Date: 14-12-2024
Location: ಬೆಂಗಳೂರು
ಬೆಂಗಳೂರು: ಎಚ್. ಎಸ್ ಶಿವಪ್ರಕಾಶ್ ಅವರ ಕವಿತೆಗಳ ನಮ್ಮನ್ನು ಸಾಮಾಜಿಕ ಪ್ರತಿಕ್ರಿಯೆಗೆ ಪ್ರೇರಣೆ ನೀಡುತ್ತದೆ. ನಾವು ಬದುಕುವ ಸಮಾಜದ ಬಗ್ಗೆ ಮಾತನಾಡುವ ಹಾಗೆ ಮಾಡುತ್ತವೆ ಕವಿತೆಗಳು ಎಂದು In light of shiva ಕೃತಿ ಸಂಪಾದಕ ಕಮಲಾಕರ್ ಭಟ್ ಹೇಳಿದರು.
13ನೇ ಆವೃತ್ತಿಯ ಬೆಂಗಳೂರು ಸಾಹಿತ್ಯ ಉತ್ಸವದ ಮೊದಲ ಸಾಹಿತ್ಯ ಸಂವಾದ ವೇದಿಕೆಯಲ್ಲಿ ಎ. ಜೆ. ಥಾಮಸ್ ಅವರು ಎಚ್. ಎಸ್. ಶಿವಪ್ರಕಾಶ್ ಅವರ In light of shiva ಪುಸ್ತಕ ಬಿಡುಗಡೆ ಮಾಡಿದರು.
ಎಚ್.ಎಸ್. ಶಿವಪ್ರಕಾಶ್ ಅವರ ಎಲ್ಲಾ ಇಂಗ್ಲಿಷ್ ಕವಿತೆಗಳನ್ನು ಒಂದೆಡೆ ಸೇರಿಸಲಾಗಿದೆ. ಇದರಲ್ಲಿ ಕೆಲವು ಬಿಡುಗಡೆ ಆಗದ ಕವಿತೆಗಳನ್ನು ಸೇರಿಸಲಾಗಿದೆ ಎಂದು ಕಮಲಾಕರ್ ಭಟ್ ಕೃತಿ ಕುರಿತು ತಿಳಿಸಿಕೊಟ್ಟರು.
ಕೃತಿಯನ್ನು ಹೊರತಂದ ದೆಹಲಿಯ ಪ್ರಕಾಶಕರಿಗೆ ಧನ್ಯವಾದ ತಿಳಿಸಿದ ಶಿವಪ್ರಕಾಶ್, ಕೃತಿಯಲ್ಲಿರುವ ಮೂರು ಕವಿತೆಗಳನ್ನು ಓದಿದರು. ಜರ್ಮನಿಯಿಂದ ಬರ್ಲಿನ್ ಗೆ ಹೋಗಬೇಕಾದ ಮಳೆ ಬಂದು ಹೋಗಲಾಗದೇ ಇದ್ದಾಗ ರಚಿಸಿದ 'ರಿವರ್' ಕವಿತೆಯನ್ನು ಶಿವಪ್ರಕಾಶ್ ಓದಿದರು. ಬೆಂಗಳೂರು ಬಗ್ಗೆ ಬರೆದ ಕವಿತೆ ಹಾಗೂ ಕ್ಯೂಬಾದಲ್ಲಿ ಇದ್ದಾಗ ಬರೆದ 'ಲಾಸ್ಟ್ ಆಂಡ್ ಫೌಂಡ್ ಇನ್ ಕ್ಯೂಬಾ' ಎಂಬ ಕವಿತೆಯನ್ನು ಓದಿದರು.
ಶಿವಪ್ರಕಾಶ್ ಅವರ ಕೃತಿ ಬಿಡುಗಡೆ ಮಾಡಿದ ಎ.ಜೆ. ಥಾಮಸ್ ಪುಸ್ತಕದಲ್ಲಿರುವ ವೈಶಿಷ್ಟ್ಯಗಳ ಕುರಿತು ಮಾತನಾಡಿದರು.
ಮಂಡ್ಯ: ವಿದೇಶದಲ್ಲಿ 40 ಲಕ್ಷಕ್ಕೂ ಅಧಿಕ ಕನ್ನಡಿಗರಿದ್ದು ಅವರಲ್ಲಿ 5 ಲಕ್ಷಕ್ಕೂ ಅಧಿಕ ಕನ್ನಡಿಗರು ಅಮೆರಿಕಾದಲ್ಲೇ ಇದ್ದ...
ಕನ್ನಡ ಸಾಹಿತ್ಯ ಪರಿಷತ್ತಿನ ಸಭೆಯಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬಳ್ಳಾರಿಯಲ್ಲಿ ಆಯೋಜಿಸಲು ನಿರ...
ಮಂಡ್ಯ: 100 ವರ್ಷ ಪೂರೈಸಿದ ಶಾಲೆಗಳಿಗೆ ಆಟದ ಮೈದಾನ ಇತ್ತು. ಇಂದು ಅವು ಇಲ್ಲ. ಸ್ಥಳೀಯ ರಾಜಕಾಣಿಗಳ, ಪ್ರಭಾವಿಗಳ ...
©2024 Book Brahma Private Limited.