ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ದುರ್ಗತಿಯ ಮೇಲೆ ಬೆಳಕು ಚೆಲ್ಲುವ ಕೃತಿಯಿದು


"ಈ ಗ್ರಂಥವು ಮಾಧ್ಯಮದಲ್ಲಿ ಮಹಿಳೆ ಎಂಬ ವಿಷಯದ ನೆಪದಲ್ಲಿ ಮಹಿಳೆಯರ ಸಾಮಾಜಿಕ, ಆರ್ಥಿಕ, ಲೈಂಗಿಕ, ಸಾಂಸ್ಕೃತಿಕ ಶೋಷಣೆಗಳ ಎಲ್ಲ ಆಯಾಮಗಳನ್ನು ಹಲವಾರು ಗ್ರಂಥಗಳ ಆಧಾರದ ಮೇಲೆ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ದುರ್ಗತಿಯ ಮೇಲೆ ಬೆಳಕು ಚೆಲ್ಲುವ, ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸುವ ಶ್ರೇಷ್ಠ ಸಂಶೋಧನಾ ಗ್ರಂಥವಿದು," ಎನ್ನುತ್ತಾರೆ ಉದಯಕುಮಾರ್ ಹಬ್ಬು. ಅವರು ಅರುಣಕುಮಾರ ಹಬ್ಬು ಅವರ ‘ಮಹಿಳೆ ಮತ್ತು ಮಾಧ್ಯಮ’ ಕೃತಿ ಕುರಿತು ಬರೆದ ವಿಮರ್ಶೆ.

ಖ್ಯಾತ ಪತ್ರಕರ್ತರೂ, ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರೂ, ಪ್ರಜಾವಾಣಿ ಮತ್ತು ಉದಯವಾಣಿಯಲ್ಲಿ ಸ್ಟಾಫ್ ವರದಿಗಾರರಾಗಿ ಸುಮಾರು 35 ವರ್ಷಗಳ ಸೇವೆ ಸಲ್ಲಿಸಿದ ಅರುಣಕುಮಾರ ಹಬ್ಬು ಅವರು "ಮಹಿಳೆ ಮತ್ತು ಮಾಧ್ಯಮ" ಎಂಬ ಅನನ್ಯ ಗ್ರಂಥವನ್ನು ಬರೆದಿದ್ದಾರೆ.

ಈ ಗ್ರಂಥವು ಮಾಧ್ಯಮದಲ್ಲಿ ಮಹಿಳೆ ಎಂಬ ವಿಷಯದ ನೆಪದಲ್ಲಿ ಮಹಿಳೆಯರ ಸಾಮಾಜಿಕ, ಆರ್ಥಿಕ, ಲೈಂಗಿಕ, ಸಾಂಸ್ಕೃತಿಕ ಶೋಷಣೆಗಳ ಎಲ್ಲ ಆಯಾಮಗಳನ್ನು ಹಲವಾರು ಗ್ರಂಥಗಳ ಆಧಾರದ ಮೇಲೆ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ದುರ್ಗತಿಯ ಮೇಲೆ ಬೆಳಕು ಚೆಲ್ಲುವ, ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸುವ ಶ್ರೇಷ್ಠ ಸಂಶೋಧನಾ ಗ್ರಂಥವಿದು. ಈ ಗ್ರಂಥವು ಸಮಸ್ಯೆಗಳ ಶೋಷಣೆಗಳ ಮೇಲೆ ಹೊಸ ಬೆಳಕನ್ನು, ಹೊಸ ದಾರಿಯನ್ನು ಪರಿಹಾರಗಳನ್ನು ಸೂಚಿಸುವ ಸಂಶೋಧನಾ‌ ಗ್ರಂಥವಾಗಿದೆ. ಈ ಗ್ರಂಥವನ್ನು ಒಂದು ಎಂ.‌ಫಿಲ್‌ ಗ್ರಂಥಕ್ಕೆ ಸರಿಸಮಾನವಾಗಿದೆ‌.

ಇವರು ಎತ್ತಿಕೊಳ್ಳುವ ಸ್ತ್ರೀ‌ಸಮಸ್ಯೆಗಳು ಶೋಷಣೆಗಳ ವಿರಾಟ್ ಸ್ವರೂಪವನ್ನು ಅತ್ಯಂತ ಆಳವಾದ ಗಾಢವಾದ ಅಧ್ಯಯನ ಒಳನೋಟ ಮತ್ತು ಅನುಭವಗಳಿಂದ ಬರೆದ‌ ಆಥೆಂಟಿಕ್ ಕೃತಿಯಾಗಿದ್ದು, ಬಹುಶಃ ಸ್ತ್ರೀವಾದದ ಕುರಿತು ಮಹಿಳೆಯರೇ ಬರೆದ‌ ಎಷ್ಟೋ ಗ್ರಂಥಗಳಿಗಿಂತ ಮಿಗಿಲಾಗಿದೆ‌ ಅಥವಾ ಸಮಾನವಾಗಿದೆ.

ಈ ಸಂಶೋಧನಾ ಗ್ರಂಥದಲ್ಲಿ 13 ಲೇಖನಗಳಿವೆ. ಅವು ಯಾವುವೆಂದರೆ ‘ಹೆಣ್ಣು ಹೆಣ್ಣೆಂದೇಕೆ ಬೀಳುಗಳೆವರು’, ‘ಮಹಿಳೆಯರ ಸಬಲೀಕರಣದಲ್ಲಿ ಮಾಧ್ಯಮಗಳ ಪಾತ್ರ’, ‘ವಿಶ್ವದಲ್ಲಿ ಮಹಿಳೆಯ ‌ಸ್ಥಾನಮಾನ’, ‘ಮಹಿಳೆಯರ ಸಮಸ್ಯೆಗಳ ಇತಿಹಾಸ’, ‘ಆಧುನಿಕ ಭಾರತದಲ್ಲಿ ಮಹಿಳೆಯರ ಸಮಸ್ಯೆಗಳು’, ‘ಸಮೂಹ ಮಾಧ್ಯಮದಲ್ಲಿ ಮಹಿಳೆಯರ ಚಿತ್ರಣ’, ‘ಸಮೂಹ ಮಾಧ್ಯಮದಲ್ಲಿ ಮಹಿಳಾ ಕಾಳಜಿಗಳು’, ‘ಸ್ತ್ರೀವಾದ ಮತ್ತು ಮಹಿಳಾ‌ ಹೋರಾಟಗಳು’, ‘ಭಾರತದಲ್ಲಿ ಪರ್ಯಾಯ‌ ಸ್ತ್ರೀವಾದಿ‌ ಮಾಧ್ಯಮ’, ‘ಚಲನಚಿತ್ರ ‌ಮತ್ತು ಟೆಲಿವಿಷನ್ ಗಳಲ್ಲಿ ಮಹಿಳೆ’, ‘ಪತ್ರಿಕೋದ್ಯಮದಲ್ಲಿ ಮಹಿಳೆ’, ‘ಟ್ರೋಲ್‌ಎಂಬ ಸಾಮಾಜಿಕ ಜಾಲತಾಣ ಮತ್ತು ಮಹಿಳೆ’.

"ಮಹಿಳೆಯರ ಸ್ಥಿತಿ ಗತಿ ಸುಧಾರಿಸದ ಹೊರತು ಜಗತ್ತಿನ‌ ಅಭಿವೃದ್ಧಿ ಅಸಾಧ್ಯ. ಪಕ್ಷಿಗೆ ಒಂದೇ‌ ರೆಕ್ಕೆಯಿಂದ ಹಾರಲು ಸಾಧ್ಯವಾಗದು ಅಲ್ಲವೆ?" ಸ್ವಾಮಿ ವಿವೇಕಾನಂದರ ಈ ಮಾತುಗಳಿಂದ ಗ್ರಂಥದ ಮೊದಲ ಪ್ರಬಂಧ ಪ್ರಾರಂಭಗೊಳ್ಳುತ್ತದೆ‌‌. ಇದು ಮಹಿಳೆಯರ ಬಗ್ಗೆ ಲೇಖಕರಿಗೆ ಇರುವ ಕಾಳಜಿಯನ್ನು ಮತ್ತು ಬದ್ಧತೆಯನ್ನು ವ್ಯಕ್ತಪಡಿಸುತ್ತದೆ‌. "ಪ್ರತಿ ಪುರುಷನ ಯಶಸ್ಸಿನ ಹಿಂದೆ ಮಹಿಳೆಯಿರುತ್ತಾಳೆ ಎಂಬ ಮಾತೊಂದಿದೆ‌. ಅದೇ ರೀತಿ ಪ್ರತಿ ಸ್ತ್ರೀ ಸಮಾಜದ ಅಭ್ಯುದಯದ ಹಿಂದೆ ನಿಂತು ಕಾರ್ಯ ಮಾಡುವ ಸಾಧನವೆಂದರೆ ಸಮೂಹ ಮಾಧ್ಯಮಗಳು‌ ಮಹಿಳೆಯರ ಆರ್ಥಿಕ ಅಭಿವೃದ್ಧಿ, ಸಾಮಾಜಿಕ ರಂಗದಲ್ಲಿ ಅವರು ವಹಿಸುವ ಪಾತ್ರ, ನಿರ್ಣಯಾತ್ಮಕ ವಿಷಯಗಳಲ್ಲಿ ಮಹಿಳೆಯರ ವೈಚಾರಿಕ ಪಾಲುಗಾರಿಕೆ, ಲಿಂಗತಾರತಮ್ಯ ನಿವಾರಣೆ, ಮಹಿಳೆಯರ ದೂರದೃಷ್ಟಿ ಮತ್ತು ನಿರ್ಧಾರಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಅವರ‌ ಸಾಮರ್ಥ್ಯ ಅಭಿವೃದ್ಧಿಯಲ್ಲಿ ಮಾಧ್ಯಮಗಳು ಎಷ್ಟು ಪ್ರಮಾಣದಲ್ಲಿ ಪ್ರಮುಖ ಸಾಧನವಾಗಿ ಪರಿಣಮಿಸಬಲ್ಲವು ಎನ್ನುವುದು ನಿರ್ಧಾರವಾಗಬೇಕಾದ ಸಂಗತಿಗಳಾಗಿವೆ‌ ಕೇವಲ ಆರ್ಥಿಕ ಅಸಮಾನತೆಯ ನಿವಾರಣೆಯೊಂದೇ ಮಹಿಳಾ ಮಾಧ್ಯಮಗಳ ಉದ್ದೇಶವಲ್ಲ‌‌‌.‌ ಮಹಿಳೆ‌ ಕೇವಲ ಪುರುಷರ ಆಸ್ತಿ ಎಂಬ ರೂಢಿಗತ ಭಾವನೆ ಬದಲಾಗಬೇಕು‌.‌ ಮಹಿಳೆಯರ ಕುರಿತ ಆರೋಗ್ಯಕರ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳು, ಟೆಲಿವಿಜನ್,‌ ಮುದ್ರಣ ಮಾಧ್ಯಮಗಳ ಮೂಲಕ ಜ್ಞಾನ ಪ್ರಸಾರ ಮಾಡಿ ಸಮಾಜದಲ್ಲಿ ಉತ್ತಮ ಸ್ಥಾನ ಗಳಿಸಿ ವೈವಿಧ್ಯಮಯ ಸಾಧನೆಗಳನ್ನು ಮಾಡಿರುವ ಮಹಿಳೆಯರ ಕುರಿತು ಚಿಂತನ ಮಂಥನ ಲೇಖನಗಳನ್ನು ಪ್ರಸಾರ ಮಾಡಿ ಆಧುನಿಕ ಯುಗದಲ್ಲಿ ಮಹಿಳೆಯ ಪಾತ್ರವೇನು? ಎಂದು ಬಿಂಬಿಸಿದರೆ ಅದು ಬಹುತೇಕ ಮಹಿಳಾ ಸಮುದಾಯವನ್ನು ತಲುಪಿ‌ ಅವರ ಅಭ್ಯುದಯಕ್ಕೆ ಪ್ರೇರಣೆ ನೀಡಿದಂತಾಗುತ್ತದೆ‌. ಮಾಧ್ಯಮಗಳು ಲಿಂಗ ತಾರತಮ್ಯದ ‌ಕುರಿತು ಸೂಕ್ತವಾಗಿ ಪ್ರಸ್ತುತ ಪಡಿಸಿದಲ್ಲಿ ಜನರಲ್ಲಿ ಮಹಿಳೆಯರ ಬಗ್ಗೆ ಇರುವ ಎಲ್ಲ ಪೂರ್ವಗ್ರಹಪೀಡಿತ ಭಾವನೆಗಳು ನಾಶವಾಗಿ ಅವರ ಪರಿವರ್ತನೆಯ ಪರ್ವಕ್ಕೆ ನಾಂದಿ ಹಾಡುವಂತಾಗುತ್ತದೆ‌."

"ಸಮೂಹ ಮಾಧ್ಯಮದ ಮೂಲಕ ಮಹಿಳೆಯರನ್ನು ಸುಶಿಕ್ಷಿತಗೊಳಿಸುವುದು ಸುಲಭಸಾಧ್ಯವೆನ್ನುವುದು ಈಗಾಗಲೇ ಸಾಬೀತಾಗಿದೆ‌‌. ಈ ಪ್ರಯತ್ನಗಳನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ, ನಿಷ್ಪಕ್ಷಪಾತವಾಗಿ ಮುಂದುವರಿಸಿದರೆ ಎಲ್ಲ ರಂಗಗಳಲ್ಲಿಯೂ ಮಹಿಳೆ ಪುರುಷರಿಗೆ ಕಡಿಮೆ ಇಲ್ಲದಂತೆ ಅಭಿವೃದ್ಧಿ ಹೊಂದಬಹುದಾಗಿದೆ. ಭಾರತೀಯ ಸಮುದಾಯದಲ್ಲಿ ‌ಮಹಿಳೆಯರ ಕುರಿತ ಸಾಂಪ್ರದಾಯಿಕ ‌ಮನೋಭಾವನೆಗಳು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ‌ಬದಲಾಗಬೇಕಾಗಿರುವುದು ಬೆಳಕಿನಷ್ಟೇ‌ ಸತ್ಯ‌

ಮಹಿಳೆಯರ ಅಭ್ಯುದಯ ಈ ಕೆಳಗಿನ‌ ಸಬಲೀಕರಣಗಳಿಂದ ಸಾಧ್ಯವಾಗುತ್ತದೆ ‌
1. ಆರ್ಥಿಕ ಸಬಲೀಕರಣ,‌ ಅಥವಾ ಆರ್ಥಿಕ ಗುಲಾಮೀಕರಣದಿಂದ ಮುಕ್ತಿ
2. ಸಾಮಾಜಿಕ ಸಬಲೀಕರಣ, ಅಥವಾ ಸಾಮಾಜಿಕ‌ ತಾರತಮ್ಯ ನಿವಾರಣೆ
3 ಮಾನಸಿಕ ಸಬಲೀಕರಣ
4. ಸೈದ್ದಾಂತಿಕ ಸಬಲೀಕರಣ
5. ಮಾನವ ಹಕ್ಕುಗಳ ಶೈಕ್ಷಣಿಕ ಸಬಲೀಕರಣ
6. ರಾಜಕೀಯ ಸಬಲೀಕರಣ"
ಪುಟ ಸಂಖ್ಯೆ 30-31
"ಜಾತಿ ಪದ್ಧತಿ, ಅಂಧಾನುಕರಣೆ, ಲಿಂಗ ತಾರತಮ್ಯ ಹೆಚ್ಚಿರುವ ಹಾಗೂ ಗುಲಾಮಿ ಮನೋಭಾವವಿರುವ ಸಮಾಜದಲ್ಲಿ ಮಹಿಳೆಯರ ಸ್ಥಾನ ಮಾನ‌ದಲ್ಲಿ ವ್ಯತಿರಿಕ್ತ ಪರಿಣಾಮ ಉಂಟು ಮಾಡುವುದು ಖಚಿತ. ಅವಳನ್ನು ‌ಕೀಳು ದೃಷ್ಟಿಯಿಂದ ನೋಡುವ ಸಂಪ್ರದಾಯ ಸಾಮಾನ್ಯವಾಗಿರುತ್ತದೆ. ಇಂಥ ಪ್ರಕರಣಗಳಲ್ಲಿ ಎಲ್ಲರೂ ದೈಹಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಸಮಾನರಲ್ಲ ಎಂಬ ಭಾವನೆ ಬಲವಾಗಿರುತ್ತದೆ‌. ಅಭಿವೃದ್ಧಿ ‌ಹೊಂದಿದ ರಾಷ್ಟ್ರಗಳಲ್ಲಿ ಸಮಾನತೆಯ ಸಿದ್ಧಾಂತವನ್ನು ಪ್ರಬಲವಾಗಿ ಪ್ರತಿಪಾದಿಸಲಾಗುತ್ತಿದ್ದರೂ ಲಿಂಗ ಸಮಾನತೆ ಮಾತ್ರ ಇನ್ನೂ ಮರೀಚಿಕರಯಾಗೆ ಉಳಿದಿದೆ." ಪುಟ ಸಂಖ್ಯೆ 45

"ಸಮೂಹ ಮಾಧ್ಯಮಗಳು ‌ಮಹಿಳೆಯರ ಚಿತ್ರಣವನ್ನು ‌ಸೂತ್ರಬದ್ಧವಾದ ಪಾತ್ರಗಳ ಮೂಲಕ ಚಿತ್ರಿಸುತ್ತಿವೆ ಎನ್ನುವುದನ್ನು ‌ಸ್ಪಷ್ಟವಾಗಿ ಕಾಣಬಹುದಾಗಿದೆ. ಮಹಿಳೆ ಎಂದರೆ
1.ಸೇವಾ ನಿರತ ಪತ್ನಿ
2.ಮಮತಾಮಯಿ ಮತ್ತು ತ್ಯಾಗಮಯಿ
3. ಸೇವಾ ನಿರತ ಸೊಸೆ ಇಲ್ಲವೆ ಮಗಳು
4.ಲೈಂಗಿಕ ಆಕರ್ಷಣೆಯುಳ್ಳ ಸಂಗಾತಿ
5.ಲಾವಣ್ಯವತಿ ಅಧಿಕಾರಿಣಿ
6. ವೃತ ನಿಯಮಗಳಲ್ಲಿ ಭಕ್ತಿಪರಾಯಣೆ
7. ಮನೆಗೆಲಸದಲ್ಲಿ ಚದುರೆ
8. ಗೃಹೋಪಯೋಗಿ ವಸ್ತುಗಳನ್ನು ಕೊಳ್ಳುವ ಚತುರೆ
ಹೀಗೆ ಅವಳನ್ನು ವೈಭವೀಕರಿಸಿ ಪ್ರಸಾರ ಮಾಡುತ್ತಿವೆ‌ ಇದರ ಜೊತೆಗೆ ಮಹಿಳೆಯೆಂದರೆ ಭೋಗದ ವಸ್ತು ಎಂಬ ಚಿತ್ರೀಕರಣವೂ ಬಹುತೇಕ ‌ದೃಶ್ಯ ಮಾಧ್ಯಮಗಳಲ್ಲಿ ಸ್ಪಷ್ಟವಾಗಿ ಕಾಣ ಸಿಗುತ್ತವೆ. ಅದರಿಂದಾಗಿಯೇ ಮಹಿಳೆಯರ ಅಂಗಾಂಗ ಪ್ರದರ್ಶನದ ವೈಭವೀಕರಣ ಇಂದು ಪರಾಕಾಷ್ಠೆಯ ಹಂತ ತಲುಪಿದೆ‌" ಪುಟ ಸಂಖ್ಯೆ 70-71

ಮಹಿಳೆಯರ ಮೇಲೆ ದೌರ್ಜನ್ಯ
ದೇಶದಲ್ಲಿ ಇಂದಿಗೂ ಪುರುಷ ಪ್ರಧಾನ ಸಮಾಜವೇ ಪ್ರಮುಖ ಪಾತ್ರ ವಹಿಸುತ್ತಿರುವುದರಿಂದ ಮಹಿಳೆ ವಿವಿಧ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾಳೆ‌ ಮಹಿಳೆಯರು ಭಾರತದಯ ಅಲ್ಲದೇ ವಿಶ್ವದ ವಿವಿಧ ದೇಶಗಳಲ್ಲಿ ‌ಪುರುಷರ ದುರಾಚಾರ, ಕೌಟುಂಬಿಕ ಲೈಂಗಿಕ ದೌರ್ಜನ್ಯ, ಹಿಂಸೆ, ಕಿರುಕುಳ ಹಾಗೂ ಶೋಷಣೆಗೆ ಒಳಗಾಗುತ್ತಿದ್ದಾಳೆ‌ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳು ಹೇಳುತ್ತಿವೆ‌. ಅತ್ಯಾಚಾರದ ಪ್ರಕರಣಗಳು ಇಂದು ಗರಿಷ್ಠ ಪ್ರಮಾಣದಲ್ಲಿ ವರದಿಯಾಗುತ್ತಿವೆ." ಪುಟ ಸಂಖ್ಯೆ 81

"ಅತ್ಯಾಚಾರ ವ್ಯಭಿಚಾರ, ನಗ್ನತೆ, ಗುಂಪು ಅತ್ಯಾಚಾರ, ಹೆಣ್ಣು ಮಕ್ಕಳನ್ನು ಚುಡಾಯಿಸುವುದು, ತುಚ್ಛವಾಗಿ ಕಾಣುವುದು, ಸ್ತ್ರೀಯರನ್ನು ವಾಚಿಕವಾಗಿ, ದೈಹಿಕವಾಗಿ, ಮಾನಸಿಕವಾಗಿ ಹಿಂಸಿಸುವುದು, ಲೈಂಗಿಕ ಕಿರುಕುಳಕ್ಕೆ ಒಳಪಡಿಸುವುದು, ಇತ್ಯಾದಿ ವಿಷಯಗಳು ಮನರಂಜನೆಯ ವಸ್ತುವಾಗಿ ಟಿ‌ ವಿ. ಧಾರಾವಾಹಿಗಳಲ್ಲಿ, ಜಾಹಿರಾತುಗಳಲ್ಲಿ ದುರಪಯೋಗಿಸಲಾಗುತ್ತಿವೆ‌. ಇದರ ಜೊತೆಗೆ ಮಹಿಳೆಯರನ್ನು ಖಳನಾಯಕಿಯರನ್ನಾಗಿ ಚಿತ್ರಿಸುವ ಪ್ರಯತ್ನವೊಂದು ನಡೆಯುತ್ತಿರುವುದು ಹೊಸ ಬೆಳವಣಿಗೆ‌" ಪುಟ ಸಂಖ್ಯೆ 103

ಇಂತಹ ಮಹಿಳಾ ಕಾಳಜಿಯುಳ್ಳ ಅನೇಕ ವಿಷಯಗಳು ಆಳವಾದ ಜೀವನಾನುಭವದಿಂದ ಚಿತ್ರಿಸಲಾಗಿವೆ‌

MORE FEATURES

ಹೊಸನೆಲೆಯಲ್ಲಿ ಕಂಡಿರಿಸಿದ ಕನ್ನಡದ ವಿವೇಕ

30-09-2024 ಬೆಂಗಳೂರು

"ಅಧ್ಯಯನದ ಉದ್ದೇಶ ಮತ್ತು ಮಹತ್ವ ಎಂಬುವ ಮೊದಲ ಅಧ್ಯಾಯದಲ್ಲಿ ಇರುವ ಭಾಷೆಯನ್ನು, ಭಾಷಾ ಸಂಸ್ಕೃತಿಯ ಸಾಂಸ್ಕೃತ...

ಜಂಬವಿಲ್ಲದ ಜಂಬಣ್ಣ ಅಮರಚಿಂತ ಅವರ ಕಾವ್ಯವೇ ಅಮರಚಿಂತನವಾಗಿವೆ

30-09-2024 ಬೆಂಗಳೂರು

“ಇಡೀ ಕನ್ನಡ ಸಾಹಿತ್ಯಕ್ಕೆ ಅಪೂರ್ವವಾಗಿರತಕ್ಕಂತಹ ಕಾವ್ಯವನ್ನ ಕೊಟ್ಟಿರುವ ಸರಳ ಸಜ್ಜನಿಕೆ ಕವಿ ಎಂದು ನಾವೆಲ್ಲರೂ ...

ವಾರದ ಲೇಖಕ ವಿಶೇಷದಲ್ಲಿ ಕನ್ನಡದ ಖ್ಯಾತ ವಿದ್ವಾಂಸ, ನಾಟಕಕಾರ, ಸಾಹಿತಿ ಶ್ರೀ ರಂಗ ಆದ್ಯಾಚಾರ್ಯ

29-09-2024 ಬೆಂಗಳೂರು

ಬುಕ್ ಬ್ರಹ್ಮದ ವಾರದ ಲೇಖಕ ಸರಣಿಯಲ್ಲಿ ಮೂಡಿಬಂದ ಕವಿ, ಕನ್ನಡದ ಖ್ಯಾತ ವಿದ್ವಾಂಸ, ನಾಟಕಕಾರ, ಸಾಹಿತಿ ಶ್ರೀ ರಂಗ ಆದ್ಯಾಚ...