ತಾಯ್ಮಾತಿನ ಶಿಕ್ಶಣ-ಸಾದ್ಯತೆಗಳು

Date: 16-03-2025

Location: ಬೆಂಗಳೂರು


"ಬಾರತದ ಜನಗಣತಿ ಮಾಹಿತಿ ಪ್ರಕಾರ ಅನುಸೂಚಿತ ಬಾಶೆಗಳನ್ನು ಆಡುವವರ ಸಂಕೆ ಸುಮಾರು 1,17,11,03,853 ಮಂದಿ ಅಂದರೆ ಬಾರತ ಜನಸಂಕೆಯ 96.71%ರಶ್ಟು ಇದೆ. ಉಳಿದ 3,97,51,124 ಅಂದರೆ 3.29% ಮಂದಿ ಇತರ ನೂರಾರು ಬಾಶೆಗಳನ್ನು ಮಾತನಾಡುತ್ತಿದ್ದಾರೆ. ಇದರಿಂದ ಬುಡಕಟ್ಟು ಮತ್ತು ಸಣ್ಣ ಬಾಶೆಗಳ ಸಂಕೆ ತುಂಬಾ ದೊಡ್ಡದಿದೆ ಮತ್ತು ಮಾತುಗರ ಸಂಕೆ ಕಮ್ಮಿ ಇದೆ ಎಂಬುದು ತಿಳಿಯುತ್ತದೆ," ಎನ್ನುತ್ತಾರೆ ಅಂಕಣಕಾರ ಬಸವರಾಜ ಕೋಡಗುಂಟಿ. ಅವರು ತಮ್ಮ ‘ತೊಡೆಯಬಾರದ ಲಿಪಿಯ ಬರೆಯಬಾರದು’ ಅಂಕಣದಲ್ಲಿ ‘ತಾಯ್ಮಾತಿನ ಶಿಕ್ಶಣ-ಸಾದ್ಯತೆಗಳು’ ಕುರಿತು ಬರೆದಿದ್ದಾರೆ.

ತಾಯ್ಮಾತಿನ ಶಿಕ್ಶಣವನ್ನು ಕೊಡುವುದಕ್ಕೆ ಇರುವ ಸಾದ್ಯತೆಗಳನ್ನು ಒಂದೆರಡು ಅಂಕಣಗಳಲ್ಲಿ ತುಸು ಚರ‍್ಚಿಸಿದೆ. ಬಹುಬಾಶಿಕ ಪರಿಸರದಲ್ಲಿ ತಾಯ್ಮಾತಿನ ಶಿಕ್ಶಣವನ್ನು ಜಾರಿಗೆ ತರುವುದಕ್ಕೆ ಸಹಜವಾಗಿಯೆ ಬಹುದೊಡ್ಡ ಸವಾಲುಗಳು ಇವೆ. ಅವುಗಳನ್ನು ಮೇಲೆ ಚರ‍್ಚಿಸಲಾಗಿದೆ. ಅದರೊಟ್ಟಿಗೆ ಈ ಬಹುಬಾಶಿಕ ಬಾರತದಲ್ಲಿ ತಾಯ್ಮಾತಿನ ಶಿಕ್ಶಣದ ಸಾದ್ಯತೆಗಳನ್ನು ಈಗ ಸಣ್ಣದಾಗಿ ಮಾತನಾಡಿದೆ.

ಬಾರತದ ಜನಗಣತಿ ಮಾಹಿತಿ ಪ್ರಕಾರ ಅನುಸೂಚಿತ ಬಾಶೆಗಳನ್ನು ಆಡುವವರ ಸಂಕೆ ಸುಮಾರು 1,17,11,03,853 ಮಂದಿ ಅಂದರೆ ಬಾರತ ಜನಸಂಕೆಯ 96.71%ರಶ್ಟು ಇದೆ. ಉಳಿದ 3,97,51,124 ಅಂದರೆ 3.29% ಮಂದಿ ಇತರ ನೂರಾರು ಬಾಶೆಗಳನ್ನು ಮಾತನಾಡುತ್ತಿದ್ದಾರೆ. ಇದರಿಂದ ಬುಡಕಟ್ಟು ಮತ್ತು ಸಣ್ಣ ಬಾಶೆಗಳ ಸಂಕೆ ತುಂಬಾ ದೊಡ್ಡದಿದೆ ಮತ್ತು ಮಾತುಗರ ಸಂಕೆ ಕಮ್ಮಿ ಇದೆ ಎಂಬುದು ತಿಳಿಯುತ್ತದೆ. ಇವುಗಳಲ್ಲಿ ಸಹಜವಾಗಿ ಹೆಚ್ಚಿನ ಬಾಶೆಗಳಿಗೆ ಮಾತುಗರ ಸಂಕೆ ತುಂಬಾ ಕಡಿಮೆ ಇರುತ್ತದೆ. ಬಾರತಕ್ಕೆ ಅದರ ವಯಿವಿದ್ಯತೆಯೆ ಒಂದು ಶಕ್ತಿ, ಅದುವೆ ಬಾರತದ ಶ್ರೀಮಂತಿಕೆ. ಹಾಗಾದರೆ ಬಾರತಕ್ಕೆ ಈ ವಯಿವಿದ್ಯತೆ ಮತ್ತು ಶ್ರೀಮಂತಿಕೆಯನ್ನು ತಂದಿರುವುದು ಈ ಸಣ್ಣ ಸಣ್ಣ ಬಾಶೆಗಳು. ಬಾರತದ ಬಹುತ್ವ ಅಡಗಿಕೊಂಡಿರುವುದು ಈ ಬಾಶೆಗಳಲ್ಲಿ ಎಂದಾಗುತ್ತದೆ. ಇದಕ್ಕೆ ಬಿನ್ನ ಆಯಾಮಗಳು ಇವೆ ಎಂಬುದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು. ಹಾಗಾದರೆ ಈ ಬುಡಕಟ್ಟು ಇಲ್ಲವೆ ಸಣ್ಣ ಸಣ್ಣ ಬಾಶೆಗಳ ಮೇಲೆ ಹೆಚ್ಚು ಕೆಲಸಗಳನ್ನು ಮಾಡಿ ಅವುಗಳಲ್ಲಿ ಶಿಕ್ಶಣವನ್ನು ಕೊಡುವುದಕ್ಕೆ ಅವಶ್ಯವಾದ ತಯಾರಿಗಳನ್ನು ಮಾಡಿಕೊಳ್ಳಬೇಕಿದೆ.

ಈ ಸಣ್ಣ ಸಣ್ಣ ಬಾಶೆಗಳನ್ನು ಆಡುವವರು ಒಂದೆ ಕಡೆ ನೆಲೆ ನಿಂತಿರುವುದು ಕಡಿಮೆ. ಕೆಲವೆ ಬಾಶೆಗಳು ಹಾಗೆ ಒಂದು ನಿರ‍್ದಿಶ್ಟ ಪ್ರದೇಶದಲ್ಲಿ ಹರಡಿಕೊಂಡಿರುತ್ತವೆ. ಹೀಗೆ ಒಂದು ನಿರ‍್ದಿಶ್ಟ ಪರಿಸರದಲ್ಲಿ ಕಂಡುಬರುವ ಬಾಶೆಗಳಿಗೆ ಆ ಬಾಶೆಯಲ್ಲಿ ಶಿಕ್ಶಣವನ್ನು ಕೊಡುವುದಕ್ಕೆ ಅವಶ್ಯವಾದ ಮತ್ತು ಸೂಕ್ತವಾದ ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ಇದು ಹೆಚ್ಚು ಕಶ್ಟದ ಕೆಲಸವೇನೂ ಆಗಲಿಕ್ಕಿಲ್ಲ. ಆದರೆ ಇನ್ನು ಕೆಲವು ಬಾಶೆಗಳು ವಿವಿದ ಪ್ರದೇಶಗಳಲ್ಲಿ ಹರಡಿಕೊಂಡಿರುತ್ತವೆ. ಕೆಲವು ಬಾಶೆಗಳ ಸಂದರ‍್ಬದಲ್ಲಿ ಈ ಹರಡಿಕೊಂಡಿರುವಿಕೆ ಕೆಲವು ಜಿಲ್ಲೆಗಳನ್ನು ವ್ಯಾಪಿಸಿಕೊಂಡಿರಬಹುದು, ಇನ್ನು ಕೆಲವು ಸಂದರ‍್ಬಗಳಲ್ಲಿ ಇವು ಹಲವು ರಾಜ್ಯಗಳನ್ನು ವ್ಯಾಪಿಸಿಕೊಂಡಿರುವುದು ಕಾಣಿಸುತ್ತದೆ. ಅವರು ನೆಲೆಗೊಂಡಿರುವ ಎಲ್ಲ ಪ್ರದೇಶಗಳಲ್ಲಿಯೂ ಅವರು ಕಡಿಮೆ ಸಂಕೆಯಲ್ಲಿ ಇರುತ್ತಾರೆ. ಇಂತಾ ಸಮಯದಲ್ಲಿ ತಾಯ್ಮಾತಿನ ಶಿಕ್ಶಣ ನಿಜವಾದ ಸವಾಲು ಆಗುತ್ತದೆ.

ಆದರೆ, ಬಾರತದ ಬಾಶಿಕ ಪರಿಸ್ತಿತಿಯ ಸೂಕ್ಷ್ಮಮತೆ ಎಶ್ಟಿದೆ ಎಂದರೆ ಇನ್ನೂ ಆಳದ, ದೊಡ್ಡ ಪ್ರಮಾಣದ ಸವಾಲುಗಳನ್ನು ಕಾಣಬಹುದು. ಹೀಗೆ ವಿವಿದ ಪ್ರದೇಶಗಳಲ್ಲಿ ಹರಡಿಕೊಂಡಿರುವ ಕೆಲವು ಬುಡಕಟ್ಟುಗಳು ಒಂದಕ್ಕಿಂತ ಹೆಚ್ಚಿನ ರಾಜ್ಯಗಳಲ್ಲಿ ಹರಿದುಹೋಗಿರುವುದನ್ನೂ ಕಾಣಬಹುದು. ಒಂದು ರಾಜ್ಯದಲ್ಲಿ ಹೆಚ್ಚಿನ ಇನ್ನೊಂದು ರಾಜ್ಯದಲ್ಲಿ ಕಡಿಮೆ ಸಂಕೆಯ ಮಂದಿ ವಾಸಿಸುತ್ತಿರಬಹುದು. ಇನ್ನು ಕೆಲ ಸಂದರ‍್ಬಗಳಲ್ಲಿ ಎಲ್ಲೆಡೆಯೂ ತುಂಬಾ ಕಡಿಮೆ ಮಂದಿ ಸಿಗಬಹುದು. ಈ ಪಸರಿಸಿಕೊಳ್ಳುವಿಕೆ ಕೆಲವು ಬಾಶೆಗಳ ಸಂದರ‍್ಬದಲ್ಲಿ ಇಡಿಯ ಬಾರತವನ್ನು ವ್ಯಾಪಿಸಿಕೊಂಡಿರುತ್ತದೆ. ಕಡಿಮೆ ಸಂಕೆಯಲ್ಲಿಯೆ ಆದರೂ ಹಲವಾರು ರಾಜ್ಯಗಳಲ್ಲಿ ಕಂಡುಬರಬಹುದು. ಇಂತಾ ಬಿಡಿಬಿಡಿ ಸಮಸ್ಯೆಗಳಲ್ಲಿ ಬಿನ್ನವಾದ ಅನುಕ್ರಮಗಳನ್ನು ಬೆಳೆಸಿಕೊಳ್ಳಬೇಕಾದ ಅವಶ್ಯಕತೆ ಇದೆ.

ಇನ್ನು ಕೆಲ ಸಂದರ‍್ಬಗಳಲ್ಲಿ ಇಡಿಯಾಗಿ ಒಂದು ಬಾಶೆಯ ಸಂಕೆಯೆ ಕೆಲವು ಸಾವಿರದಶ್ಟು ಇರುತ್ತದೆ. ಕೆಲವೊಮ್ಮೆ ಈ ಸಾವಿರದಶ್ಟು ಮಂದಿಯೂ ಒಂದೆಡೆ ನೆಲೆಯೂರಿ ಇರದೆ ಬಿನ್ನ ಪ್ರದೇಶಗಳಲ್ಲಿ ನೆಲೆಯಾಗಿರಲೂಬಹುದು. ಇನ್ನೂ ಕೆಲವು ಸಂದರ‍್ಬಗಳಲ್ಲಿ ಕೆಲವು ಬಾಶೆಗಳಿಗೆ ಕೇವಲ ಕೆಲವು ನೂರರಶ್ಟು ಸಂಕೆಯ ಮಾತುಗರು ಇರುತ್ತಾರೆ. ನೂರರಶ್ಟು ಇರುವುದು ಇಡಿಯ ಬಾಶೆಯ ಸಂಕೆ. ಹಾಗಾದರೆ ಇವರಲ್ಲಿ ಪ್ರತಿವರುಶ ಎಶ್ಟು ಮಕ್ಕಳು ಶಾಲೆಗೆ ಬರಬಹುದು ಎಂಬ ಮೊದಲಾದ ವಿಶಯಗಳನ್ನು ಯೋಚಿಸಬೇಕು. ಇಲ್ಲೆಲ್ಲ ಹೆಚ್ಚು ಮಾನವೀಯ ನೆಲೆಯನ್ನು ಹಾಕಿಕೊಂಡು ಅರ‍್ತ ಮಾಡಿಕೊಳ್ಳಬೇಕು.

ಇಂದಿನ ಆದುನಿಕ ತಂತ್ರಗ್ನಾನ ಇಂತಾ ಸಂದರ‍್ಬಗಳಲ್ಲಿ ಹೆಚ್ಚು ಸಹಾಯ ಮಾಡಬಹುದು. ಒಂದು ಬಾಶೆಯಲ್ಲಿ ಶಿಕ್ಶಣ ಮಾದ್ಯಮ ಕೊಡುವುದು ಎಂದರೆ ಒಂದು ಬೇರೆ ಶಾಲೆಯನ್ನು ತೆಗೆಯಬೇಕಾದ ಅವಶ್ಯಕತೆ ಇಲ್ಲ. ಒಂದೆ ಶಾಲೆಯಲ್ಲಿ ಬಿನ್ನ ತಾಯ್ಮಾತುಗಳ ಮಾದ್ಯಮವನ್ನು ನಡೆಸಲು ಅವಶ್ಯವಾದ ರೀತಿಯಲ್ಲಿ ವ್ಯವಸ್ತೆಯನ್ನು ಮಾಡಬೇಕು. ಮುಕ್ಯವಾಗಿ ಮೊದಲಿಗೆ ಪ್ರತಿ ತಾಯ್ಮಾತಿನಲ್ಲಿ ಪಟ್ಯಗಳನ್ನು, ಪೂರಕಪಟ್ಯಗಳನ್ನು, ಸಂಬಂದಿತ ಸಾಮಗ್ರಿಗಳನ್ನು ತಯಾರಿಸಬೇಕು. ಅದರಂತೆ ಶಿಕ್ಶಕರನ್ನು ತಯಾರಿಸಬೇಕು.

ಈ ಪ್ರಕ್ರಿಯೆಗಳಲ್ಲಿ ಮೊದಲಿಗೆ ಪ್ರತಿ ಬಾಶೆಗೂ ಕನಿಶ್ಟಮಟ್ಟಿಗೆ ವ್ಯಾಕರಣ, ನಿಗಂಟುಗಳನ್ನು ತಯಾರಿಸಬೇಕು. ಈಗಾಗಲೆ ಹಲವಾರು ಬಾರತೀಯ ಬಾಶೆಗಳಿಗೆ, ಸಣ್ಣ ಸಣ್ಣ ಮತ್ತು ಬುಡಕಟ್ಟು ಬಾಶೆಗಳನ್ನೂ ಒಳಗೊಂಡು ಹಲವಾರು ಬಾಶೆಗಳಿಗೆ ವ್ಯಾಕರಣಗಳು ಬಂದಿವೆ. ಬಾಶಾವಿಗ್ನಾನ, ಸಮಾಜಶಾಸ್ತ್ರ, ಮಾನವಶಾಸ್ತ್ರ ಮೊದಲಾದ ಹಲವು ಶಿಸ್ತುಗಳಲ್ಲಿ ಹೆಚ್ಚಿನ ಅದ್ಯಯನಗಳು ಬಂದಿರುತ್ತವೆ. ಇವುಗಳನ್ನು ಪಟ್ಯತಯಾರಿಗೆ ಮತ್ತು ಪೂರಕಪಟ್ಯ ತಯಾರಿಗೆ ಬಳಸಿಕೊಳ್ಳಬಹುದು. ತುಳು, ಕೊಂಕಣಿ ಮೊದಲಾದಂತಾ ಬಾಶೆಗಳಲ್ಲಿ ಪಟ್ಯಗಳಿಗೆ, ಪೂರಕಪಟ್ಯಗಳಿಗೆ ಬೇಕಾಗುವಶ್ಟು ಮಾಹಿತಿ, ಅದ್ಯಯನಗಳು ಈಗಾಗಲೆ ಇರುತ್ತವೆ. ಬುಡಕಟ್ಟು ಬಾಶೆಗಳಲ್ಲಿ ಪಟ್ಯತಯಾರಿ ಬಗೆಗೆ ಮುಂದೆ ಪ್ರತ್ಯೇಕವಾಗಿ ಮಾತನಾಡಿದೆ. ಹಾಗಾಗಿ ಇಲ್ಲಿ ಇತರ ಸಿದ್ದತೆಗಳ ಬಗೆಗೆ ತುಸು ಮಾತನಾಡಿದೆ.

ಆಯಾ ಬಾಶೆಗಳ ಹಿನ್ನೆಲೆಯ ಹಲವರು ಈಗಾಗಲೆ ಶಿಕ್ಶಕರಾಗಿ ಕೆಲಸ ಮಾಡುತ್ತಿರಬಹುದು. ಅಂತವರನ್ನು ಹುಡುಕಿ ಅವರನ್ನು ಅವರವರ ತಾಯ್ಮಾತಿನಲ್ಲಿ ಪಾಟ ಮಾಡುವುದಕ್ಕೆ ಸಿದ್ದಪಡಿಸಬೇಕು. ಅವರಿಗೆ ವಿಶೇಶ ಕರ‍್ಯಾಗಾರಗಳನ್ನು ಮಾಡಿ ಆಯಾ ಬಾಶೆಗಳಲ್ಲಿ ಪಾಟ ಮಾಡುವುದಕ್ಕೆ ಅವರನ್ನು ಸಿದ್ದಗೊಳಿಸಬೇಕು. ಸಾಮಾನ್ಯವಾಗಿ ಆ ಬಾಶೆ ಮತ್ತು ಆ ಬಾಶೆಯ ಸಾಮಾಜಿಕ ಹಿನ್ನೆಲೆಯನ್ನು ಸಹಜವಾಗಿ ಪಟ್ಯಗಳಲ್ಲಿ ಬಳಸಿಕೊಳ್ಳುವುದರಿಂದ ಆ ಬಾಶೆಯನ್ನಾಡುವ ಶಿಕ್ಶಕರಿಗೆ ಇದು ಹೆಚ್ಚಿನ ಕಶ್ಟವೇನೂ ಆಗಲಿಕ್ಕಿಲ್ಲ. ದ್ವಿಬಾಶಿಕ ಮತ್ತು ಬಹುಬಾಶಿಕ ಪರಿಸರದ ಹಿನ್ನೆಲೆಯಿಂದ ಬಂದ ಇತರ ಶಿಕ್ಶಕರನ್ನು, ಬಿನ್ನ ಬಾಶೆಯ ಪರಿಚಯ ಇರುವವರನ್ನು ಕೂಡ ಹೀಗೆ ಬಳಸಿಕೊಳ್ಳಬಹುದು.

ಹೀಗೆ ಹೊಸ ಬಾಶಾ ಮಾದ್ಯಮದಲ್ಲಿ ಪಾಟ ಮಾಡುವುದಕ್ಕೆ ಬರುವ ಶಿಕ್ಶಕರಿಗೆ ತುಸು ವಿಶೇಶ ಪ್ರೋತ್ಸಾಹ ನೀಡುವುದಕ್ಕೆ ಕೆಲವು ಕ್ರಮಗಳನ್ನು ಕಯ್ಗೊಳ್ಳಬಹುದು. ಆಯಾ ಬಾಶೆಯ ಮಕ್ಕಳು ಹೆಚ್ಚು ಇರುವ ಪರಿಸರದ ಹತ್ತಿರದ ಶಾಲೆಗಳಲ್ಲಿ ಈ ಶಿಕ್ಶಕರನ್ನು ನೇಮಿಸಬೇಕು. ಆನಂತರ ಈಗ ಇರುವ ಅದೆ ಶಾಲೆಗಳಲ್ಲಿ ಈ ಹೊಸ ಬಾಶಾ ಮಾದ್ಯಮಗಳಿಗೆ ತುಸು ಜಾಗವನ್ನು ಮಾಡಿಕೊಡಬೇಕು. ಇಲ್ಲಿ ಹಲವು ಅವಕಾಶಗಳನ್ನು ಬಳಸಿಕೊಳ್ಳಬಹುದು. ಹೊಸ ಬಾಶಾ ಮಾದ್ಯಮದಲ್ಲಿ ಹೆಚ್ಚು ಮಕ್ಕಳಿದ್ದು ಒಬ್ಬ ಶಿಕ್ಶಕರಿಗೆ ಸಾಕಾಗುವಶ್ಟು ಕೆಲಸಗಳಿದ್ದರೆ ಅವರಿಗೆ ಇಡಿಯಾಗಿ ಆ ಬಾಶೆಯಲ್ಲಿ ಬೋದಿಸುವ ಕೆಲಸವನ್ನು ಮಾತ್ರ ಕೊಡಬಹುದು. ಒಂದು ವೇಳೆ ಕಡಿಮೆ ಕೆಲಸದ ಅವದಿ ಇದ್ದರೆ ಆ ಶಿಕ್ಶಕರನ್ನು ಇದುವರೆಗೆ ಇರುವ ಮಾದ್ಯಮದಲ್ಲಿಯೂ ಕೆಲಸ ಮಾಡುವ ಅವಕಾಶವನ್ನು ಅವರಿಗೆ ಉಳಿಸಬಹುದು. ಇದರಿಂದ ಶಿಕ್ಶಕರ ದ್ವಿಬಾಶಿಕ ಸಾರ‍್ತವನ್ನು ಬಳಸಿಕೊಂಡಂತೆಯೂ ಆಗುತ್ತದೆ.

ತರಗತಿಗಳ ಕೊಟಡಿಗಳ ಹೊಂದಿಕೆಯೂ ಒಂದು ಮೂಲಬೂತ ಅವಶ್ಯಕತೆ. ಇಲ್ಲಿಯೂ ಕೂಡ ಆರಂಬದ ಹಂತದಲ್ಲಿ ಇರುವಾಗ ಇರುವ ಸವುಲಬ್ಯಗಳನ್ನು ಬಳಸಿಕೊಂಡು ಬಿನ್ನ ಬಾಶೆಗಳ ಮಾದ್ಯಮಗಳನ್ನು ಶುರು ಮಾಡಬಹುದು. ಇರುವ ವೇಳಾಪಟ್ಟಿಯಲ್ಲಿ ಸಾದ್ಯವಿರುವ ಹೊಂದಾಣಿಕೆಗಳನ್ನು, ಒಟ್ಟು ದಿನದ ಸಮಯದ ಒಳಗೆ ಮಾಡಿಕೊಳ್ಳಲು ಸಾದ್ಯವಿರುವ ಹೊಂದಾಣಿಕೆಗಳನ್ನು ಮಾಡಿಕೊಂಡು ಅವೆ ತರಗತಿ ಕೊಟಡಿಗಳಲ್ಲಿ ಬಿನ್ನ ಮಾದ್ಯಮಗಳ ತರಗತಿಗಳನ್ನು ನಡೆಸಲು ಅವಕಾಶ ಮಾಡಿಕೊಳ್ಳಬೇಕು. ಒಂದು ತರಗತಿ ನಡೆಸಲು ಸೂಕ್ತವಾದ ಮಕ್ಕಳ ಸಂಕೆ ಇರುವಲ್ಲಿ ಇಂತಾ ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಒಂದು ತರಗತಿ ಕೋಣೆಯ ಮಕ್ಕಳ ಸೂಕ್ತ ಸಂಕೆ ಎಶ್ಟು ಎಂಬುದನ್ನು ವಿಗ್ನಾನಿಕ ಹಿನ್ನೆಲೆಯ ಸಹಾಯ ಪಡೆದು ನಿರ‍್ದರಿಸಬಹುದು.

ಒಂದು ವೇಳೆ ತುಂಬಾ ಕಡಿಮೆ ಸಂಕೆಯ ಮಕ್ಕಳು ಇದ್ದಲ್ಲಿ ಬೇರೆ ಕೆಲವು ರ‍್ಯಾಯಗಳನ್ನು ಕೂಡ ಮಾಡಿಕೊಳ್ಳಬಹುದು. ಪ್ರತಿಯೊಂದು ಪರಿಸರದಲ್ಲಿ ಹಲವಾರು ಬಿನ್ನ ಬಗೆಯ ಹೊಂದಾಣಿಕೆಗಳನ್ನು ಮಾಡಿಕೊಳ್ಳಲು ಸಾದ್ಯವಿರುತ್ತದೆ. ಇಲ್ಲಿ ಆ ಬಾಶೆ ತಿಳಿದ ಶಿಕ್ಶಕರಲ್ಲದ ಇತರರನ್ನು ಕೂಡ ಬಳಸಿಕೊಳ್ಳಬಹುದು. ಇವರು ಬೇರೆ ಉದ್ಯೋಗ ಮಾಡುವವರಾಗಿರಬಹುದು, ಸಮಾಜ ಸೇವಾ ಕೆಲಸಗಳಲ್ಲಿ ತೊಡಗಿಕೊಂಡವರು, ಆ ಸಮುದಾಯದ ಇತರ ಸಾಕ್ಶರ ಆಸಕ್ತರು ಮೊದಲಾದವರನ್ನೂ ಬಳಸಿಕೊಳ್ಳುವ ಅವಕಾಶಗಳನ್ನು ಮುಕ್ತವಾಗಿಟ್ಟುಕೊಳ್ಳಬೇಕು. ಈ ಎಲ್ಲ ಅವಕಾಶಗಳನ್ನು ಬಳಸಿಕೊಂಡು ಒಂದು ವ್ಯವಸ್ತೆಯನ್ನು ಮಾಡಬೇಕು. ಹಲವು ಸಾದ್ಯತೆಗಳು ಮುಕ್ತವಾಗಿದ್ದಾಗ ಆಗಬಹುದಾದ ಸಮಸ್ಯೆಗಳು ಬಾರದ ರೀತಿಯಲ್ಲಿ ಈ ವ್ಯವಸ್ತೆಯನ್ನು ಮಾಡಿಕೊಳ್ಳಬೇಕು.

ಈ ಅಂಕಣದ ಹಿಂದಿನ ಬರಹಗಳು:
ತಾಯ್ಮಾತಿನ ಶಿಕ್ಶಣ: ಕೆಲವು ಸವಾಲುಗಳು-ಮುಂದುವರೆದುದು

ತಾಯ್ಮಾತಿನ ಶಿಕ್ಶಣ: ಕೆಲವು ಸವಾಲುಗಳು
ತಾಯ್ಮಾತಿನ ಶಿಕ್ಶಣ-ಕೆಲವು ಮಾದರಿಗಳು
ಪೆರಮಾತಿನ ಶಿಕ್ಶಣ: ಕೆಲ ಸಮಸ್ಯೆಗಳು-ಬದುಕಿನಲ್ಲಿ ಸೋಲು
ಪೆರಮಾತಿನ ಶಿಕ್ಶಣ: ಕೆಲ ಸಮಸ್ಯೆಗಳು-ಶಿಕ್ಶಣದಲ್ಲಿ ಸೋಲು
ಪೆರಮಾತಿನ ಶಿಕ್ಶಣ: ಕೆಲ ಸಮಸ್ಯೆಗಳು-ವಿಶಯದಲ್ಲಿ ಸೋಲು
ಆರ‍್ತಿಕ ಅಬಿರುದ್ದಿ ಮತ್ತು ತಾಯ್ಮಾತಿನ ಶಿಕ್ಶಣ (ಮುಂದುವರೆದುದು)
ಆರ‍್ತಿಕ ಅಬಿರುದ್ದಿ ಮತ್ತು ತಾಯ್ಮಾತಿನ ಶಿಕ್ಶಣ
ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ
ಬಹುತ್ವ, ಬಹುಬಾಶಿಕತೆ ಮತ್ತು ತಾಯ್ಮಾತಿನ ಶಿಕ್ಶಣ

ಸಮಾನತೆಯ ವಿಚಾರ ಮತ್ತು ತಾಯ್ಮಾತಿನ ಶಿಕ್ಶಣ
ತಾಯ್ಮಾತಿನ ಶಿಕ್ಶಣ ಯಾಕೆ?
ತಾಯ್ಮಾತಿನ ಶಿಕ್ಶಣ: ಎಲ್ಲಿತನಕ
ಮಗುವಿನ ಮನೋವಿಕಾಸ, ಸಾಮಾಜಿಕತೆ ಮತ್ತು ಕಲಿಕೆ
ಮಗು ಮತ್ತು ಬಾಶಾಗಳಿಕೆ
ತಾಯ್ಮಾತು-ತಾಯಿ ಮಾತು-ಗುರ‍್ತಿಕೆ
ಮನುಶ್ಯ ದೇಹರಚನೆ ಮತ್ತು ಬಾಶಾ ಗಳಿಕೆ
ಬಾಶೆ ಮತ್ತು ಮಾತು
ಲಂಬಾಣಿ ಮತ್ತು ಇತರ ಉತ್ತರ ಬಾರತದ ಬಾಶೆಗಳ ಸಹಸಂಬಂದ
ಮಲಯಾಳಂ, ಕೊಡವ ಮತ್ತು ಇತರ ದ್ರಾವಿಡ ಬಾಶೆಗಳೊಂದಿಗನ ಸಹಸಂಬಂದ
ಮರಾಟಿ, ಉರ‍್ದು ಮತ್ತು ಇತರ ದಕ್ಶಿಣದ ಬಾಶೆಗಳೊಡನೆಯ ಸಹಸಂಬಂದ
ಕನ್ನಡ ಮತ್ತು ತಮಿಳು ಸಹಸಂಬಂದ
ತುಳುವಿನೊಡನೆ ಸಹಸಂಬಂದ
ಕನ್ನಡ ಮತ್ತು ತೆಲುಗು ಸಹಸಂಬಂದ
ಬಾರತೀಯ ಇಂಗ್ಲೀಶು
ಇಂಗ್ಲೀಶು ಕನ್ನಡ ಬದುಕಿನೊಳಗೆ
ಇಂಗ್ಲೀಶೆಂಬ ಜಗತ್ತು ಕನ್ನಡ ಜಗತ್ತಿನೊಳಗೆ
ಪರ‍್ಶಿಯನ್ ನಡೆ-ಉರ‍್ದು ಬೆಳವಣಿಗೆ
ಅರಾಬಿಕ್-ಪರ‍್ಶಿಯನ್ ಕನ್ನಡ ಜಗತ್ತಿನೊಳಗೆ
ಸಕ್ಕದದ ಉಬ್ಬರವಿಳಿತ
ಅಸೋಕನ ಬರಹ-ಪಾಗದ-ಪಾಲಿ-ಪ್ರಾಕ್ರುತ ಮತ್ತು ಕನ್ನಡ
ಕನ್ನಡಮುಂ ಸಕ್ಕದಮುಂ
ಕನ್ನಡಮುಂ ಪಾಗದಮುಂ
ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?
ಬೇರೆ ಬಾಶೆಗಳ ನಂಟಿಲ್ಲದೆ ಬದುಕಬಹುದೆ?
ಎರಡು ಬಾಶೆಗಳ ನಡುವೆ ನಂಟು ಹೇಗೆ ಸಾಮಾಜಿಕ ಚಲನೆಯನ್ನು ಪಡೆದುಕೊಳ್ಳುತ್ತದೆ?
ವಿಶ್ವ ತಾಯ್ಮಾತಿನ ದಿವಸ
ಬಾಶೆಗಳ ನಡುವಿನ ನಂಟನ್ನು ಪರಿಬಾವಿಸುವುದು
ಕಲ್ಲು ಕಲ್ಲು ಹೇಗಾಯಿತು, ಯಾಕಾಯಿತು, ಇನ್ನೇನಾಯಿತು?
ಪ್ರತಿ ಪದಕೂ ಒಂದು ಚರಿತೆ ಇದೆ, ಮನುಶ್ಯರಿಗೆ ಮಾತ್ರವಲ್ಲ
ಹೊಲದಲ್ಲಿ ಕನ್ನಡ ಮತ್ತು ಇತಿಹಾಸದ ಅರಿವು
ಅಡುಗೆಮನೆಯ ಬಾಶಿಕ ಜಗತ್ತು ಇಲ್ಲವೆ ಅಡುಗೆಮನೆ ಕನ್ನಡ
ಮನೆಯೊಳಗೆ ಬಾಶಿಕ ಅನುಸಂದಾನ
ಪದಕೋಶದ ಬದುಕು
ಕನ್ನಡ ಪದಕೋಶ ಎಶ್ಟು ದೊಡ್ಡದು?
ಪದಕೋಶ: ಶಬ್ದಪಾರಮಾರ‍್ಗಮಶಕ್ಯಂ
ಕನ್ನಡ ಒಳನುಡಿಗಳು ಹೇಗೆ ಬಿನ್ನ?
ಕನ್ನಡ ಒಳನುಡಿಗಳ ಪಸರಿಕೆ ಅರಿಯುವುದು ಹೇಗೆ?
ಕನ್ನಡ ಒಳನುಡಿಗಳು ಎಶ್ಟು ಹಳೆಯವು?
ದರುಶನ-ನೋಡು/ನೋಡು-ದರುಶನ
ಬಕ್ತ-ಬಕುತ: ಕನ್ನಡ ಮತ್ತು ಸಂಸ್ಕ್ರುತಗಳ ನಡುವಿನ ಗುದುಮುರಿಗಿ
ಒಡೆ-ಅಡೆ-ಅರೆ
ವಾಕ್ಯಪ್ರಕಾರಗಳು
ವಿವಿದ ಬಗೆಯ ವಾಕ್ಯಗಳು
ಪೂರ‍್ಣ ಮತ್ತು ಅಪೂರ‍್ಣ ಕ್ರಿಯಾಪದಗಳು
ವಾಕ್ಯದಲ್ಲಿನ ಗಟಕಗಳ ನಡುವಿನ ಒಪ್ಪಂದ
ವಾಕ್ಯದ ಅನುಕ್ರಮ
ವಾಕ್ಯದ ಗಟಕಗಳ ನಡುವಿನ ಸಂಬಂದ
ವಾಕ್ಯದ ಗಟಕಗಳು
ಕಿರುವಾಕ್ಯಗಳು
ವಾಕ್ಯವೆಂಬ ಮಾಯಾಜಾಲ
ಕನ್ನಡ ಸಂದಿಗಳು
ಸಂದಿಯ ಕೂಟ
‘ಮನಿ’, ’ಮನೆ’, ‘ಮನ’, ‘ಮನಯ್’
ಕನ್ನಡದ ವಿಬಕ್ತಿಗಳು
ಕಾರಕ-ವಿಬಕ್ತಿ
ಕನ್ನಡದಲ್ಲಿ ವಚನ ವ್ಯವಸ್ತೆ
ಬಹು-ವಚನ
ಕನ್ನಡದಲ್ಲಿ ಲಿಂಗವು ತೆರತೆರ
ಲಿಂಗಮೆನಿತು ತೆರಂ
ಲಿಂಗವೆಂದರೆ
ಕಾಲದ ಕಟ್ಟಳೆ
ತೋರುಗವೆಂಬ ಮಾಯಕ
ಕನ್ನಡದಾಗ ಕಾಲನಿರ‍್ವಹಣೆ
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಸಾಮಾಜಿಕ ಬೆಳವಣಿಗೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದ ರಚನೆಯ ಗಟಕಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ಕನ್ನಡದಾಗ ಗ್ ಜ್ ಡ್ ದ್ ಬ್ ದ್ವನಿಗಳು - ಇತ್ತೀಚಿನ ಬೆಳವಣಿಗೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಅಪರೂಪದ ವರ‍್ತ್ಸ-ತಾಲವ್ಯ ದ್ವನಿಗಳು : ‘ಚ್’ ಮತ್ತು ‘ಜ್’
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1
ಬಾಶೆಯ ಬೆಳವಣಿಗೆ-ಬದಲಾವಣೆ
ಮೂಲಕನ್ನಡ
ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಕನ್ನಡದಾಗ ದ್ವನಿವಿಗ್ನಾನ
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು

 

MORE NEWS

ಹಂಗಿನರಮನೆಯ ಹೊರಗೆ ಕಥೆಯಲ್ಲಿ ಪ್ರೇಮ ವೈಫಲ್ಯದ ವೈರುಧ್ಯದ ಮುಖಗಳು

13-03-2025 ಬೆಂಗಳೂರು

"ಪ್ರಶಸ್ತಿ ಪುರಸ್ಕಾರಗಳಿಂದ ದೂರವಿದ್ದ ಇವರು ಸರಳ ಸಜ್ಜನಿಕೆಯ ವ್ಯಕ್ತಿತ್ವ ಇವರ ಹಂಗಿನರಮನೆಯ ಹೊರಗೆ ಕಥೆಯು &ldqu...

ವಿಶ್ವರಂಗಭೂಮಿ ದಿನಾಚರಣೆ ಮತ್ತು ಕುಸಿಯಿತ್ತಿರುವ ರಂಗಮೌಲ್ಯಗಳು

09-03-2025 ಬೆಂಗಳೂರು

"ರಂಗಭೂಮಿ ಎಂದರೆ ಕೇವಲ ನಾಟಕಗಳ ಪ್ರದರ್ಶನ ಮಾತ್ರವಲ್ಲ. ಅದೊಂದು ಬಹುತ್ವ ಆಯಾಮಗಳ ಜೀವನ ಪ್ರೀತಿ ಹುಟ್ಟಿಸುವ ಜನಸಂಸ...

ಜಿ.ಎಸ್ ಸದಾಶಿವರ ಕಥೆ 'ಹ್ಯಾಂಗೊವರ್ ನಲ್ಲಿ ಮನದ ದ್ವಂದ್ವತೆ'

06-03-2025 ಬೆಂಗಳೂರು

"ಪತ್ರಿಕೋದ್ಯಮದ ಮೂಲಕ ತಮ್ಮ ಬದುಕನ್ನು ರೂಪಿಸಿಕೊಂಡ ಇವರು ಸಂಯುಕ್ತ ಕರ್ನಾಟಕ,ಪ್ರಜಾವಾಣಿ,ಮಯೂರ,ಸುಧಾ, ಕನ್ನಡಪ್ರಭ...