ನ. 21 ರಿಂದ ನ. 24 ರವರೆಗೆ ‘ಪಿ. ಶೇಷಾದ್ರಿ ಸಿನಿಮಾಲೋಕನ’

Date: 18-11-2024

Location: ಬೆಂಗಳೂರು


ಬೆಂಗಳೂರು: ಅಂಕಿತ ಪ್ರಕಾಶನ, ಚಿತ್ರಸಮೂಹ, ಸುಚಿತ್ರಾ ಫಿಲಂ ಸೊಸೈಟಿ ಸಹಯೋಗದಲ್ಲಿ ವಾರ್ತಾ ಮತ್ತು ಸಾರ್ವಜನಿಕರ ಸಂಪರ್ಕ ಇಲಾಖೆ ಸಹಕಾರದಲ್ಲಿ ‘ಪಿ. ಶೇಷಾದ್ರಿ ಸಿನಿಮಾವಲೋಕನ’ ಕಾಯಕ್ರಮವನ್ನು 2024 ನ. 21ರಿಂದ ನ. 24ರವರೆಗೆ ಬನಶಂಕರಿಯ ಸುಚಿತ್ರ ಫಿಲಂ ಸೊಸೈಟಿಯಲ್ಲಿ ಹಮ್ಮಿಕೊಂಡಿದ್ದು, ಕಾರ್ಯಕ್ರಮದಲ್ಲಿ ಚಿತ್ರೋತ್ಸವ, ಎಂಟು ಚಲನಚಿತ್ರಗಳ ಪ್ರದರ್ಶನ, ಸಿನಿಮಂಥನ, ಪುಸ್ತಕ ಲೋಕಾರ್ಪಣೆ ಹಾಗೂ ನಾಲ್ಕು ಸಂವಾದ ಗೋಷ್ಠಿಗಳು ನಡೆಯಲಿದೆ.

ನವೆಂಬರ್ 21 ಗುರುವಾರದಂದು 2000ರಲ್ಲಿ ಬಿಡುಗಡೆಗೊಂಡ ‘ಮುನ್ನುಡಿ’ ಚಿತ್ರ ಪ್ರದರ್ಶನವು ಸಂಜೆ 4 ಗಂಟೆಗೆ ಸುಚಿತ್ರ ಫಿಲಂ ಸೊಸೈಟಿಯಲ್ಲಿ ನಡೆಯಲಿದೆ. ಚಿತ್ರ ಪ್ರದರ್ಶನ ಕಾರ್ಯಕ್ರಮದಲ್ಲಿ ಸುಚಿತ್ರ ಫಿಲಂ ಸೊಸೈಟಿಯ ಅಧ್ಯಕ್ಷ ಹೆಚ್.ಎನ್. ನರಹರಿರಾವ್ ಅವರು ಆಶಯ ನುಡಿಗಳನ್ನಾಡುವರು. ಇಳೀ ಸಂಜೆ 6 ಗಂಟೆಗೆ 2010 ರಲ್ಲಿ ಬಿಡುಗಡೆಗೊಂಡ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ‘ಬೆಟ್ಟದ ಜೀವ’ ಕುರಿತು ‘ಬರಹದಿಂದ ತೆರೆಗೆ’ ವಿಷಯದಲ್ಲಿ ಚಿತ್ರನಿರ್ದೇಶಕ ಜಯತೀರ್ಥ, ಲೇಖಕ ಎಂ.ಆರ್. ದತ್ತಾತ್ರಿ ಅವರೊಂದಿಗೆ ಮಾತು-ಕತೆ. ನಡೆಸಿಕೊಡುವವರು ಪತ್ರಕರ್ತ ಬಿ.ಎಂ. ಹನೀಫ್. ಸಂಜೆ 7 ಗಂಟೆಗೆ ಸುಚಿತ್ರ ಫಿಲಂ ಸೊಸೈಟಿಯಲ್ಲಿ ಚಿತ್ರ ಪ್ರದರ್ಶನ. ಈ ವೇಳೆಯಲ್ಲಿ ಚಿತ್ರಗಳ ಕಲಾವಿದರು, ತಂತ್ರಜ್ಞರು ಉಪಸ್ಥಿತರಿರುವರು.

ನವೆಂಬರ್ 22 ಶುಕ್ರವಾರದಂದು 2008ರಲ್ಲಿ ಬಿಡುಗಡೆಗೊಂಡ ‘ವಿಮುಕ್ತಿ’ ಚಿತ್ರ ಪ್ರದರ್ಶನ ಸಂಜೆ 4 ಗಂಟೆಗೆ ನಡೆಯಲಿದೆ. 2011ರಲ್ಲಿ ಬಿಡುಗಡೆಗೊಂಡ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ‘ಭಾರತ್ ಸ್ಟೋರ್‍ಸ್’(2013) ಸಂಜೆ 7 ಗಂಟೆಗೆ ಪ್ರದರ್ಶನಗೊಳ್ಳಲಿದ್ದು, ಸಂಜೆ 6 ಗಂಟೆಯಿಂದ ‘ಸಂಕಲನ -ಸಂಗೀತ-ಸಂಯೋಜನೆ’ ಕುರಿತು ಸಂಗೀತ ನಿರ್ದೇಶಕ ಪ್ರವೀಣ್ ಗೋಡ್ಖಿಂಡಿ, ಸಂಕಲನಕಾರ ಗುಣಶೇಖರ್ ಅವರೊಂದಿಗೆ ಮಾತುಕತೆ ನಡೆಯಲಿದೆ. ನಡೆಸಿಕೊಡುವವರು ಪತ್ರಕರ್ತೆ ಪ್ರಿಯಾ ಕೆರ್ವಾಶೆ. ಚಿತ್ರ ಪ್ರದರ್ಶನ ಸಂದರ್ಭದಲ್ಲಿ ಚಿತ್ರಗಳ ಕಲಾವಿದರು, ತಂತ್ರಜ್ಞರು ಉಪಸ್ಥಿತರಿರುವರು.

ನವೆಂಬರ್ 23 ಶನಿವಾರದಂದು 2019 ರಲ್ಲಿ ಬಿಡುಗಡೆಗೊಂಡ ‘ಮೋಹನದಾಸ’ ಚಿತ್ರ ಪ್ರದರ್ಶನವು ಸಂಜೆ 4 ಗಂಟೆಗೆ. 2018 ರಲ್ಲಿ ಬಿಡುಗಡೆಗೊಂಡ ‘ಮೂಕಜ್ಜಿಯ ಕನಸುಗಳು’ ಸಂಜೆ 7 ಗಂಟೆಗೆ ಪ್ರದರ್ಶನಗೊಳ್ಳಲಿದ್ದು, ಸಂಜೆ 6 ಗಂಟೆಯಿಂದ ‘ಬಿಂಬ ಮಂಥನ’ ಕುರಿತು ಸಿನಿಮಾ ವಿಶ್ಲೇಷಕ ವಿದ್ಯಾಶಂಕರ್, ಛಾಯಾಗ್ರಾಹಕ ಜಿ.ಎಸ್. ಭಾಸ್ಕರ್ ಮಾತನಾಡಲಿದ್ದಾರೆ. ನಡೆಸಿಕೊಡುವವರು ಸಿನಿಮಾ ವಿದ್ಯಾರ್ಥಿ ವೀಣಾ. ಈ ಕಾರ್ಯಕ್ರಮದ ಸಂಚಾಲಕರು ಕವಿ ಸುಕನ್ಯ ಮಾರುತಿ.

ನವೆಂಬರ್ 24 ಭಾನುವಾರದಂದು 2013 ರಲ್ಲಿ ಬಿಡುಗಡೆಗೊಂಡ `ಡಿಸೆಂಬರ್-1' ಚಿತ್ರ ಪ್ರದರ್ಶನವು ಬೆಳಗ್ಗೆ 10 ಗಂಟೆಗೆ. ಮಧ್ಯಾಹ್ನ 12 ಗಂಟೆಗೆ ‘ದೃಶ್ಯ ದರ್ಶನ’ ಕುರಿತು ಚಿತ್ರನಿರ್ದೇಶಕ ಗಿರೀಶ್ ಕಾಸರವಳ್ಳಿ, ಲೇಖಕ ಜೋಗಿ ಮಾತನಾಡಲಿದ್ದಾರೆ. ನಡೆಸಿಕೊಡುವವರು ಚಿತ್ರನಿರ್ದೇಶಕಿ ರೂಪಾರಾವ್. ಸಂಚಾಲಕ ಚಿತ್ರನಿರ್ದೇಶಕ ಬಿ.ಎಸ್. ಲಿಂಗದೇವರು. ಚಿತ್ರ ಪ್ರದರ್ಶನದಲ್ಲಿ ಚಿತ್ರಗಳ ಕಲಾವಿದರು, ತಂತ್ರಜ್ಞರು ಉಪಸ್ಥಿತರಿರುವರು.

ಮಧ್ಯಾಹ್ನ 2.00ರಿಂದ 3.00 ರವರೆಗೆ 2006ರಲ್ಲಿ ಬಿಡುಗಡೆಗೊಂಡ ‘ಭೇಟಿ’ ಚಲನಚಿತ್ರದ ಕುರಿತು ಪಿ. ಶೇಷಾದ್ರಿ ಮತ್ತು ಚಿತ್ರತಂಡದೊಂದಿಗೆ ಸಂವಾದ. ನಿರ್ವಹಿಸುವವರು ಪತ್ರಕರ್ತೆ ವಿದ್ಯಾರಶ್ಮಿ ಪೆಲತ್ತಡ್ಕ. 3.00 ಗಂಟೆಯಿಂದ ಚಲನಚಿತ್ರ ಪ್ರದರ್ಶನ. ಸಂಜೆ 5 ಗಂಟೆಯಿಂದ ಗಿರೀಶ್ ಕಾಸರವಳ್ಳಿ, ರಾಜೇಂದ್ರಸಿಂಗ್ ಬಾಬು, ಟಿ.ಎಸ್ ನಾಗಾಭರಣ, ಟಿ.ಎನ್. ಸೀತಾರಾಮ್ ಇವರ ಸಮ್ಮುಖದಲ್ಲಿ ಪುಸ್ತಕಗಳ ಲೋಕಾರ್ಪಣೆ. ಚಿತ್ರ ಪ್ರದರ್ಶನ ವೇಳೆಯಲ್ಲಿ ಬಿ. ಜಯಶ್ರೀ, ಜಯಮಾಲ ರಾಮಚಂದ್ರ, ತಾರಾ, ಸುಧಾರಾಣಿ, ಭಾವನಾ, ನಿವೇದಿತಾ, ಲಕ್ಷ್ಮೀ ಗೋಪಾಲಸ್ವಾಮಿ, ಸಿರಿ ರವಿಕುಮಾರ್ ಮತ್ತು ನೀತೂ ಉಪಸ್ಥಿತರಿರುವರು.

MORE NEWS

ಬದಲಾವಣೆಯ ಸೂಕ್ಷ್ಮ ಅರಿತರೆ ಮಾತ್ರ ಆಡಳಿತ ಸುಸೂತ್ರವಾಗಿ ನಡೆಯಲು ಸಾಧ್ಯ : ಅನಿಲ್ ಗೋಕಾಕ್

23-11-2024 ಬೆಂಗಳೂರು

ಬೆಂಗಳೂರು: 'ವಿನಯ ಮತ್ತು ಅಧಿಕಾರ ಒಟ್ಟಿಗೆ ಹೋಗುವುದಿಲ್ಲ. ಅಧಿಕಾರ ಬಂದರೆ ಅಹಂಕಾರ ಒಟ್ಟೊಟ್ಟಿಗೆ ಬರುತ್ತದೆ. ಕೇಂದ...

ಬೇಲೂರು ರಘುನಂದನ್ ಅವರಿಗೆ `ಬಿಸ್ಮಿಲ್ಲಾ ಖಾನ್ ಪುರಸ್ಕಾರ-2022’ ಪ್ರಶಸ್ತಿ ಪ್ರದಾನ

22-11-2024 ಬೆಂಗಳೂರು

ಬೆಂಗಳೂರು: ದೆಹಲಿಯ ಸಂಗೀತ ನಾಟಕ ಅಕಾಡೆಮಿಯಿಂದ ನೀಡುವ ಬಿಸ್ಮಿಲ್ಲಾ ಖಾನ್ ಪುರಸ್ಕಾರ-2022ಕ್ಕೆ ಕವಿ, ನಾಟಕಕಾರ ಬೇಲೂರು ...

ಎಲ್ಲಾ ಲೋಕಗಳ ತಾಯಿಬೇರು ಜಾನಪದ ಲೋಕ; ಹಂಪನಾ

22-11-2024 ಬೆಂಗಳೂರು

ಬೆಂಗಳೂರು: ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ‘ನಾಡೋಜ ಎಚ್.ಎಲ್. ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮ...