ರಾಮಾಯಣದಲ್ಲಿನ ಮಹಿಳಾ ಪಾತ್ರಗಳನ್ನು ಉದಾತ್ತವಾಗಿ ನೋಡಬೇಕಿದೆ: ಕೆ. ಜಿ. ರಾಘವನ್

Date: 05-10-2024

Location: ಬೆಂಗಳೂರು


ಬೆಂಗಳೂರು: ‘ರಾಮಾಯಣದಲ್ಲಿ ಬರುವ ಅನೇಕ ಹೆಣ್ಣು ಪಾತ್ರಗಳು ಕೇವಲ ಪಾತ್ರಗಳಾಗಿರದೆ ರಾಮಾಯಣದ ಆಶಯಕ್ಕೆ ಸ್ಪಂದಿಸುವ ಪೂರಕವೂ ಪ್ರೇರಕವೂ ಆಗಿವೆ,’ ಎಂದು ಹಿರಿಯ ವಿದ್ವಾಂಸ ಮತ್ತು ಹಿರಿಯನ್ಯಾಯವಾದಿ ಕೆ ಜಿ ರಾಘವನ್ ಅಭಿಪ್ರಾಯಪಟ್ಟರು.

ಅವರು ಭಾರತೀಯ ವಿದ್ಯಾಭವನವು ನಾಡಹಬ್ಬ ದಸರಾ ಪ್ರಯುಕ್ತ ಏರ್ಪಡಿಸಿದ್ದ ಬೊಂಬೆ ಹಬ್ಬ ಕಾರ್ಯಕ್ರಮದಲ್ಲಿ ರಾಮಾಯಣದ ಸ್ತ್ರೀ ಪಾತ್ರಗಳು ಎನ್ನುವ ವಿಷಯದ ಬಗೆಗೆ ಉಪನ್ಯಾಸ ನೀಡಿದರು.

`ರಾಮಾಯಣವು ಮೊದಲನೆಯದಾಗಿ ಅನುಷ್ಟಪ್ ಛಂದಸ್ಸಿನಲ್ಲಿ ರಚಿಸಿರುವ 24 ಸಾವಿರ ಶ್ಲೋಕಗಳ ಮಹಾಕಾವ್ಯವಾಗಿ, ಎರಡನೆಯದಾಗಿ ಕಥೆಯಕಾರಣದಿಂದ- ಅಂದರೆ ಎಲ್ಲ ವಯೋಮಾನದ ಕಾಲದ ಜನರಿಗೂ ಇಷ್ಟವಾಗುವ ವಸ್ತು, ಭಾಷೆ, ಶೈಲಿಗಳಿಂದಾಗಿ, ಮೂರನೆಯದಾಗಿ ಅನೇಕ ಪವಾಡಗಳಿಂದಾಗಿ- ಇವು ಕೇವಲ ಪವಾಡಗಳು ಮಾತ್ರವಾಗಿರದೆ ಬದುಕಿನಲ್ಲಿ ಉತ್ಸಾಹವನ್ನು, ಆಸಕ್ತಿಯನ್ನು ಹುಟ್ಟಿಸುವ ಪ್ರಕ್ರಿಯೆಯಕಾರಣವಾಗಿ, ನಾಲ್ಕನೆಯದಾಗಿ ಶ್ರಿರಾಮಚಂದ್ರನ ದಿವ್ಯತ್ಯವನ್ನು ಸಾದರಪಡಿಸುವ ಕಾರಣಕ್ಕಾಗಿ ಮುಖ್ಯವಾಗುತ್ತದೆ. ಮಂಥರೆ, ಅಹಲ್ಯೆ ಮುಂತಾದ ಪಾತ್ರಗಳನ್ನು ದುಷ್ಟ ಅಥವ ದುರಂತ ಪಾತ್ರಗಳಾಗಿ ನೋಡುವ ಕ್ರಮ ನಮ್ಮಲ್ಲಿದೆ ಆದರೆ ಆ ಪಾತ್ರಗಳ ಹಿಂದಿರುವ ಉದ್ದೇಶವನ್ನು ಗಮನಿಸಿದರೆ ಅವು ಶ್ರೀರಾಮನ ಅಂದರೆ ವಿಷ್ಣುವಿನ ಅವತಾರದ ಉದ್ದೇಶವನ್ನು ಈಡೇರಿಸಲು ಕಾರಣವಾಗುವ ಪಾತ್ರಗಳಾಗಿವೆ,’ ಎಂದರು.

‘ಅಹಲ್ಯ, ಮಂಥರೆ, ಶೂಪರ್ನಖಿ, ಮಂಡೋದರಿ, ಶಾಂತಾದAಥ ಪಾತ್ರಗಳು ಆಯಾ ಸಂದರ್ಭದ ಸನ್ನಿವೇಶದ ಕಾರಣಗಳಿಂದಾಗಿ ವರ್ತಿಸಿದ್ದಾರೆಯೇ ಹೊರತು ಯಾವುದೇ ದ್ವೇಷ, ಸವಾರ್ಥ ಸಾಧನೆಗಾಗಿ ವರ್ತಿಸಿಲ್ಲ ಎಂಬುದನ್ನು ವಾಲ್ಮೀಕಿ ರಾಮಾಯಣವನ್ನಷ್ಟೆ ನೋಡದೆ ಕಂಬ ರಾಮಾಯಣ, ತುಳಿಸಿದಾಸರ ರಾಮಚಂದ್ರ ಚರಿತಾಮಾನಸದಂಥ ಕಾವ್ಯಗಳನ್ನು ಉದ್ದರಿಸುತ್ತಾ ಸೋದಾಹರಣವಾಗಿ ವಿವರಿಸಿದರು. ಕೊನೆಯಲ್ಲಿ ಅಧರ್ಮದ ಕಾರಣದಿಂದ ತನ್ನ ಮಗಳಿಗಾದ ನೋವು ಸಂಕಟಗಳನ್ನು ಸಹಿಸದೆ ಭೂಮಿತಾಯಿಯು ತನ್ನ ಮಗಳನ್ನು ಕರೆದೊಯ್ಯುವ ದೃಶ್ಯವನ್ನು ವಿವರಿಸಿ ಈಗ ನಮ್ಮ ಭೂಮಿಯ ಮೇಲಿನ ಆಕ್ರಮಣವನ್ನು ನಿಲ್ಲಿಸದಿದ್ದರೆ ಭೂಮಿಯೇ ಬಾಯ್ದೆರದು ತನ್ನನು ರಕ್ಷಿಸಿಕೊಳ್ಳುತ್ತದೆ ಎಂಬ ಎಚ್ಚರಿಕೆಯನ್ನು ನೀಡುವಂತಿದೆ,’ ಎಂದರು.

ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್. ಎನ್. ಸುರೇಶ್ ಮಾತನಾಡಿ, ‘ನವ ಎನ್ನುವುದಕ್ಕೆ ನಮ್ಮ ಪರಂಪರೆಯಲ್ಲಿ ಹಲವು ಅರ್ಥಗಳಿವೆ ನವ ಎಂದರೆ ಹೊಸದೂ ಹೌದು, ಒಂಬತ್ತು ಹೌದು. ನವರಾತ್ರಿಯ ಸಂದರ್ಭವು ಋತುಗಳ ಬದಲಾವಣೆಯಕಾಲ ನವರಾತ್ರಿಯು ಸಂವೃದ್ದತೆಯನ್ನು, ಸಂಭ್ರಮವನ್ನು, ಬೆಸುಗೆಯನ್ನು ಸೂಚಿಸುತ್ತದೆ. ಭಾರತೀಯ ವಿದ್ಯಾಭವನವು ಕಳೆದ ಎಂಟು ವರ್ಷಗಳಿಂದ ಬೊಂಬೆಹಬ್ಬವನ್ನು ಆಚರಿಸುತ್ತಿದ್ದು ಪ್ರತಿವರ್ಶ ರಾಮಾಯಣಕ್ಕೆ ಸಂಬಂಧಿಸಿದ ವಿಶೇಷ ಉಪನ್ಯಾಸವನ್ನು ಏರ್ಪಡಿಸುತ್ತಾ ಬಂದಿದೆ ಈ ವರ್ಷವು ಶ್ರೀರಾಮ ಕಥಾ ದರ್ಶನದ ವಿವಿಧ ಪ್ರಸಂಗಗಳ ಕುರಿತು ಗೊಂಬೆಗಳೇ ಕಥೆ ಹೇಳುವಂತೆ ಅದ್ಭುತವಾಗಿ ಪ್ರದರ್ಶಿಸಲಾಗಿದೆ. ಇದರಲ್ಲಿ ಮುಖ್ಯವಾಗಿ ಪುತ್ರಕಾಮೆಷ್ಟಿ ಯಾಗ, ರಾಮನ ಜನನ, ಋಷಿ ವಿಶ್ವಾಮಿತ್ರ ಅವರ ಅಯೋಧ್ಯೆಯ ಭೇಟಿ, ತಾಟಕಾ ರಾಕ್ಷಸನನ್ನು ಕೊಂದ ರಾಮ-ಲಕ್ಷ್ಮಣ, ರಾಮ-ಸೀತೆಯ ದೈವಿಕ ಮದುವೆ, ಅಯೋಧ್ಯೆ ಕಾಂಡ, ಅರಣ್ಯ ಕಾಂಡ, ಕಿಷ್ಕಿಂದ ಕಾಂಡ, ಸುಂದರ ಕಾಂಡ, ಯುದ್ಧ ಕಾಂಡ ಹಾಗೂ ಉತ್ತರ ಕಾಂಡ ಎಂಬ ಏಳು ಭಾಗಗಳಲ್ಲಿ ರಾಮಾಯಣದ ಇಡೀ ಕತೆಯನ್ನು ಗೊಂಬೆಗಳ ಮೂಲಕ ಕಟ್ಟಿಕೊಡಲಾಗಿದೆ ಅಪರ್ಣಾ ಆಚಾರ್ಯ ಮತ್ತು ಶ್ರೀನಾಥ ಆಚಾರ್ಯ ಅವರು ತಮ್ಮ ಮನೆಯಲ್ಲಿ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಗೊಂಬೆ ಪ್ರದರ್ಶನವನ್ನು ಇಪ್ಪತ್ತು ವರ್ಷಗಳಿಂದ ನಡೆಸಿಕೊಂಡು ಬಂದಿದ್ದಾರೆ. ಅವರಲ್ಲಿ ಇಪ್ಪತ್ತು ಸಾವಿರ ಸಾಂಪ್ರದಾಯಿಕ ಬೊಂಬೆಗಳಿದ್ದು ವಿದ್ಯಾಭವನದಲ್ಲಿ ಸುಮಾರು 400 ಜೇಡಿಮಣ್ಣಿನ ಬೊಂಬೆಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ. ರಾಮಾಯಣದ ಮುಖ್ಯ ಥೀಮುಗಳ ಮೂಲಕ ಕಥೆಯನ್ನು ಕಟ್ಟಿಕೊಡುವುದು ಈ ಪ್ರದರ್ಶನದ ಉದ್ದೇಶವಾಗಿದೆ ಎಂದರು. `ಭಾರತೀಯ ವಿದ್ಯಾ ಭವನವು ನಾಡಿನ ಕಲೆ ಸಂಸ್ಕೃತಿಯನ್ನು ಪಸರಿಸುವ ಮಹತ್ವದ ಕೆಲಸವನ್ನು ಮಾಡುತ್ತಿದೆ. ಈ ಮೂಲಕ ಪರಂಪರೆಯನ್ನು ಹೊಸ ಪೀಳಿಗೆಯವರಿಗೆ ಪರಿಚಯಿಸುತ್ತಿದೆ,’ ಎಂದು ನಟಿ ಅನು ಪ್ರಭಾಕರ್ ಶ್ಲಾಘಿಸಿದರು.

ಕಾರ್ಯಕ್ರಮವನ್ನು ಭವನದ ಉಪಾಧ್ಯಕ್ಷರಾದ ಎಚ್ ಎ ಅನಂತ್, ಕಾರ್ಯದರ್ಶಿ ಮಾನಂದಿ ಸುರೇಶ್, ಖಜಾಂಚಿ ಪಿಯೂಷ್ ಜೈನ್, ಕಾರ್ಯಕಾರಿ ಸಮಿತಿಯ ಸದಸ್ಯರಾದ ಅಭಿನವ ರವಿಕುಮಾರ್, ಜಂಟಿ ನಿರ್ದೇಶಕರಾದ ನಾಗಲಕ್ಷ್ಮೀ ಕೆ ರಾವ್ ಮುಂತಾದವರು ಪಾಲ್ಗೊಂಡರು.

MORE NEWS

ಕಲೆ, ಸಂಸ್ಕೃತಿಯಿಂದ ನಾಡು ಭಾಷೆ ಬೆಳೆಯುತ್ತದೆ ಉಳಿಯುತ್ತದೆ : ಪ್ರೊ.  ಕೃಷ್ಣೇಗೌಡ 

21-12-2024 ಬೆಂಗಳೂರು

ಮಂಡ್ಯ: ಕನ್ನಡ ನಾಡು ಚೆನ್ನಾಗಿ ಬೆಳೆಯಬೇಕು ಅಂದ್ರೆ ಈ ನೆಲದಲ್ಲಿರುವ ಎಲ್ಲವೂ ಬೆಳೆಯಬೇಕು. ಭಾಷೆ ಆಡುವುದರಿಂದ, ಬರೆಯುವು...

ಪರಿಸರದ ಬಗ್ಗೆ ಎಲ್ಲರೂ ಚಿಂತಿಸಿ; ಯಲ್ಪಪ್ಪರೆಡ್ಡಿ

21-12-2024 ಬೆಂಗಳೂರು

ಮಂಡ್ಯ: "ಅಲ್ಪ ಮಾಹಿತಿಯ ದತ್ತಾಂಶವು, ವಿಪತ್ತು ನಿರ್ವಾಹಣೆಯಲ್ಲಿ ಅಲ್ಪ ಪ್ರಮಾಣದ ತೊಡಕನ್ನು ಕಡಿಮೆಗಳಿಸುತ್ತದೆ,&q...

ಶಿಕ್ಷಣ ಸಂಸ್ಥೆಗಳನ್ನು ಶಿಕ್ಷಣ ಅಂಗಡಿಗಳೆಂದರೆ ಸೂಕ್ತ; ಸಾ. ರಾ. ಗೋವಿಂದು

21-12-2024 ಬೆಂಗಳೂರು

ಮಂಡ್ಯ: ಡಿ. 21 ರಂದು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ “ಸಂಚಿ ಹೊನ್ನಮ್ಮ ಮತ್ತು ಕಾದಂಬರಿ ಸಾಮ್ರಾಜ್...