ಪುಸ್ತಕ ಪ್ರಾಧಿಕಾರದ ನೂತನ ಕಾರ್ಯಕ್ರಮ `ಅಂಗಳದಲ್ಲಿ ತಿಂಗಳ ಪುಸ್ತಕ'

Date: 26-11-2024

Location: ಬೆಂಗಳೂರು


ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರವು ಪ್ರತೀ ತಿಂಗಳು “ಅಂಗಳದಲ್ಲಿ ತಿಂಗಳ ಪುಸ್ತಕ” ಎಂಬ ನೂತನ ಕಾರ್ಯಕ್ರಮವನ್ನು ಆರಂಭಿಸಲು ಮುಂದಾಗಿದೆ.

ಈ ಕಾರ್ಯಕ್ರಮದಲ್ಲಿ ಪ್ರತಿ ತಿಂಗಳು ಒಂದು ಪುಸ್ತಕದ ಬಗ್ಗೆ ಒಬ್ಬ ಪ್ರಮುಖ ಸಾಹಿತಿಗಳು ತಮ್ಮ ಅನಿಸಿಕೆಗಳನ್ನು ಸಭಿಕರಿಗೆ ವ್ಯಕ್ತಪಡಿಸಲಿದ್ದಾರೆ. ಮೊದಲ ಕಾರ್ಯಕ್ರಮದ ಅಂಗವಾಗಿ ಕರ್ನಾಟಕ ಸಂಭ್ರಮದ ಸಂದರ್ಭದಲ್ಲಿ ಬಿಡುಗಡೆಯಾದ ಆರು ಪುಸ್ತಕಗಳ ಪರಿಚಯ ಮಾಡಲಿದ್ದಾರೆ ಪ್ರಜಾವಾಣಿಯ ಕಾರ್ಯನಿರ್ವಾಹಕ ಸಂಪಾದಕ ಶ್ರೀ ರವೀಂದ್ರ ಭಟ್.

ಕರ್ನಾಟಕ ಸಂಭ್ರಮ-50ರ ಅಂಗವಾಗಿ ಕರ್ನಾಟಕ ನಾಮಕರಣವಾದ ನಂತರದಿಂದ ಇಲ್ಲಿಯವರೆಗೆ ಕಲೆ, ಸಾಹಿತ್ಯ, ಕೃಷಿ-ತೋಟಗಾರಿಕೆ, ವಿಜ್ಞಾನ – ತಂತ್ರಜ್ಞಾನ - ಕೈಗಾರಿಕೆ, ಶಿಕ್ಷಣ, ಸ್ಮರಣ ಸಂಚಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕರ್ನಾಟಕ ಸಾಧನೆ ಕುರಿತ 06 ಸಂಪುಟಗಳನ್ನು ಪ್ರಕಟಿಸಿದೆ. ಈ ಸಂಪುಟಗಳನ್ನು ಸನ್ಮಾನ್ಯ ಮುಖ್ಯಮಂತ್ರಿಗಳು ದಿನಾಂಕ:01.11.2024ರಂದು ಬಿಡುಗಡೆ ಮಾಡಿರುತ್ತಾರೆ.

“ಅಂಗಳದಲ್ಲಿ ತಿಂಗಳ ಪುಸ್ತಕ” ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ಹಾಗೂ ಬಿಡುಗಡೆಯಾಗಿರುವ ಸಂಪುಟಗಳ ಪರಿಚಯವನ್ನು ಆಯಾ ಸಂಪಾದಕರುಗಳಿಂದ ಮಾಡಿಕೊಡುವ ಕಾರ್ಯಕ್ರಮವನ್ನು ದಿನಾಂಕ: 27.11.2024ರಂದು ಬುಧವಾರ ಬೆಳಿಗ್ಗೆ 11.00ಗಂಟೆಗೆ ಕನ್ನಡ ಭವನದ 2ನೇ ಮಹಡಿಯ ವರ್ಣಗ್ಯಾಲರಿಯಲ್ಲಿ ಆಯೋಜಿಸಲಾಗಿದೆ.

ಪ್ರಜಾವಾಣಿ ದಿನಪತ್ರಿಕೆಯ ಖ್ಯಾತ ಕಾರ್ಯನಿರ್ವಾಹಕ ಸಂಪಾದಕರಾದ ಶ್ರೀ ರವೀಂದ್ರ ಭಟ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರದ ಮಾನ್ಯ ಅಧ್ಯಕ್ಷರು ಡಾ. ಮಾನಸ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ ಎಂದು ಆಡಳಿತಾಧಿಕಾರಿ ಕೆ.ಬಿ. ಕಿರಣ್ ಸಿಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

MORE NEWS

`ನೀಲ ಕುರಿಂಜಿ' ಕನ್ನಡ ಓಪನ್ ಮೈಕ್ ಕಾರ್ಯಕ್ರಮದ ಕಿರುನೋಟ

26-11-2024 ಬೆಂಗಳೂರು

ಬೆಂಗಳೂರು: "ನೀಲ ಕುರಿಂಜಿ" ಕನ್ನಡ ಓಪನ್ ಮೈಕ್ ಕಲೆ, ಸಾಹಿತ್ಯ, ಸಂಗೀತ, ಹಾಸ್ಯ ಕುರಿತ ಒಂದು ವೇದಿಕೆ- ಸಾವಿ...

ಮೈಸೂರಿನ ಖ್ಯಾತ ಹಿರಿಯ ಕಂಸಾಳೆ ಕಲಾವಿದ ಜಾನಪದಶ್ರೀ ಕುಮಾರಸ್ವಾಮಿ ಇನ್ನಿಲ್ಲ

26-11-2024 ಬೆಂಗಳೂರು

ಮೈಸೂರು: ಖ್ಯಾತ ಹಿರಿಯ ಕಂಸಾಳೆ ಕಲಾವಿದ ಜಾನಪದಶ್ರೀ ಕುಮಾರಸ್ವಾಮಿ ಅವರು 2024 ನ. 25 ಸೋಮವಾರದಂದು ನಿಧನರಾಗಿದ್ದಾರೆ. ...

ಲಲಿತಾ ಕೆ. ಹೊಸಪ್ಯಾಟಿ ಅವರ 'ಬ್ಯೂಟಿ ಬೆಳ್ಳಕ್ಕಿ' ಕೃತಿಗೆ ‘ಕಾವ್ಯಾನಂದ ಪುರಸ್ಕಾರ’

26-11-2024 ಬೆಂಗಳೂರು

ಬೆಂಗಳೂರು: ಕನ್ನಡ ಸಾಹಿತ್ಯ ಸಂವರ್ಧಕ ಟ್ರಸ್ಟ್ ನೀಡುವ 2023ರ ಕಾವ್ಯಾನಂದ ಪುರಸ್ಕಾರಕ್ಕೆ ಲಲಿತಾ ಕೆ. ಹೊಸಪ್ಯಾಟಿ ಅವರ &...