Date: 22-12-2024
Location: ಮಂಡ್ಯ
ಮಂಡ್ಯ: ಪ್ರಬಂಧಕ್ಕೆ ಪ್ರಮುಖ ಪ್ರಕಾರ ಎಂಬ ಮನ್ನಣೆ ಸಿಕ್ಕಿಲ್ಲ, ಇದನ್ನೇ ಪ್ರಮುಖವಾಗಿ ಮಂಡಿಸಿ ಲೇಖಕರು ಕಡಿಮೆ. ಕಾದಂಬರಿ, ಸಣ್ಣ ಕಥೆ ಪ್ರಕಾರಕ್ಕೆ ಹೆಚ್ಚು ಮನ್ನಣೆ ಇದೆ. ಆದರೆ, ಪ್ರಬಂಧ ಒಂದು ರೀತಿ ನಿರ್ಲಕ್ಷಿತ ಸಾಹಿತ್ಯ ಎಂದು ಪತ್ರಕರ್ತ ಚ.ಹ. ರಘುನಾಥ ಹೇಳಿದರು.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ "ಪುನಶ್ಚೇತನವಾಗಬೇಕಾಗಿರುವ ಸಾಹಿತ್ಯ ಪ್ರಕಾರಗಳು" ಎಂಬ ಗೋಷ್ಠಿಯ ʻಪ್ರಬಂಧ ಸಾಹಿತ್ಯʼ ಎಂಬ ವಿಷಯದ ಬಗ್ಗೆ ಮಾತನಾಡಿದ ಅವರು, ಎಸ್. ದಿವಾಕರ್ ಐದು ಲೇಖಕ ಸಂಕಲನ ಎರಡು ಕಥಾಸಂಕಲನ ಪ್ರಕಟಿಸಿದರೂ ಕಥೆಗಾರ ಎಂದೇ ಕರೆಯುತ್ತಿರುವುದು ಒಂದು ರೀತಿ ಉದಾಹರಣೆ. ಮಾಹಿತಿಗಳ ಕ್ರೂಢಿಕರಣವೇ ಪ್ರಬಂಧ ಎಂಬ ಮಾದರಿ ಆಗಿದೆ ಎಂದರು.
ಪ್ರಬಂಧ ಪ್ರಕಾರ ಸಾಹಿತ್ಯ ಲೋಕದಲ್ಲಿ ತೆರೆಗೆ ಸರಿದಿಲ್ಲ. ಹೀಗಾಗಿ ಪ್ರಬಂಧ ಪ್ರಕಾರ ಪುನಶ್ಚೇತನ ಆಗಬೇಕಾಗಿರುವ ಸಾಹಿತ್ಯ ಪ್ರಕಾರ ಎಂದು ನಾನು ಹೇಳಲ್ಲ. ಪ್ರಬಂಧ ಪ್ರಕಾರ ಆರಕ್ಕೇರದ ಮೂರಕ್ಕಿಳಿಯದ ಸ್ಥಿತಿಯಲ್ಲಿದೆ. 66 ವರ್ಷಗಳ ಹಿಂದೆ ಗೊಕಾಕ್ ಅವರು ಪ್ರಬಂಧ ಸಾಹಿತ್ಯದ ಬಗ್ಗೆ ಹೇಳಿದ್ದ ರೀತಿ ಪ್ರಸ್ತುತ ವಾಗುತ್ತದೆ. ಎಂದು ಚ.ಹ. ರಘುನಾಥ ಅವರು ಹೇಳಿದರು.
ಮಂಡ್ಯ: ವಿದೇಶದಲ್ಲಿ 40 ಲಕ್ಷಕ್ಕೂ ಅಧಿಕ ಕನ್ನಡಿಗರಿದ್ದು ಅವರಲ್ಲಿ 5 ಲಕ್ಷಕ್ಕೂ ಅಧಿಕ ಕನ್ನಡಿಗರು ಅಮೆರಿಕಾದಲ್ಲೇ ಇದ್ದ...
ಕನ್ನಡ ಸಾಹಿತ್ಯ ಪರಿಷತ್ತಿನ ಸಭೆಯಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬಳ್ಳಾರಿಯಲ್ಲಿ ಆಯೋಜಿಸಲು ನಿರ...
ಮಂಡ್ಯ: 100 ವರ್ಷ ಪೂರೈಸಿದ ಶಾಲೆಗಳಿಗೆ ಆಟದ ಮೈದಾನ ಇತ್ತು. ಇಂದು ಅವು ಇಲ್ಲ. ಸ್ಥಳೀಯ ರಾಜಕಾಣಿಗಳ, ಪ್ರಭಾವಿಗಳ ...
©2024 Book Brahma Private Limited.