ಪೆರಮಾತಿನ ಶಿಕ್ಶಣ: ಕೆಲ ಸಮಸ್ಯೆಗಳು-ಬದುಕಿನಲ್ಲಿ ಸೋಲು

Date: 12-02-2025

Location: ಬೆಂಗಳೂರು


"ಪೆರಮಾತಿನ ಶಿಕ್ಶಣ ಮಕ್ಕಳನ್ನು ಅವರದಲ್ಲದ ಇನ್ನೊಂದಕ್ಕೆ ಕಸಿ ಮಾಡುವುದರಿಂದ ಇಂತದೆಲ್ಲ ಅನಾಹುತಗಳ ಸಾದ್ಯತೆಗಳನ್ನು ಕಾಣಬಹುದು. ಇಂತಾ ಹಲವಾರು ಅದ್ಯಯನಗಳೂ ಬಂದಿವೆ. ಪೆರಮಾತಿನ ಶಿಕ್ಶಣದಲ್ಲಿ ಮುಂದೆ ಬಂದಿರುವವರಲ್ಲಿ ಹೆಚ್ಚಿನವರು ಕಂಟಪಾಟದ ಮೂಲಕ, ನೆನಪಿಟ್ಟುಕೊಳ್ಳುವ ಮೂಲಕ ವಿಶಯಗಳನ್ನು ಪರಿಕ್ಶೆಯಲ್ಲಿ ಒಪ್ಪಿಸಿ ಹೆಚ್ಚು ಅಂಕಗಳನ್ನು ಪಡೆದುಕೊಂಡು ಬಂದಿರುವುದನ್ನು ಕಾಣಬಹುದು," ಎನ್ನುತ್ತಾರೆ ಬಸವರಾಜ ಕೋಡಗುಂಟಿ. ಅವರು ತಮ್ಮ ‘ತೊಡೆಯಬಾರದ ಲಿಪಿಯ ಬರೆಯಬಾರದು’ ಅಂಕಣದಲ್ಲಿ ‘ಪೆರಮಾತಿನ ಶಿಕ್ಶಣ: ಕೆಲ ಸಮಸ್ಯೆಗಳು-ಬದುಕಿನಲ್ಲಿ ಸೋಲು’ ಕುರಿತು ಬರೆದಿದ್ದಾರೆ.

ಪೆರಮಾತಿನ ಶಿಕ್ಶಣ ಪಡೆದು ಹೆಚ್ಚಿನ ಅಂಕಗಳೊಂದಿಗೆ ಪಾಸಾಗಿ ದೊಡ್ಡ ದೊಡ್ಡ ಉದ್ಯೋಗಗಳನ್ನು ಪಡೆದುಕೊಂಡಿರುವ ಹಲವರನ್ನೂ ಈ ಸಮಾಜದಲ್ಲಿ ಕಾಣಬಹುದು. ಇವರನ್ನು ತೋರಿಸಿ ಪೆರಮಾತಿನ ಶಿಕ್ಶಣದ ಸಾದನೆ ಎಂದೂ ಬಿಂಬಿಸಬಹುದು. ಆದರೆ ಮುಕ್ಯವಾಗಿ ಶಿಕ್ಶಣದ ಉದ್ದೇಶ ದೊಡ್ಡ ಸಂಬಳದ ಉದ್ಯೋಗವನ್ನು ಪಡೆದುಕೊಳ್ಳುವುದು ಅಲ್ಲ. ಹಾಗಾಗಿ ಅವರ ಈ ಸಾದನೆಯನ್ನು ಇಲ್ಲಿ ಮುಕ್ಯವಾಗಿ ಪರಿಗಣಿಸಬೇಕಿಲ್ಲ ಮತ್ತು ಅದು ಶಿಕ್ಶಣದ ಸಾದನೆಯೂ ಅಲ್ಲ. ಬದಲಿಗೆ ಅವರು ಬದುಕಿನಲ್ಲಿ ಬರುವ ಸಮಸ್ಯೆಗಳನ್ನು ಹೇಗೆ ಎದುರಿಸುತ್ತಾರೆ, ಎಶ್ಟು ಮಾನಸಿಕ ಸಾಮರ್‍ತ್ಯವನ್ನು ಬೆಳೆಸಿಕೊಂಡಿದ್ದಾರೆ, ಎಶ್ಟುಮಟ್ಟಿಗೆ ಸ್ವಂತ ಆಲೋಚನೆಯನ್ನು ಬೆಳೆಸಿಕೊಂಡಿದ್ದಾರೆ ಎಂಬುವುಗಳನ್ನು ಗಮನಿಸಬೇಕು. ಅವರು ಎಶ್ಟುಮಟ್ಟಿಗೆ ಸ್ರುಜನಾತ್ಮಕ ಗುಣವನ್ನು ಮತ್ತು ಎಶ್ಟುಮಟ್ಟಿಗೆ ತರ‍್ಕಿಕತೆಯನ್ನು ಬದುಕಿನಲ್ಲಿ ರೂಡಿಸಿಕೊಂಡಿದ್ದಾರೆ ಎಂಬ ವಾಸ್ತವಗಳನ್ನು ಗಮನಿಸಬೇಕಾಗುತ್ತದೆ.

ಇಲ್ಲಿ ಗಮನಿಸಬೇಕಾದ ಮಹತ್ವದ ವಿಚಾರವೆಂದರೆ ಆದುನಿಕ, ಇಂಗ್ಲೀಶ್ ಬಾಶೆಯ ಮಾದ್ಯಮದಲ್ಲಿ ಶಿಕ್ಶಣ ಪಡೆದು ದೊಡ್ಡ ಸಂಬಳದ ಉದ್ಯೋಗಗಳಲ್ಲಿ ಇರುವ ಹೆಚ್ಚಿನವರು ಮಾನಸಿಕ ಕಿನ್ನತೆಯನ್ನು, ಸ್ವಂತಿಕೆ ಇಲ್ಲದೆ ಬಳಲುವುದನ್ನು ಕಾಣಬಹುದು. ದೊಡ್ಡ ದೊಡ್ಡ ನಗರಗಳಲ್ಲಿ, ದೊಡ್ಡ ದೊಡ್ಡ ಸಂಬಳದ ಉದ್ಯೋಗಗಳಲ್ಲಿ ಇಂತಾ ಮಂದಿಯನ್ನು ಹೆಚ್ಚಾಗಿ ಕಾಣಬಹುದು. ಇದರಿಂದಾಗಿ ವಯಕ್ತಿಕ ಜೀವನವೂ, ಕುಟುಂಬ ಜೀವನವೂ ಕುಸಿದುಹೋಗುತ್ತವೆ. ಅದರಿಂದಾಗಿ ಒಟ್ಟು ಸಾಮಾಜಿಕ ರಚನೆ ಕೆಡುವುದಕ್ಕೆ ಇದು ದಾರಿಯಾಗುತ್ತದೆ. ಇದು ಬಹುದೂರದ ವಿಚಾರವೆಂದು ಅನಿಸಿದರೂ ಈಗಾಗಲೆ ಪೆರಮಾತಿನ ಶಿಕ್ಶಣ ಪಡೆದುಕೊಂಡು ಬಂದಿರುವ ಹಲವರು ಇಂತಾ ಸಮಸ್ಯೆಗಳಲ್ಲಿ ಇರುವುದನ್ನು ಕಾಣಬಹುದು. ತಾಯ್ಮಾತಿನ ಶಿಕ್ಶಣ ಸಾಹಿತ್ಯವನ್ನು ಅರ‍್ತ ಮಾಡಿಕೊಳ್ಳುವುದಕ್ಕೆ ಮಾತ್ರವಲ್ಲದೆ ಅನುಬವಿಸುವುದಕ್ಕೆ ಹೆಚ್ಚಿನ ಅವಕಾಶವನ್ನು ಒದಗಿಸುತ್ತದೆ. ಸಹಜವಾಗಿ ಸಾಹಿತ್ಯವನ್ನು ಅನುಬವಿಸುವವರಲ್ಲಿ ಹೆಚ್ಚಿನವರು ಸಂಬಂದಗಳಿಗೆ ಬೆಲೆ ಕೊಡುವವರಾಗಿರುತ್ತಾರೆ. ಇದರಿಂದ ವಯಕ್ತಿಕ ಬದುಕಿನಲ್ಲಿ ಸಂಬಂದಗಳ ಬೆಲೆ ಅರಿತು ನಡೆಯುವುದು ಸಾದ್ಯವಾಗುತ್ತದೆ.

ಪೆರಮಾತಿನ ಶಿಕ್ಶಣ ಮಕ್ಕಳನ್ನು ಅವರದಲ್ಲದ ಇನ್ನೊಂದಕ್ಕೆ ಕಸಿ ಮಾಡುವುದರಿಂದ ಇಂತದೆಲ್ಲ ಅನಾಹುತಗಳ ಸಾದ್ಯತೆಗಳನ್ನು ಕಾಣಬಹುದು. ಇಂತಾ ಹಲವಾರು ಅದ್ಯಯನಗಳೂ ಬಂದಿವೆ. ಪೆರಮಾತಿನ ಶಿಕ್ಶಣದಲ್ಲಿ ಮುಂದೆ ಬಂದಿರುವವರಲ್ಲಿ ಹೆಚ್ಚಿನವರು ಕಂಟಪಾಟದ ಮೂಲಕ, ನೆನಪಿಟ್ಟುಕೊಳ್ಳುವ ಮೂಲಕ ವಿಶಯಗಳನ್ನು ಪರಿಕ್ಶೆಯಲ್ಲಿ ಒಪ್ಪಿಸಿ ಹೆಚ್ಚು ಅಂಕಗಳನ್ನು ಪಡೆದುಕೊಂಡು ಬಂದಿರುವುದನ್ನು ಕಾಣಬಹುದು. ಶಿಕ್ಶಣ ನೆನಪಿಟ್ಟುಕೊಳ್ಳುವುದಕ್ಕಿಂತ ಅರ‍್ತ ಮಾಡಿಕೊಳ್ಳುವುದಕ್ಕೆ ಕಾರಣವಾಗಬೇಕು. ನೆನಪಿರುವತನಕ ಬದುಕು ಸಾಗುತ್ತದೆ, ನೆನಪಿಟ್ಟುಕೊಂಡಿರುವುದಕ್ಕಿಂತ ಬಿನ್ನವಾದ ಸಮಸ್ಯೆಗಳು ಬಂದಾಗ ಅವನ್ನು ಎದುರಿಸಲು ಸಾದ್ಯವಾಗದೆ ಸೋಲುತ್ತಾರೆ. ಹಾಗಾಗಿ ಇಂತಾ ಸ್ತಿತಿಗೆ ಪೆರಮಾತಿನ ಶಿಕ್ಶಣ ಕಾರಣವಾಗುವುದಾದರೆ ಅದು ಸೋಲು ಎಂದು ಹೇಳಬೇಕಾಗುತ್ತದೆ.

ಪ್ರದಾನವಾಗಿ ಮಕ್ಕಳ ಮನೋವಿಕಾಸದಲ್ಲಿ ಮತ್ತು ಮಕ್ಕಳ ಸಾಮಾಜಿಕತೆಯ ಬೆಳವಣಿಗೆಯಲ್ಲಿ ಆಗುವ ಸಮಸ್ಯೆಗಳನ್ನು ಮೊದಲಿಗೆ ಇಲ್ಲಿ ಉಲ್ಲೇಕಿಸಬಹುದು. ತಾಯ್ಮಾತಿನ ಶಿಕ್ಶಣವು ಅತ್ಯಂತ ಸಹಜವಾಗಿ ತರುವ ಆ ಸಹಜ ವಾತಾವರಣವನ್ನು ಪೆರಮಾತಿನ ಶಿಕ್ಶಣ ಮಕ್ಕಳಿಗೆ ಕೊಡಲಾರದು. ಅದೊಂದು ತೀರಾ ಬಿನ್ನವಾದ, ಸಂಪರ‍್ಣ ಹೊಸದಾದ ಜಗತ್ತಿನಂತೆ ಮಕ್ಕಳಿಗೆ ತೋರುತ್ತದೆ. ಆ ಹೊಸತಾದ ಜಗತ್ತಿಗೆ ಹೊಂದಿಕೊಳ್ಳುವುದೆ ಒಂದು ದೊಡ್ಡ ಸಮಸ್ಯೆಯಾಗಿಬಿಡುತ್ತದೆ. ಅದರಂತೆಯೆ ಈ ವ್ಯವಸ್ತೆ, ಬಹುಬಾಶಿಕ ಪರಿಸರದಲ್ಲಿ ಇರುವ ಬಹುಸಂಕೆಯ ಬಾಶೆಗಳು ಶಿಕ್ಶಣದಲ್ಲಿ ಮತ್ತು ಅದಕ್ಕೆ ಅಂಟಿಕೊಂಡು ಇನ್ನೂ ಹಲವು ವಲಯಗಳಲ್ಲಿ ಪ್ರಾತಿನಿದ್ಯವನ್ನು ಪಡೆದುಕೊಳ್ಳದೆ ಹೋಗುವುದರಿಂದ ಅವುಗಳ ಬಗೆಗೆ ಮಕ್ಕಳು ಕೀಳರಿಮೆಯನ್ನು ಬೆಳೆಸಿಕೊಳ್ಳುತ್ತವೆ. ಹೀಗಾಗಿ ಆ ಬಾಶೆಗಳನ್ನು ಆಡುವವರಿಗೂ ಈ ಕೀಳರಿಮೆ ಅಂಟಿಕೊಂಡು ಮಕ್ಕಳ ನಡುವೆ ಸಮಾನ ಮನೋಬಾವ ಬೆಳೆಯದಂತೆ ಆಗಬಹುದು. ಹೀಗಾಗಿ ಇದು ಬಹುತ್ವದ ಪರಿಸರಕ್ಕೂ ತೊಂದರೆಯನ್ನು ಮಾಡಬಹುದು.

ಹೀಗೆ ಶಿಕ್ಶಣದಲ್ಲಿ ಮುಂದುವರೆದ ಹಲವರಲ್ಲಿಯೂ ಇನ್ನೂ ಬಿನ್ನವಾದ ಸಮಸ್ಯೆಗಳು ಇರುತ್ತವೆ. ಅವರಲ್ಲಿ ಕೆಲವರು ನಿರ‍್ದಿಶ್ಟ ವಿಶಯಗಳಲ್ಲಿ ಸೋಲುವುದನ್ನು ಕಾಣಬಹುದು. ಬಾಶೆಯಲ್ಲಿ ಹೆಚ್ಚಿನವರು ಸೋಲುತ್ತಾರೆ. ವ್ಯಾಕರಣವನ್ನು ಹಿಡಿಯುವಲ್ಲಿ ಅಸಾದ್ಯ ಸ್ತಿತಿಯಲ್ಲಿರುತ್ತಾರೆ. ಗಣಿತವನ್ನು ಪಡೆಯುವುದರಲ್ಲಿಯೂ ಇಂತದೆ ಸಮಸ್ಯೆಗಳನ್ನು ಕಾಣಬಹುದು. ಉತ್ತಮ ಅಂಕಗಳೊಂದಿಗೆ ಪಾಸಾಗಿ ದೊಡ್ಡ ಉದ್ಯೋಗದಲ್ಲಿರುವ ಹಲವರು ಒಂದು ಪತ್ರ ಬರೆಯುವ ಕುಶಲತೆಯನ್ನೂ ಹೊಂದಿರುವುದಿಲ್ಲ, ಒಬ್ಬರನ್ನು ಎದುರಿಸುವ ಸ್ತಿತಿಯಲ್ಲಿಯೂ ಇರುವುದಿಲ್ಲ.

ಒಟ್ಟಾರೆಯಾಗಿ ತಾಯ್ಮಾತಿನ ಶಿಕ್ಶಣ ಪಡೆದವರಲ್ಲಿ ಬದುಕಿನಲ್ಲಿ ಸಮಸ್ಯೆಗಳನ್ನು ಎದುರಿಸುವವರೂ, ಪೆರಮಾತಿನ ಶಿಕ್ಶಣವನ್ನು ಪಡೆದವರಲ್ಲಿ ಸೋತವರೂ ಹೆಚ್ಚು ಇರುತ್ತಾರೆ ಎಂಬುದನ್ನು ಗಮನಿಸಬಹುದು. ಪೆರಮಾತಿನ ಶಿಕ್ಶಣದಲ್ಲಿ ಬಂದೂ ಬದುಕಿನಲ್ಲಿ ಯಶ ಕಂಡವರೂ ಇದ್ದೆ ಇರುತ್ತಾರೆ, ಇಡಿಯಾಗಿ ಎಲ್ಲರಿಗೂ ಈ ವಾದವನ್ನು ಸಾಮಾನ್ಯೀಕರಿಸುವುದು ಯಾವತ್ತೂ ಅಪಾಯ. ಆದರೆ ಅಂತವರ ಸಂಕೆ ಕಡಿಮೆ ಇರುತ್ತದೆ. ಹೀಗೆ ಬಂದವರಲ್ಲಿ ಹಲವರು ಅವರವರ ವಯಕ್ತಿಕ ಸಾರ‍್ತö್ಯದಿಂದ ಬಂದವರು ಇರುತ್ತಾರೆ. ಪೆರಮಾತಿನ ಶಿಕ್ಶಣ ಕಾರಣವಾಗಿ ಹೀಗೆ ಬೆಳೆದಿರುವರು ಎಂದು ಹೇಳುವುದು ಬಹು ಕಶ್ಟದ ವಿಚಾರ.

ಈ ಅಂಕಣದ ಹಿಂದಿನ ಬರಹಗಳು:
ಪೆರಮಾತಿನ ಶಿಕ್ಶಣ: ಕೆಲ ಸಮಸ್ಯೆಗಳು-ಶಿಕ್ಶಣದಲ್ಲಿ ಸೋಲು
ಪೆರಮಾತಿನ ಶಿಕ್ಶಣ: ಕೆಲ ಸಮಸ್ಯೆಗಳು-ವಿಶಯದಲ್ಲಿ ಸೋಲು
ಆರ‍್ತಿಕ ಅಬಿರುದ್ದಿ ಮತ್ತು ತಾಯ್ಮಾತಿನ ಶಿಕ್ಶಣ (ಮುಂದುವರೆದುದು)
ಆರ‍್ತಿಕ ಅಬಿರುದ್ದಿ ಮತ್ತು ತಾಯ್ಮಾತಿನ ಶಿಕ್ಶಣ
ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ
ಬಹುತ್ವ, ಬಹುಬಾಶಿಕತೆ ಮತ್ತು ತಾಯ್ಮಾತಿನ ಶಿಕ್ಶಣ

ಸಮಾನತೆಯ ವಿಚಾರ ಮತ್ತು ತಾಯ್ಮಾತಿನ ಶಿಕ್ಶಣ
ತಾಯ್ಮಾತಿನ ಶಿಕ್ಶಣ ಯಾಕೆ?
ತಾಯ್ಮಾತಿನ ಶಿಕ್ಶಣ: ಎಲ್ಲಿತನಕ
ಮಗುವಿನ ಮನೋವಿಕಾಸ, ಸಾಮಾಜಿಕತೆ ಮತ್ತು ಕಲಿಕೆ
ಮಗು ಮತ್ತು ಬಾಶಾಗಳಿಕೆ
ತಾಯ್ಮಾತು-ತಾಯಿ ಮಾತು-ಗುರ‍್ತಿಕೆ
ಮನುಶ್ಯ ದೇಹರಚನೆ ಮತ್ತು ಬಾಶಾ ಗಳಿಕೆ
ಬಾಶೆ ಮತ್ತು ಮಾತು
ಲಂಬಾಣಿ ಮತ್ತು ಇತರ ಉತ್ತರ ಬಾರತದ ಬಾಶೆಗಳ ಸಹಸಂಬಂದ
ಮಲಯಾಳಂ, ಕೊಡವ ಮತ್ತು ಇತರ ದ್ರಾವಿಡ ಬಾಶೆಗಳೊಂದಿಗನ ಸಹಸಂಬಂದ
ಮರಾಟಿ, ಉರ‍್ದು ಮತ್ತು ಇತರ ದಕ್ಶಿಣದ ಬಾಶೆಗಳೊಡನೆಯ ಸಹಸಂಬಂದ
ಕನ್ನಡ ಮತ್ತು ತಮಿಳು ಸಹಸಂಬಂದ
ತುಳುವಿನೊಡನೆ ಸಹಸಂಬಂದ
ಕನ್ನಡ ಮತ್ತು ತೆಲುಗು ಸಹಸಂಬಂದ
ಬಾರತೀಯ ಇಂಗ್ಲೀಶು
ಇಂಗ್ಲೀಶು ಕನ್ನಡ ಬದುಕಿನೊಳಗೆ
ಇಂಗ್ಲೀಶೆಂಬ ಜಗತ್ತು ಕನ್ನಡ ಜಗತ್ತಿನೊಳಗೆ
ಪರ‍್ಶಿಯನ್ ನಡೆ-ಉರ‍್ದು ಬೆಳವಣಿಗೆ
ಅರಾಬಿಕ್-ಪರ‍್ಶಿಯನ್ ಕನ್ನಡ ಜಗತ್ತಿನೊಳಗೆ
ಸಕ್ಕದದ ಉಬ್ಬರವಿಳಿತ
ಅಸೋಕನ ಬರಹ-ಪಾಗದ-ಪಾಲಿ-ಪ್ರಾಕ್ರುತ ಮತ್ತು ಕನ್ನಡ
ಕನ್ನಡಮುಂ ಸಕ್ಕದಮುಂ
ಕನ್ನಡಮುಂ ಪಾಗದಮುಂ
ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?
ಬೇರೆ ಬಾಶೆಗಳ ನಂಟಿಲ್ಲದೆ ಬದುಕಬಹುದೆ?
ಎರಡು ಬಾಶೆಗಳ ನಡುವೆ ನಂಟು ಹೇಗೆ ಸಾಮಾಜಿಕ ಚಲನೆಯನ್ನು ಪಡೆದುಕೊಳ್ಳುತ್ತದೆ?
ವಿಶ್ವ ತಾಯ್ಮಾತಿನ ದಿವಸ
ಬಾಶೆಗಳ ನಡುವಿನ ನಂಟನ್ನು ಪರಿಬಾವಿಸುವುದು
ಕಲ್ಲು ಕಲ್ಲು ಹೇಗಾಯಿತು, ಯಾಕಾಯಿತು, ಇನ್ನೇನಾಯಿತು?
ಪ್ರತಿ ಪದಕೂ ಒಂದು ಚರಿತೆ ಇದೆ, ಮನುಶ್ಯರಿಗೆ ಮಾತ್ರವಲ್ಲ
ಹೊಲದಲ್ಲಿ ಕನ್ನಡ ಮತ್ತು ಇತಿಹಾಸದ ಅರಿವು
ಅಡುಗೆಮನೆಯ ಬಾಶಿಕ ಜಗತ್ತು ಇಲ್ಲವೆ ಅಡುಗೆಮನೆ ಕನ್ನಡ
ಮನೆಯೊಳಗೆ ಬಾಶಿಕ ಅನುಸಂದಾನ
ಪದಕೋಶದ ಬದುಕು
ಕನ್ನಡ ಪದಕೋಶ ಎಶ್ಟು ದೊಡ್ಡದು?
ಪದಕೋಶ: ಶಬ್ದಪಾರಮಾರ‍್ಗಮಶಕ್ಯಂ
ಕನ್ನಡ ಒಳನುಡಿಗಳು ಹೇಗೆ ಬಿನ್ನ?
ಕನ್ನಡ ಒಳನುಡಿಗಳ ಪಸರಿಕೆ ಅರಿಯುವುದು ಹೇಗೆ?
ಕನ್ನಡ ಒಳನುಡಿಗಳು ಎಶ್ಟು ಹಳೆಯವು?
ದರುಶನ-ನೋಡು/ನೋಡು-ದರುಶನ
ಬಕ್ತ-ಬಕುತ: ಕನ್ನಡ ಮತ್ತು ಸಂಸ್ಕ್ರುತಗಳ ನಡುವಿನ ಗುದುಮುರಿಗಿ
ಒಡೆ-ಅಡೆ-ಅರೆ
ವಾಕ್ಯಪ್ರಕಾರಗಳು
ವಿವಿದ ಬಗೆಯ ವಾಕ್ಯಗಳು
ಪೂರ‍್ಣ ಮತ್ತು ಅಪೂರ‍್ಣ ಕ್ರಿಯಾಪದಗಳು
ವಾಕ್ಯದಲ್ಲಿನ ಗಟಕಗಳ ನಡುವಿನ ಒಪ್ಪಂದ
ವಾಕ್ಯದ ಅನುಕ್ರಮ
ವಾಕ್ಯದ ಗಟಕಗಳ ನಡುವಿನ ಸಂಬಂದ
ವಾಕ್ಯದ ಗಟಕಗಳು
ಕಿರುವಾಕ್ಯಗಳು
ವಾಕ್ಯವೆಂಬ ಮಾಯಾಜಾಲ
ಕನ್ನಡ ಸಂದಿಗಳು
ಸಂದಿಯ ಕೂಟ
‘ಮನಿ’, ’ಮನೆ’, ‘ಮನ’, ‘ಮನಯ್’
ಕನ್ನಡದ ವಿಬಕ್ತಿಗಳು
ಕಾರಕ-ವಿಬಕ್ತಿ
ಕನ್ನಡದಲ್ಲಿ ವಚನ ವ್ಯವಸ್ತೆ
ಬಹು-ವಚನ
ಕನ್ನಡದಲ್ಲಿ ಲಿಂಗವು ತೆರತೆರ
ಲಿಂಗಮೆನಿತು ತೆರಂ
ಲಿಂಗವೆಂದರೆ
ಕಾಲದ ಕಟ್ಟಳೆ
ತೋರುಗವೆಂಬ ಮಾಯಕ
ಕನ್ನಡದಾಗ ಕಾಲನಿರ‍್ವಹಣೆ
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಸಾಮಾಜಿಕ ಬೆಳವಣಿಗೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದ ರಚನೆಯ ಗಟಕಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ಕನ್ನಡದಾಗ ಗ್ ಜ್ ಡ್ ದ್ ಬ್ ದ್ವನಿಗಳು - ಇತ್ತೀಚಿನ ಬೆಳವಣಿಗೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಅಪರೂಪದ ವರ‍್ತ್ಸ-ತಾಲವ್ಯ ದ್ವನಿಗಳು : ‘ಚ್’ ಮತ್ತು ‘ಜ್’
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1
ಬಾಶೆಯ ಬೆಳವಣಿಗೆ-ಬದಲಾವಣೆ
ಮೂಲಕನ್ನಡ
ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಕನ್ನಡದಾಗ ದ್ವನಿವಿಗ್ನಾನ
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು

 

MORE NEWS

ತಾಯ್ಮಾತಿನ ಶಿಕ್ಶಣ-ಸಾದ್ಯತೆಗಳು

16-03-2025 ಬೆಂಗಳೂರು

"ಬಾರತದ ಜನಗಣತಿ ಮಾಹಿತಿ ಪ್ರಕಾರ ಅನುಸೂಚಿತ ಬಾಶೆಗಳನ್ನು ಆಡುವವರ ಸಂಕೆ ಸುಮಾರು 1,17,11,03,853 ಮಂದಿ ಅಂದರೆ ಬಾ...

ಹಂಗಿನರಮನೆಯ ಹೊರಗೆ ಕಥೆಯಲ್ಲಿ ಪ್ರೇಮ ವೈಫಲ್ಯದ ವೈರುಧ್ಯದ ಮುಖಗಳು

13-03-2025 ಬೆಂಗಳೂರು

"ಪ್ರಶಸ್ತಿ ಪುರಸ್ಕಾರಗಳಿಂದ ದೂರವಿದ್ದ ಇವರು ಸರಳ ಸಜ್ಜನಿಕೆಯ ವ್ಯಕ್ತಿತ್ವ ಇವರ ಹಂಗಿನರಮನೆಯ ಹೊರಗೆ ಕಥೆಯು &ldqu...

ವಿಶ್ವರಂಗಭೂಮಿ ದಿನಾಚರಣೆ ಮತ್ತು ಕುಸಿಯಿತ್ತಿರುವ ರಂಗಮೌಲ್ಯಗಳು

09-03-2025 ಬೆಂಗಳೂರು

"ರಂಗಭೂಮಿ ಎಂದರೆ ಕೇವಲ ನಾಟಕಗಳ ಪ್ರದರ್ಶನ ಮಾತ್ರವಲ್ಲ. ಅದೊಂದು ಬಹುತ್ವ ಆಯಾಮಗಳ ಜೀವನ ಪ್ರೀತಿ ಹುಟ್ಟಿಸುವ ಜನಸಂಸ...