Date: 26-11-2024
Location: ಬೆಂಗಳೂರು
ಬೆಂಗಳೂರು: "ನೀಲ ಕುರಿಂಜಿ" ಕನ್ನಡ ಓಪನ್ ಮೈಕ್ ಕಲೆ, ಸಾಹಿತ್ಯ, ಸಂಗೀತ, ಹಾಸ್ಯ ಕುರಿತ ಒಂದು ವೇದಿಕೆ- ಸಾವಿರದ ಭಾವ ಕಾರ್ಯಕ್ರಮವು 2024 ನ. 24ರ ಭಾನುವಾರದಂದು ಚಿಕ್ಕಮಗಳೂರಿನಲ್ಲಿ ನಡೆಯಿತು.
ಈ ಕಾರ್ಯಕ್ರಮದ ಕುರಿತು ಆಯೋಜಕ ಪೃಥ್ವಿ ಸೂರಿ ಅವರು, ‘ನೀಲಕುರಿಂಜಿಯ ಕಳೆದಷ್ಟೂ ಸಂಚಿಕೆಗಳನ್ನು ಒಂದು ತಕ್ಕಡಿಯಲ್ಲಿ ಹಾಕಿ ತೂಗಿದರೆ ಅವುಗಳಷ್ಟೇ ಭಾವ ಭಾರವನ್ನು ಈ ತಿಂಗಳ ರಾಜ್ಯೋತ್ಸವ ಸಂಚಿಕೆ ಹೊತ್ತು ನಿಲ್ಲುತ್ತದೆ ಎನ್ನುವುದು ನನ್ನ ಮನಸಿನ ಮಾತು. ಭಾಗವಹಿಸಿದವರೆಲ್ಲರೂ ಆತ್ಮೀಯ ಗೆಳೆಯರು. ಅದರಲ್ಲೂ ವಿಶೇಷವಾಗಿ ಕನ್ನಡದಲ್ಲಿ ಮತ್ತು ಸಾರಸ್ವತ ಲೋಕದಲ್ಲಿ ತಮ್ಮನ್ನು ತಾವು ವಿಭಿನ್ನವಾಗಿ ಗುರುತಿಸಿಕೊಳ್ಳುವ ಜತೆಗೆ ಚಿಕ್ಕಮಗಳೂರಿನ ಹೆಸರನ್ನೂ ತಮ್ಮೊಂದಿಗೆ ಜತನವಾಗಿ ಕಾಪಿಟ್ಟುಕೊಂಡು ಮುನ್ನಡೆಯುತ್ತಿದ್ದಾರೆ. ಅವರೆಲ್ಲರು ಹೊಸ ತಲೆಮಾರಿನ ಸಾಂಸ್ಕೃತಿಕ ಸಾಧಕರು,’ ಎನ್ನುವ ನೀಲ ಕುರಿಂಜಿಯ ಅನುಭವವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ವಿಮರ್ಶಕ ಎಚ್.ಎಸ್. ಸತ್ಯನಾರಾಯಣ, ದೀಪಿಕಾ ಬಾಬು, ಶುಭಶ್ರೀ ಭಟ್, ನಂದೀಶ್ ಬಿ.ಎ, ಸಂಪತ್ ಸಿರಿಮನೆ, ಸ್ಫೂರ್ತಿ ಚಂದ್ರಶೇಖರ್, ದೀಕ್ಷಿತ್ ನಾಯರ್, ಶ್ರೀನಿವಾಸ ನಾಯ್ಡು ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.
ಮೈಸೂರು: ಖ್ಯಾತ ಹಿರಿಯ ಕಂಸಾಳೆ ಕಲಾವಿದ ಜಾನಪದಶ್ರೀ ಕುಮಾರಸ್ವಾಮಿ ಅವರು 2024 ನ. 25 ಸೋಮವಾರದಂದು ನಿಧನರಾಗಿದ್ದಾರೆ. ...
ಬೆಂಗಳೂರು: ಕನ್ನಡ ಸಾಹಿತ್ಯ ಸಂವರ್ಧಕ ಟ್ರಸ್ಟ್ ನೀಡುವ 2023ರ ಕಾವ್ಯಾನಂದ ಪುರಸ್ಕಾರಕ್ಕೆ ಲಲಿತಾ ಕೆ. ಹೊಸಪ್ಯಾಟಿ ಅವರ &...
ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರವು ಪ್ರತೀ ತಿಂಗಳು “ಅಂಗಳದಲ್ಲಿ ತಿಂಗಳ ಪುಸ್ತಕ” ಎಂಬ ನೂತನ ಕಾರ್ಯಕ...
©2024 Book Brahma Private Limited.