ಓದುಗನನ್ನೂ ಪ್ರವಾಸಕ್ಕೆ ಕರೆದೊಯ್ದ ಅಲೆದಾಟದ ಅಂತರಂಗ


"ಪ್ರವಾಸ ಕಥನವನ್ನು ಓದುವ ಮೊದಲು ಲೇಖಕರ ಮಾತನ್ನು ಅಷ್ಟಾಗಿ ಗಮನಿಸದೆ ನೇರವಾಗಿ ವಿಷಯಕ್ಕೇ ಹೋಗಿದ್ದೆ. ಬರವಣಿಗೆಯಲ್ಲಿನ ನೈಜತೆಯಿಂದಾಗಿ ಬಲುಬೇಗ ಓದನ್ನು ಪೂರ್ಣಗೊಳಿಸಿದಾಗ ಎರಡು ತಿಂಗಳುಗಳ ಸಮಯವನ್ನೂ ಈ ಬರವಣಿಗೆ ತೆಗೆದುಕೊಳ್ಳಲಿಲ್ಲ ಎಂಬುದು ಇವರು ಭರವಸೆಯ ಲೇಖಕರು ಎಂಬ ಅಭಿಪ್ರಾಯವನ್ನು ಗಟ್ಟಿಗೊಳಿಸಿತು," ಎನ್ನುತ್ತಾರೆ ಅಶ್ವಿನಿ ಕೋಡಿಬೈಲು. ಅವರು ನವೀನ್ ಕೃಷ್ಣ ಭಟ್ ಅವರ "ಅಲೆದಾಟದ ಅಂತರಂಗ" ಕೃತಿ ಕುರಿತು ಬರೆದ ಅನಿಸಿಕೆ.

ಅಲೆದಾಟದ ಅಂತರಂಗ ಪುಸ್ತಕವನ್ನು ಓದುತ್ತಾ ಹೋದಂತೆ ಆಪ್ತವಾಗುತ್ತಾ ಸಾಗುವುದು ಎಂ.ಕಾಂ. ವ್ಯಾಸಂಗ ಮಾಡುತ್ತಿರುವ ಲೇಖಕರ ಬರವಣಿಗೆಯ ಶೈಲಿ. ತಾನು ಅನುಭವಿಸಿದ ಪ್ರವಾಸದ ಅನುಭವವನ್ನು ಓದುಗ ಸ್ವತಃ ಅನುಭವಿಸುವಷ್ಟು ವಿಸ್ತಾರವಾಗಿ, ಆಕರ್ಷಕವಾಗಿ ಕಟ್ಟಿಕೊಟ್ಟಿದ್ದಾರೆ. ಪ್ರತಿಯೊಂದು ಸ್ಥಳಗಳ ಬಗೆಗಿನ ಐತಿಹಾಸಿಕ ಹಿನ್ನೆಲೆ, ರಮಣೀಯತೆ ಎಲ್ಲವನ್ನೂ ಈ ರೀತಿಯಲ್ಲಿ ಗ್ರಹಿಸಿ ಅಚ್ಚಾಗಿಸುವುದು ಸುಲಭದ ಮಾತಲ್ಲ‌. ಸೂಕ್ಷ್ಮಗ್ರಾಹಿಗಳಿಗೆ ಮಾತ್ರ ಸಾಧ್ಯ.

ಪ್ರವಾಸ ಕಥನವನ್ನು ಓದುವ ಮೊದಲು ಲೇಖಕರ ಮಾತನ್ನು ಅಷ್ಟಾಗಿ ಗಮನಿಸದೆ ನೇರವಾಗಿ ವಿಷಯಕ್ಕೇ ಹೋಗಿದ್ದೆ. ಬರವಣಿಗೆಯಲ್ಲಿನ ನೈಜತೆಯಿಂದಾಗಿ ಬಲುಬೇಗ ಓದನ್ನು ಪೂರ್ಣಗೊಳಿಸಿದಾಗ ಎರಡು ತಿಂಗಳುಗಳ ಸಮಯವನ್ನೂ ಈ ಬರವಣಿಗೆ ತೆಗೆದುಕೊಳ್ಳಲಿಲ್ಲ ಎಂಬುದು ಇವರು ಭರವಸೆಯ ಲೇಖಕರು ಎಂಬ ಅಭಿಪ್ರಾಯವನ್ನು ಗಟ್ಟಿಗೊಳಿಸಿತು. ಅನುಭವವು ಇಷ್ಟು ಸಹಜವಾಗಿ ಮೂಡಿಬರಬೇಕಾದರೆ ಪ್ರವಾಸ ಮುಗಿಸಿದಾಕ್ಷಣ ಬರವಣಿಗೆ ಪ್ರಾರಂಭಿಸಿರಬೇಕೆಂದುಕೊಂಡು ಪ್ರವಾಸ ಮಾಡಿದ ದಿನಾಂಕವನ್ನು ಹುಡುಕಿದೆ. ಲೇಖಕರು ತಮ್ಮ ಮಾತಿನಲ್ಲಿ ತಿಳಿಸಿದಂತೆ ಎರಡು ವರ್ಷಗಳ ಹಿಂದಿನ ಪ್ರವಾಸವೆಂದು ತಿಳಿದಾಗ ನಿಜಕ್ಕೂ ಅಚ್ಚರಿಯಾಯಿತು. ಟಿಪ್ಪಣಿ ಮಾಡಿಕೊಂಡಿರಬಹುದಾದರೂ ಎರಡು ವರ್ಷಗಳ ನಂತರ ಇಷ್ಟು ಸಹಜವಾಗಿ ಬರೆದಿದ್ದಾರೆಯೆಂದಾದರೆ ಪ್ರವಾಸದ ಅನುಭವಗಳನ್ನು ತನ್ನೊಳಗೆ ತುಂಬಾ ಜೋಪಾನವಾಗಿ ಇಟ್ಟುಕೊಂಡಿದ್ದಾರೆ ಎನಿಸಿತು.

ಲೇಖಕರು ಪ್ರಕೃತಿ ಪ್ರೇಮಿಯೂ, ಪ್ರತಿಯೊಂದು ವಿಚಾರದ ಬಗೆಗೂ ಆಳವಾಗಿ ತಿಳಿಯುವ ಆಸಕ್ತಿಯುಳ್ಳವರೂ, ತನ್ನದೇ ದೃಷ್ಟಿಕೋನದಿಂದ ಅದನ್ನು ವ್ಯಕ್ತಪಡಿಸುವವರೂ ಆಗಿದ್ದಲ್ಲಿ ಮಾತ್ರ ಈ ರೀತಿಯ ಬರವಣಿಗೆ ಹೊರಬರಲು ಸಾಧ್ಯ. ಅದಲ್ಲದೆ ಭಾಷಾಪ್ರೌಢಿಮೆಯನ್ನೂ ಇಲ್ಲಿ ಮೆಚ್ಚಲೇಬೇಕು. ಪುಸ್ತಕದ ಹೊರನೋಟದ ಬಗೆಗೂ ನನಗೆ ಆಸಕ್ತಿಯಿರುವುದರಿಂದ ಆ ಬಗೆಗೂ ಹೇಳಲೇಬೇಕು. ಬಹು ಆಕರ್ಷಕವಾದ ಮುಖಪುಟ ವಿನ್ಯಾಸ, ಕೈಗೆತ್ತಿಕೊಂಡಾಗ ಆಪ್ತವಾಗುವ ಸ್ಪರ್ಶ ಪುಸ್ತಕಕ್ಕಿದೆ. ಒಳಗಿರುವ ಹೂರಣದ ಪ್ರಭಾವವೂ ಇದಕ್ಕೆ ಕಾರಣ ಅಂದುಕೊಂಡಿದ್ದೇನೆ.

ಮತ್ತೊಂದು ತಮಾಷೆಯೆನಿಸಿದರೂ ಸತ್ಯವಾದ ವಿಚಾರವೆಂದರೆ ವಾಹನ ಪ್ರಯಾಣದಲ್ಲಿ ದೊಡ್ಡ ವಾಂತಿ ಬುರುಡೆಯಾದ ನನಗೆ ಅಲ್ಲಲ್ಲಿ ಬರುವ ಹೊಟ್ಟೆ ತೊಳೆಸುವಿಕೆ, ವಾಂತಿಯ ಸನ್ನಿವೇಶಗಳು ನಾನೇ ಪ್ರವಾಸಕ್ಕೆ ತೆರಳಿದ ಅನುಭವವನ್ನು ಮತ್ತಷ್ಟು ಹೆಚ್ಚಿಸಿತು.

ಒಟ್ಟಿನಲ್ಲಿ ಪ್ರವಾಸ ಕಥನಗಳ ಸಾಲಿನಲ್ಲಿ ಒಳ್ಳೆಯ ರೀತಿಯಲ್ಲಿ ಗುರುತಿಕೊಳ್ಳುವಂತಿದೆ ಈ ಸುಂದರವಾದ ಪುಸ್ತಕ. ಲೇಖಕರ ಸಾಹಿತ್ಯ ಕೃಷಿ ಮತ್ತಷ್ಟು ಬೆಳೆಯಲೆಂಬ ಸದಾಶಯಗಳೊಂದಿಗೆ.....

MORE FEATURES

ಅಕ್ಕಿಯಿದ್ದಲ್ಲಿ ಹಕ್ಕಿಗಳು ಬರುತ್ತವೆ...

11-04-2025 ಬೆಂಗಳೂರು

"ಬಹು ಆಯಾಮದ ವ್ಯಕ್ತಿತ್ವದ, ವೃತ್ತಿಯಿಂದ ನಿವೃತ್ತಿಯಾದರೂ ಪ್ರವೃತ್ತಿಯಿಂದ ಸದಾ ಚಟುವಟಿಕೆಯುಳ್ಳ, ಕ್ರಿಯಾಶೀಲಗುಣವ...

ಒಂದು ಸಮುದಾಯವು ತನ್ನ ಒಳಿತಿಗಾಗಿ ಶ್ರಮಿಸಿದವರನ್ನು ಆರಾಧಿಸುವುದು ಸಾಮಾನ್ಯ

11-04-2025 ಬೆಂಗಳೂರು

"‘ಮ್ಯಾಸಬೇಡರ ಚಾರಿತ್ರಿಕ ಕಥನ’ ಎಂಬ ಪ್ರಸ್ತುತ ಕೃತಿಯು ಮ್ಯಾಸಬೇಡರ ಕುಲಮೂಲ, ಸಾಂಸ್ಕೃತಿಕ ವೀರರು, ...

ಪ್ರಯೋಗಾತ್ಮಕ ಹಾಗು ಸಹಜ ಹರಿವಿನ ಕಥೆಗಳ ನಡುವೆ 

11-04-2025 ಬೆಂಗಳೂರು

"ಪಿತೃಪ್ರಧಾನ ವ್ಯವಸ್ಥೆಯಲ್ಲಿ ಮತ್ತೆ ಮತ್ತೆ ಕಾಣಸಿಗುವ ಹೆಣ್ಣಿನ ಪಾವಿತ್ಯ್ರತೆಯ ಪ್ರಶ್ನೆ ಹಾಗೂ ಅಸಮ ದಾಂಪತ್ಯದಲ್...