದ ಭಾಷಾ ಬಳಕೆ ಹಾಗೂ ಸಮಕಾಲೀನ ಯುಗಧರ್ಮದ ಅರಿವಿಗೆ ತಕ್ಕಂತೆ ಸಂಗೀತವು ಬದಲಾಗುತ್ತಿರುವ ರೀತಿಯ ಬಗೆಗಿನ ಸಕ...